Home latest 2023 ರಲ್ಲಿ ಯಾವ ಗಂಭೀರ ಘಟನೆ ನಡೆಯುತ್ತೆ? ಬಾಬಾ ವಂಗಾರ ಭವಿಷ್ಯವಾಣಿ ಲಿಸ್ಟ್ ಇಲ್ಲಿದೆ!!!

2023 ರಲ್ಲಿ ಯಾವ ಗಂಭೀರ ಘಟನೆ ನಡೆಯುತ್ತೆ? ಬಾಬಾ ವಂಗಾರ ಭವಿಷ್ಯವಾಣಿ ಲಿಸ್ಟ್ ಇಲ್ಲಿದೆ!!!

Hindu neighbor gifts plot of land

Hindu neighbour gifts land to Muslim journalist

ಬಾಬಾ ವಂಗಾ 1911 ರಲ್ಲಿ ಬಲ್ಗೇರಿಯಾದಲ್ಲಿ ಜನಿಸಿದ್ದು, ಆಕೆಯ ನಿಜವಾದ ಹೆಸರು ವಂಜೆಲಿಯಾ ಪಾಂಡೆವಾ ಗುಶ್ಟೆರೋವಾ. ವಾಂಗಾ ಬಾಲ್ಯದಲ್ಲಿ ದೃಷ್ಟಿ ಕಳೆದುಕೊಂಡಿದ್ದು, 1996 ರಲ್ಲಿ ಸಾಯುವ ಮೊದಲು, ಅವಳು ಅನೇಕ ಭವಿಷ್ಯವಾಣಿಗಳನ್ನು ಹೇಳಿದ್ದಾರೆ.

ವಿಶ್ವ ಪ್ರಸಿದ್ಧ ಅತೀಂದ್ರಿಯ ಮತ್ತು ಗಿಡಮೂಲಿಕೆ ತಜ್ಞ ಬಾಬಾ ವಂಗಾ ಮುಂಬರುವ ದಶಕಗಳ ಮತ್ತು ಶತಮಾನಗಳಲ್ಲಿ ಅನೇಕ ಭವಿಷ್ಯವಾಣಿಗಳನ್ನು ನುಡಿದಿದ್ದಾರೆ.

ಬಾಬಾ ವಂಗಾ ಅವರ ಅನೇಕ ಭವಿಷ್ಯವಾಣಿಗಳು ನಿಜವೆಂದು ಸಾಬೀತಾಗಿದೆ. 2022 ರಲ್ಲಿ ಅವರು ಹೇಳಿದ 2 ಭವಿಷ್ಯವಾಣಿಗಳು ನಿಜವಾಗಿವೆ. ಬಾಬಾ ವಂಗಾ ಅವರು ಕೆಲವು ದೇಶಗಳಲ್ಲಿ ನೀರಿನ ಸಮಸ್ಯೆಗಳ ಬಗ್ಗೆ ಭವಿಷ್ಯ ನುಡಿದಿದ್ದರು.

2022 ರಲ್ಲಿ ಕೆಲವು ದೇಶಗಳಲ್ಲಿ ಪ್ರವಾಹದಿಂದಾಗಿ ಪರಿಸ್ಥಿತಿ ಹದಗೆಡುತ್ತದೆ ಎಂದಿದ್ದರು. ಅದು ಕೂಡ ಸಂಭವಿಸಿದೆ. ಪೋರ್ಚುಗಲ್ ಮತ್ತು ಇಟಲಿಯಲ್ಲಿ ಅನೇಕ ಪ್ರದೇಶಗಳಲ್ಲಿ ಬರಗಾಲವಿದೆ. ಅದೇ ಸಮಯದಲ್ಲಿ, ಆಸ್ಟ್ರೇಲಿಯಾ ಮತ್ತು ಏಷ್ಯಾದ ದೇಶಗಳು 2022 ರಲ್ಲಿ ತೀವ್ರ ಪ್ರವಾಹವನ್ನು ಕಂಡಿದೆ.

ಇದೀಗ ಈ ಪ್ರಪಂಚದ ಅಂತ್ಯ ಅಥವಾ ಬೃಹತ್ ವಿನಾಶದ ಮುನ್ಸೂಚನೆಗಳ ಬಗ್ಗೆ ಭಯದ ವಾತಾವರಣವಿದ್ದು, ಬಾಬಾ ವಂಗಾ ಅವರು 2023 ರ ವರ್ಷಕ್ಕೂ ಸಾಕಷ್ಟು ಭವಿಷ್ಯ ನುಡಿದಿದ್ದಾರೆ. ಇವುಗಳಲ್ಲಿ 5 ಭವಿಷ್ಯವಾಣಿಗಳು ನಿಜವಾದರೆ ಜಗತ್ತು ತಲೆಕೆಳಗಾಗುತ್ತದೆ ಎನ್ನಲಾಗಿದ್ದು, ಮುಂದೇನು ಸಂಭವಿಸಲಿದೆಯೋ ಎಂಬ ಭಯ ಜನರಲ್ಲಿ ಸೃಷ್ಟಿಯಾಗಿದೆ.

