Home Health ಮೈಯೋಸಿಟಿಸ್ ಕಾಯಿಲೆಯ ಬಗ್ಗೆ ನಿಮಗೆಷ್ಟು ಗೊತ್ತು?

ಮೈಯೋಸಿಟಿಸ್ ಕಾಯಿಲೆಯ ಬಗ್ಗೆ ನಿಮಗೆಷ್ಟು ಗೊತ್ತು?

Hindu neighbor gifts plot of land

Hindu neighbour gifts land to Muslim journalist

ಪ್ರಸ್ತುತ ಚಿತ್ರ ವಿಚಿತ್ರ ಕಾಯಿಲೆಗಳನ್ನು ಎದುರಿಸುವ ಕಾಲವಾಗಿದೆ. ಯಾಕೆಂದ್ರೆ ಜನರು ನಡೆಸುವ ಜೀವನ ಶೈಲಿಯೇ ಹಾಗಿದೆ. ಬ್ಯುಸಿ ಜೀವನದಲ್ಲಿ ತಮ್ಮ ಆರೋಗ್ಯದ ಬಗ್ಗೆ ಕೇರ್ ಮಾಡಿಕೊಳ್ಳುವುದು ತುಂಬಾ ಕಠಿಣ. ಹೀಗಾಗಿ  ಹೆಸರು ಕೇಳದೆ ಇರುವ ಕಾಯಿಲೆಗಳನ್ನು ಎದುರಿಸುವುದು ಜನರನ್ನು ಬಿಕ್ಕಟ್ಟಿನ ಪರಿಸ್ಥಿತಿಗೆ ತಂದಿಟ್ಟಂತಾಗಿದೆ.

ನಟಿ ಸಮಂತಾ ಮೈಯೋಸಿಟಿಸ್ ಕಾಯಿಲೆಯಿಂದ ಬಳಲುತ್ತಿರುವ ಬಗ್ಗೆ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಕಾಯಿಲೆಯಲ್ಲಿ ಉರಿಯೂತವು ದೇಹದೊಳಗೆ ಪ್ರವೇಶಿಸಲು ಪ್ರಾರಂಭಿಸುತ್ತದೆ. ಈ ಊತವು ಸಾಮಾನ್ಯವಾಗಿ ಭುಜಗಳು, ತೋಳುಗಳು, ಕಾಲುಗಳು, ತೊಡೆಗಳು, ತೊಡೆಸಂದು ಮತ್ತು ಸೊಂಟದ ಸ್ನಾಯುಗಳಲ್ಲಿ ಕಂಡುಬರುತ್ತದೆ. ಆದರೆ ಇದು ಅನ್ನನಾಳ, ಹೃದಯ ಮತ್ತು ಶ್ವಾಸಕೋಶದ ಮೇಲೂ ಪರಿಣಾಮ ಬೀರುವ ಸಾಧ್ಯತೆಗಳು ಹೆಚ್ಚು.

ಮೈಯೋಸಿಟಿಸ್ ಎನ್ನುವುದೇ ಒಂದು ಯಾವುದೇ ರೀತಿಯ ಕಾಯಿಲೆಯಲ್ಲ.  ನಾನಾ ರೀತಿಯ ಕಾಯಿಲೆಗಳು ದೇಹಕ್ಕೆ ಸೇರಿಕೊಂಡಾಗ ಉಂಟಾಗುವ ಒಂದು ಪರಿಸ್ಥಿತಿಯಾಗಿದೆ. ಈ ಮೈಯೋಸಿಟಿಸ್ ಉಂಟಾಗುವಾಗ ಯಾವೆಲ್ಲಾ ಅನಾರೋಗ್ಯ ಆರಂಭವಾಗುತ್ತದೆ ಗೊತ್ತಾ?

ಪಾಲಿಮೋಸಿಟಿಸ್,ಡರ್ಮಟೊಮಿಯೊಸಿಟಿಸ್,ದೇಹದೊಳಗಿನ ಮೈಯೋಸಿಟಿಸ್, ಜುವೆನೈಲ್ ಮೈಯೋಸಿಟಿಸ್, ವಿಷಕಾರಿ ಮೈಯೋಸಿಟಿಸ್ ಈ ರೀತಿಯಾದಂತಹ ವಿಭಿನ್ನ ಲಕ್ಷಣಗಳು ಕಾಣುತ್ತಿದೆ. ಆದರೆ ಹೆದರುವುದು ಬೇಡ. ಯಾಕೆಂದ್ರೆ ಇವೆಲ್ಲವೂ ದೇಹದ ಊತದಲ್ಲಿ ಕಾಣಿಸಿಕೊಳ್ಳುವ ಬಾಧೆಗಳಾಗಿದೆ. ಜ್ವರ, ಶೀತ, ಕೆಮ್ಮು, ಸ್ನಾಯು ಸೆಳೆತ ಹೀಗೆ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.

ಈ ಅಸ್ವಸ್ಥತೆಯ ಚಿಕಿತ್ಸೆಗೆ ಮುಖ್ಯವಾಗಿ
ಇಮ್ಯುನೊಸಪ್ರೆಸಿವ್ ಡ್ರಗ್ಸ್ ಮತ್ತು ಸ್ಟೀರಾಯ್ಡ್‌ ಬಳಕೆ
ವ್ಯಾಯಾಮ, ಸ್ಟ್ರೆಚಿಂಗ್, ಯೋಗದಂತಹ ದೈಹಿಕ ಚಿಕಿತ್ಸೆಯನ್ನು ನೀಡಲಾಗುತ್ತದೆ. ಉತ್ತಮ ಆಹಾರ ಪದ್ಧತಿಯನ್ನು ಫಾಲೋ ಮಾಡುವುದರ ಮೂಲಕವೂ ರೋಗವನ್ನು ತಡೆಯಬಹುದಾಗಿದೆ.

ಹೀಗಾಗಿ ಶೀಘ್ರವೇ ವೈದ್ಯರನ್ನು ಕಾಣುವುದರ ಮೂಲಕ ರೋಗ ಪೀಡಿತದಿಂದ ಪಾರಾಗಬಹುದು.