Bridal Makeup : ಮದುವೆ ಮೇಕಪ್ ಮಾಡುವಾಗ ಈ ತಪ್ಪು ಖಂಡಿತ ಮಾಡಬೇಡಿ!!!
ಇಂದಿನ ದಿನಗಳಲ್ಲಿ ಮುಖಕ್ಕೆ ಮೇಕಪ್ ಹಾಕದೇ ಇರುವವರು ಯಾರೂ ಇಲ್ಲ. ಅದರಲ್ಲೂ ಮದುವೆಯ ದಿನ ವಧು ಮೇಕಪ್ ಹಾಕದೇ ಇರಲು ಸಾಧ್ಯವಿಲ್ಲ, ಹೆಚ್ಚಾಗಿ ಮೇಕಪ್ ಬಳಸುತ್ತಾರೆ. ಅದಕ್ಕಾಗಿ ಮೇಕಪ್ ಆರ್ಟಿಸ್ಟ್ ಕೂಡ ಇರುತ್ತಾರೆ. ಇನ್ನೂ ಈ ಮೇಕಪ್ ಮಾಡಬೇಕಾದರೆ ತಿಳಿದುಕೊಳ್ಳಬೇಕಾದ ಕೆಲವು ಅಂಶಗಳಿವೆ. ಮೇಕಪ್ ಮಾಡಬೇಕಾದರೆ ಏನು ಮಾಡಬೇಕು ಹಾಗೂ ಏನು ಮಾಡಬಾರದು ಎಂಬುದರ ಬಗ್ಗೆ ಸೂಕ್ತ ಸಲಹೆ ಇಲ್ಲಿದೆ.
• ನಿಮ್ಮ ಚರ್ಮವನ್ನು ಮೊದಲೇ ಸಿದ್ದ ಮಾಡಿಕೊಳ್ಳಿ –
ಅನೇಕ ವಧುಗಳು ಮೇಕಪ್ ಮಾಡಿಸಿಕೊಳ್ಳುವಾಗ ಮೊದಲು ಅಗತ್ಯವಾದ ಚರ್ಮದ ಆರೈಕೆಯ ಕ್ರಮಗಳನ್ನು ಅನುಸರಿಸಲು ಮರೆಯುತ್ತಾರೆ. ಕ್ಲೀನಿಂಗ್, ಟೋನಿಂಗ್ ಮತ್ತು ಮಾಯಿಶ್ಚರೈಸಿಂಗ್ ಇದೆಲ್ಲಾ ದೈನಂದಿನ ದಿನಚರಿಯ ಭಾಗವಾಗಿರಬೇಕು. ಈ ರೀತಿ ಮಾಡಿದರೆ ಮುಖ ಕಲ್ಮಶಗಳಿಂದ ಮುಕ್ತವಾಗಿರುತ್ತದೆ. ಹಾಗೂ ಮೇಕಪ್ ನಿಮ್ಮ ಚರ್ಮದ ಮೇಲೆ ಸರಿಯಾಗಿ ಕೂರುತ್ತದೆ. ಇನ್ನೂ, ಮೇಕಪ್ ಸರಿಯಾಗಿ ಇದ್ದರೆ ಮಾತ್ರ ಮುಖ ಸುಂದರವಾಗಿ ಕಾಣುತ್ತದೆ.
