ಶಾಂಪೂ ಬಳಸುವವರೇ ಎಚ್ಚರ | ಈ ಶಾಂಪೂವಿನಲ್ಲಿ ಪತ್ತೆಯಾಗಿದೆ ಕ್ಯಾನ್ಸರ್‌ಕಾರಕ ಅಂಶಗಳು!

Share the Article

ದಿನ ಕಾಲ ಬದಲಾಗಿದೆ. ಮೊದಲೆಲ್ಲ ಸೀಗೆಕಾಯಿ ಹುಡಿಗಳಿಂದ ತಲೆ ಸ್ನಾನ ಮಾಡಿದರೆ, ಇಂದು ಶಾಂಪೂ ಎಂಬ ಕೆಮಿಕಲ್ ಯುಕ್ತ ವಸ್ತು ಎಲ್ಲರೂ ಬಳಸುವಂತಾಗಿದೆ. ಇಂದಿನ ಕಾಲದಲ್ಲಿ ಶಾಂಪೂ ಬಳಸದ ಜನರಿಲ್ಲ ಎಂದೇ ಹೇಳಬಹುದು. ಇದು ಎಷ್ಟು ಉಪಯುಕ್ತವಾಗಿದೆಯೇ ಅಷ್ಟೇ ಹಾನಿಕಾರಕವು ಇದೆ. ಹಾಗಾಗಿ ಶಾಂಪೂ ಬಳಸುವ ಮುನ್ನ ಒಮ್ಮೆ ಯೋಚಿಸುವುದು ಸೂಕ್ತವಾಗಿದೆ.

ಹೌದು. ಶಾಂಪೂವಿನಲ್ಲಿ ಕ್ಯಾನ್ಸರ್‌ಕಾರಕ ಅಂಶಗಳು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಯೂನಿಲಿವರ್ ಪಿಎಲ್‌ಸಿಯು ಕಂಪನಿಯು ಡವ್ ಸೇರಿದಂತೆ ಇತರೆ ಡ್ರೈ ಶಾಂಪೂಗಳ ಜನಪ್ರಿಯ ಉತ್ಪನ್ನಗಳನ್ನು ಮಾರುಕಟ್ಟೆಯಿಂದ ಹಿಂಪಡೆದಿದೆ. ಈ ಉತ್ಪನ್ನಗಳ ಬಳಕೆ ನಿಲ್ಲಿಸಬೇಕು, ಈಗಾಗಲೇ ಇದನ್ನು ಕೊಂಡವರು ಹಣ ಮರಳಿ ಪಡೆಯಲು ಯುನಿಲಿವರ್ ರಿಕಾಲ್ ವೆಬ್‌ಗೆ ಭೇಟಿ ನೀಡಬೇಕು ಎಂದು ಎಫ್‌ಡಿಎ ಹೇಳಿದೆ.

ಶಾಂಪೂಗಳಲ್ಲಿ ಬೆಂಜೀನ್ ಎನ್ನುವ ಕ್ಯಾನ್ಸರ್‌ಕಾರಕ ಅಂಶ ಕಾಣಿಸಿದ್ದು, ಮಾನವ ದೇಹವನ್ನು ಹಲವು ರೀತಿಯಲ್ಲಿ ಪ್ರವೇಶಿಸುವ ಅಪಾಯವಿದೆ ಎನ್ನಲಾಗಿದೆ. ಆದರೆ, ಈ ಬಗ್ಗೆ ಯೂನಿಲಿವರ್ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಶಾಂಪೂ ಮೂಗು, ಬಾಯಿ ಮತ್ತು ಚರ್ಮದ ಮೂಲಕ ದೇಹವನ್ನು ಕ್ಯಾನ್ಸರ್‌ಕಾರಕ ಅಂಶ ಪ್ರವೇಶಿಸಬಹುದಾಗಿದೆ. ಇದು ರಕ್ತದ ಕ್ಯಾನ್ಸರ್‌ಗೆ ಕಾರಣವಾಗಬಹುದು. ಯುನಿಲಿವರ್‌ನಲ್ಲಿ ನೆಕ್ಸಸ್, ಸಾವೆ, ಟ್ರೆಸೆಮೆ ಹಾಗೂ ತಿಗಿ ರೀತಿಯ ಬ್ರ್ಯಾಂಡ್ಗಳನ್ನು ಒಳಗೊಂಡಿದೆ.

Leave A Reply