ಬಾಬಾ ವಂಗಾ ಪ್ರಕಾರ 2023 ರಲ್ಲಿ ಸಂಭವಿಸುವ ಗಂಭೀರ ಘಟನೆಗಳ ಬಗ್ಗೆ ಹೇಳಿದ್ದು, ಅವುಗಳು ಹೀಗಿವೆ:

ಬಾಬಾ ವಂಗಾ ಪ್ರಕಾರ, ಸೌರ ಚಂಡಮಾರುತ ಅಥವಾ ಸೌರ ಸುನಾಮಿ 2023 ರಲ್ಲಿ ಸಂಭವಿಸುತ್ತದೆ. ಇದು ಗ್ರಹದ ಕಾಂತೀಯ ಗುರಾಣಿಯನ್ನು ತೀವ್ರವಾಗಿ ಹಾನಿಗೊಳಿಸುತ್ತದೆ ಎನ್ನಲಾಗಿದೆ.

ಬಾಬಾ ವಂಗಾ ಅವರ ಪ್ರಕಾರ, 2023 ರಲ್ಲಿ ಇಡೀ ಜಗತ್ತು ಕತ್ತಲೆಯಲ್ಲಿ ಮುಳುಗುತ್ತದೆ. ಭೂಮಿಯ ಮೇಲೆ ದಾಳಿಗಳು ನಡೆಯಬಹುದಾಗಿದ್ದು ಈ ಸಂದರ್ಭ ಲಕ್ಷಾಂತರ ಜನರ ಸಾವು ನೋವು ಕಂಡುಬರಲಿದೆ.

ಒಂದು ದೊಡ್ಡ ದೇಶವು ಜೈವಿಕ ಶಸ್ತ್ರಾಸ್ತ್ರಗಳಿಂದ ಜನರ ಮೇಲೆ ದಾಳಿ ನಡೆಯಲಿದೆ. ಸದ್ಯದ ಪರಿಸ್ಥಿತಿಯನ್ನು ಅವಲೋಕಿಸಿದರೆ, ರಷ್ಯಾ-ಉಕ್ರೇನ್ ಯುದ್ಧವು ಇಡೀ ಜಗತ್ತಿಗೆ ನಿಜವಾದ ಮುನ್ನೆಚ್ಚರಿಕೆಯಾಗಿದೆ. ಇದಲ್ಲದೆ, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹಲವಾರು ಬಾರಿ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸುವುದಾಗಿ ಬೆದರಿಕೆಯನ್ನು ಕೂಡ ಹಾಕಿದ್ದಾರೆ.

2023 ರ ಹೊತ್ತಿಗೆ, ಮಾನವರು ಪ್ರಯೋಗಾಲಯಗಳಲ್ಲಿ ಜನಿಸುತ್ತಾರೆ. ಇಲ್ಲಿಂದ ಜನರ ಪಾತ್ರ ಮತ್ತು ಚರ್ಮದ ಬಣ್ಣ ನಿರ್ಧರಿಸಲಾಗುತ್ತದೆ. ಇದರರ್ಥ ಜನನ ಪ್ರಕ್ರಿಯೆಯು ಸಂಪೂರ್ಣವಾಗಿ ನಿಯಂತ್ರಿಸಲ್ಪಡುತ್ತದೆ.

ಪರಮಾಣು ವಿದ್ಯುತ್ ಸ್ಥಾವರದಲ್ಲಿ ಸ್ಫೋಟ ಸಂಭವಿಸಬಹುದಾಗಿದ್ದು, ಇದರಿಂದಾಗಿ ವಿಷಕಾರಿ ಮೋಡಗಳು ಏಷ್ಯಾ ಖಂಡವನ್ನು ಆವರಿಸಲಿದೆ.ಇದರ ಪರಿಣಾಮವಾಗಿ ಅನೇಕ ದೇಶಗಳಲ್ಲಿ ಗಂಭೀರ ಕಾಯಿಲೆಗಳು ಕಾಣಿಸಿಕೊಂಡು ಪ್ರಭಾವ ಬೀರಲಿವೆ.