• ನಿಮ್ಮ ಕಣ್ಣುಗಳಿಗೆ ಹೆಚ್ಚಿನ ಗಮನವನ್ನು ನೀಡಿ –
ಕಣ್ಣಿನ ಮೇಕಪ್ ಮುಖದ ಸುಂದರತೆಗೆ ಕೂಡ ಕಾರಣ ಅಥವಾ ಕೆಲವೊಂದು ಬಾರಿ ಇದು ಮುಖದ ಸೌಂದರ್ಯವನ್ನು ಹಾಳುಮಾಡಬಲ್ಲದು. ಈ ಎರಡನ್ನೂ ಮಾಡುವ ಶಕ್ತಿ ಕಣ್ಣಿನ ಮೇಕಪ್ಗೆ ಇದೆ. ಮೇಕಪ್ ಅನ್ನು ಹಚ್ಚುವ ಮೊದಲು ಸರಿಯಾದ ಕನ್ಸೀಲರ್ ಅನ್ನು ಆರಿಸಿ. ಮದುವೆಗೆ ಮೊದಲು ಒಮ್ಮೆ ಟ್ರೈಯಲ್ ನೋಡುವುದು ಒಳಿತು. ಯಾಕಂದ್ರೆ ಯಾವುದು ಚೆನ್ನಾಗಿ ಕಾಣುತ್ತದೆಯೋ ಅದನ್ನೇ ಮದುವೆಯ ದಿನ ಆಯ್ಕೆ ಮಾಡಬಹುದು.
• ನಿಮ್ಮ ಬೇಸ್ ಅನ್ನು ಸರಿಯಾಗಿ ಇರಬೇಕು –
ಪ್ರೈಮರ್ ನಿಮ್ಮ ತ್ವಚೆಯನ್ನು ಕ್ಯಾನ್ವಾಸ್ನಂತೆ ಸಿದ್ಧಪಡಿಸುತ್ತದೆ. ಇದು ನಿಮ್ಮ ಮುಖದಲ್ಲಿ ಮೇಕಪ್ ಹೆಚ್ಚು ಕಾಲ ಉಳಿಯುವಂತೆ ಮಾಡುತ್ತದೆ. ಮೇಕಪ್ನ ಮುಖ್ಯವಾದ ಅಂಶಗಳೆಂದರೆ,ಸರಿಯಾದ ಬೇಸ್ ಶೇಡ್ ಆಯ್ಕೆ ಮಾಡುವುದು. ನಿಮ್ಮ ಚರ್ಮದ ಟೋನ್ಗೆ ಸರಿಯಾಗುವುದನ್ನೇ ಆಯ್ಕೆ ಮಾಡಿ. ಒಂದು ದಪ್ಪ ಕೋಟ್ ಬೇಸ್ ಬದಲಿಗೆ, ತೆಳುವಾದ ಕೋಟ್ ಅನ್ನು ಹಚ್ಚಿ.
• ಲಿಪ್ಸ್ಟಿಕ್ ಶೇಡ್ ಸರಿಯಾಗಿ ಆಯ್ಕೆಮಾಡಿ –
ಹೆಚ್ಚಾಗಿ ಎಲ್ಲರೂ ತಮ್ಮ ಮೇಕಪ್ ಅನ್ನು ಸರಳ ಮತ್ತು ನೈಸರ್ಗಿಕವಾಗಿರಿಸಿಕೊಳ್ಳಲು ಬಯಸುತ್ತಾರೆ. ಈ ಸಮಯದಲ್ಲಿ ಲಿಪ್ಸ್ಟಿಕ್ ಶೇಡ್ ಆಯ್ಕೆ ಮಾಡುವುದು ಸಹ ತುಂಬಾ ಮುಖ್ಯವಾಗುತ್ತದೆ. ಕೆಲವರಿಗೆ ಡಾರ್ಕ್ ಶೇಡ್ ಬೇಕಾಗುತ್ತದೆ. ಇನ್ನೂ ಕೆಲವರಿಗೆ ಲೈಟ್ ಶೇಡ್ ಬೇಕಾಗುತ್ತದೆ.
