BBK 9 : ಬಿಗ್ ಬಾಸ್ ಮನೆಯಿಂದ ನೇಹಾ ಗೌಡ ಔಟ್!!!

ಕನ್ನಡ ಬಿಗ್ ಬಾಸ್ ಎಲ್ಲರೂ ಮೆಚ್ಚುವಂತಹ ಶೋ. ಹೋದ ವಾರ ಗೈರು ಹಾಜರಾಗಿದ್ದ ಕಿಚ್ಚ ಈ ಬಾರಿ ಮನೆಯ ವಾರದ ಎಲಿಮಿನೇಷನ್ ಮಾಡಿದ್ದಾರೆ. ಈ ವಾರ ‘ಲಕ್ಷ್ಮಿ ಬಾರಮ್ಮ’ (Lakshmi Baramma) ಖ್ಯಾತಿಯ ನೇಹಾ ಗೌಡ, ಬಿಗ್ ಬಾಸ್ ಶೋನಿಂದ ಔಟ್ ಆಗಿದ್ದಾರೆ. ಕ್ಯಾಪ್ಟನ್ಸಿ ಟಾಸ್ಕ್ ನಲ್ಲಾದರೂ ವಿನ್ ಆಗಿ ಕ್ಯಾಪ್ಟನ್ ಆಗಬೇಕೆನ್ನುವ ಆಸೆ ಕೂಡಾ ನೇಹಾ ಅವರಿಗೆ ದೊರಕಿಲ್ಲ. ಅಷ್ಟು ಮಾತ್ರವಲ್ಲ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಮನೆಯ ಮಂದಿ ಕಳುಹಿಸಿದ ಗಿಫ್ಟ್ ಕೂಡಾ ನೇಹಾಗೆ ದೊರೆಯದೇ ಹೋಯಿತು. ಈಗ ದೊಡ್ಮನೆಯ ಐದನೇ ಸ್ಪರ್ಧಿಯಾಗಿ ನೇಹಾ ಗೌಡ(Neha Gowda) ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದಾರೆ.

 

ಕನ್ನಡ ಮತ್ತು ತಮಿಳು ಧಾರಾವಾಹಿಗಳಲ್ಲಿ ನಟಿಸಿ ಕಿರುತೆರೆಯಲ್ಲಿ ಜನಪ್ರಿಯ ನಟಿ ಎನಿಸಿಕೊಂಡಿದ್ದ ನೇಹಾ, ಬಿಗ್ ಬಾಸ್ (Bigg Boss) ಮನೆಗೆ ಎಂಟ್ರಿ ಕೊಟ್ಟಿದ್ದು ಇಂದಿಗೆ ಅವರ ಬಿಗ್ ಬಾಸ್ ಮನೆಯ ಆಟ ಅಂತ್ಯಗೊಂಡಿದೆ ಎಂದೇ ಹೇಳಬಹುದು. ಮನರಂಜನೆಯಲ್ಲಿ ಸ್ವಲ್ಪ ಹಿಂದಿದ್ದ ನೇಹಾ, ಮತ್ತು ಟಾಸ್ಕ್ ಗಳಲ್ಲೂ ತಮ್ಮ ನೂರು ಪ್ರತಿಶತಃ ನೀಡಲು ಪ್ರಯತ್ನ ಪಟ್ಟಿದ್ದು, ಈಗ ಬಿಗ್ ಬಾಸ್ ಮನೆಯಿಂದ ನೇಹಾ ಹೊರ ಬಂದಿದ್ದು ಅವರ ಅಭಿಮಾನಿಗಳಿಗೆ ನಿರಾಸೆ ಮೂಡಿಸುವುದಂತೂ ಖಂಡಿತ.

ನೇಹಾ ಅವರು ಇತ್ತೀಚೆಗೆ ಅರುಣ್ ಸಾಗರ್ (Arun Sagar) ಅವರು ಹೇಳಿದ ಒಂದು ಮಾತಿಗೆ ಬಹಳ ಬೇಸರ ಮಾಡಿಕೊಂಡಿದ್ದರು ಅದುವೇ ದುರಾಸೆ ಎಂಬ ಪದಕ್ಕೆ. ಟಾಸ್ಕ್ ಆಡುವ ಮುನ್ನ ದುರಾಸೆ ಎಂದು ಹೇಳಿದ್ದಕ್ಕೆ ನೇಹಾ ಕ್ಲಾಸ್ ತೆಗೆದುಕೊಂಡಿದ್ದರು. ಈ ಬಗ್ಗೆ ವೀಕೆಂಡ್ ಪಂಚಾಯತಿಯಲ್ಲೂ ನಡೆದಿತ್ತು.

ದೊಡ್ಮನೆಯಿಂದ ಮೊದಲಿಗೆ ಐಶ್ವರ್ಯ, ನವಾಜ್, ದರ್ಶ್‌, ಮಯೂರಿ ನಂತರ ಇದೀಗ ನೇಹಾ ಗೌಡ ಹೊರ ಬಂದಿದ್ದಾರೆ. ಮುಂದಿನ ವಾರ ಇನ್ಯಾವ ಸ್ಪರ್ಧಿ ಹೊರಬರಬಹುದು ಎಂಬ ಕುತೂಹಲ ಬಿಗ್ ಬಾಸ್ ಮನೆಯ ಎಲ್ಲಾ ಸ್ಪರ್ಧಿಗಳಿಗೆ ಇರಬಹುದು. ನೇಹಾ ಗೌಡ ಎಲಿಮಿನೇಷನ್ ಗೊಂಬೆ ಫ್ಯಾನ್ಸ್ ಗೆ ಶಾಕ್ ಕೊಟ್ಟಿದಂತೂ ನಿಜ.

Leave A Reply

Your email address will not be published.