• ಬೇಸ್ ಹೆಚ್ಚು ದಪ್ಪ ಇರಬಾರದು –
ಎಲ್ಲರಿಗೂ ಮೇಕಪ್ ಮುಖದಲ್ಲಿ ಪೂರ್ತಿ ದಿನ ಉಳಿಯಬೇಕು ಎನ್ನುವುದೇ ಆಗಿರುತ್ತದೆ. ಹೆಚ್ಚಿನವರು ಸಾಧ್ಯವಾದಷ್ಟು ಕಾಲ ಮೇಕಪ್ ಉಳಿಯುವಂತೆ ಮಾಡಲು ಹಲವಾರು ಲೇಯರ್ ಬೇಸ್ ಬಳಸುತ್ತಾರೆ. ಇದು ಬಹಳ ದೊಡ್ಡ ತಪ್ಪು. ಇದನ್ನು ಬಳಸಿದರೆ ಅತಿಯಾಗಿ ಮೇಕಪ್ ಮಾಡಿದಂತೆ ಕಾಣುತ್ತದೆ. ಹಾಗೂ ಫೋಟೋದಲ್ಲಿ ಸಹ ಮುಖ ಸುಂದರವಾಗಿ ಕಾಣುವುದಿಲ್ಲ.
• ಸನ್ಸ್ಕ್ರೀನ್ ಅನ್ನು ಹಚ್ಚಬೇಡಿ –
ಮದುವೆಯ ದಿನದಂದು ಸನ್ಸ್ಕ್ರೀನ್ ಹಚ್ಚದಿರುವುದು ಒಳ್ಳೆಯದು. ಏಕೆಂದರೆ ಇದು ಕ್ಯಾಮೆರಾದ ಫ್ಲ್ಯಾಷ್ನೊಂದಿಗೆ ಮುಖವನ್ನು ತುಂಬಾ ಬಿಳಿಯಾಗಿ ಕಾಣುವಂತೆ ಮಾಡುತ್ತದೆ. ಹಾಗೂ ಇದು ಚರ್ಮವನ್ನು ಜಿಗುಟಾಗಿ ಕಾಣುವಂತೆ ಮಾಡಬಹುದು. ಬದಲಿಗೆ SPF ಹೊಂದಿರುವ ಹಗುರವಾದ ಮಾಯಿಶ್ಚರೈಸರ್ಗಳನ್ನು ಬಳಸಿ.
• ಹಿಂದಿನ ದಿನ ವ್ಯಾಕ್ಸ್ ಅಥವಾ ಫೇಶಿಯಲ್ ಮಾಡಬೇಡಿ –
ಈ ರೀತಿ ಮಾಡಿದ್ರೆ ಚರ್ಮ ಒಣಗುತ್ತದೆ. ಮತ್ತು ಉರಿಯೂತವನ್ನು ಉಂಟುಮಾಡಬಹುದು. ಕನಿಷ್ಠ ಐದು ದಿನಗಳ ಮುಂಚಿತವಾಗಿ ವ್ಯಾಕ್ಸ್ ಮತ್ತು ಫೇಶಿಯಲ್ ಮಾಡಿಸಿಕೊಳ್ಳಬೇಕು. ತುಟಿ ಪ್ರದೇಶದ ಬಗ್ಗೆ ಸಹ ಗಮನವಿರಲಿ ಕನ್ಸೀಲರ್ ನಿಮ್ಮ ತುಟಿಯ ಬಣ್ಣವನ್ನು ಹೆಚ್ಚು ಕಾಲ ಉಳಿಯಲು ಸಹಾಯ ಮಾಡುತ್ತದೆ. ಹಾಗೆಯೇ, ನಿಮ್ಮ ತುಟಿಗಳ ಸುತ್ತ ಕಪ್ಪು ಬಣ್ಣವಿದ್ದರೆ, ಅದನ್ನು ಮುಚ್ಚಿ ನಂತರ ಲಿಪ್ಸ್ಟಿಕ್ ಹಚ್ಚಬೇಕು. ಇಷ್ಟೆಲ್ಲಾ ಅಂಶಗಳನ್ನು ಪಾಲಿಸಿದರೆ ಮದುವೆಯ ದಿನ ಮುಖ ಸುಂದರವಾಗಿ ಹೊಳೆಯುತ್ತದೆ.