ಗರ್ಭಿಣಿಯರೇ ಹುಷಾರ್..! ಗ್ರೀನ್ ಟೀ ಸೇವನೆ ಮಾಡಿದರೆ ಡೇಂಜರ್: ಅಧ್ಯಯನದಲ್ಲಿ ಮಾಹಿತಿ ಬಹಿರಂಗ
ಹೊಟ್ಟೆಯ ಬೊಜ್ಜು ಎನ್ನುವುದು ಕೇವಲ ಪುರುಷರು ಮಾತ್ರವಲ್ಲದೆ, ಮಹಿಳೆಯರಲ್ಲಿ ಕೂಡ ಕಂಡುಬರುವುದು. ಹೊಟ್ಟೆ ಕರಗಿಸಲು ಹಲವಾರು ಜನರು ದಿನವಿಡಿ ತುಂಬಾ ಶ್ರಮ ವಹಿಸುವರು. ಹೊಟ್ಟೆಯ ಕೊಬ್ಬನ್ನು ಕರಗಿಸುವುದು ಅಷ್ಟು ಸುಲಭವಾಗಿ ಸಾಧ್ಯವಾಗದು.
ಹೆಚ್ಚಿನ ಜನರು ಬೊಜ್ಜು ಕರಗಿಸೊದಕ್ಕಾಗಿ ಇತ್ತೇಚೆಗೆ ಗ್ರೀನ್ ಟೀ ಸೇವಿಸಲು ಮುಂದಾಗುತ್ತಾರೆ. ದಿನದಲ್ಲಿ ಹಲವು ಲೋಟ ಗ್ರೀನ್ ಟೀ ಕುಡಿದು ಫಿಟ್ ಆಗಿರಲು ಬಯಸುತ್ತಾರೆ.
ದೇಹದ ತೂಕ ಕಡಿಮೆಯಾಗಬೇಕು ಎನ್ನುವ ಕಾರಣಕ್ಕೆ ಗ್ರೀನ್ ಟೀ ಸೇವಿಸುತ್ತಾರೆ. ಗ್ರೀನ್ ಟೀಯಲ್ಲಿರುವ ಹಲವು ಔಷಧೀಯ ಗುಣಗಳಿಂದಲೂ ಸೇವಿಸುವವರೂ ಹೆಚ್ಚು.
ಆದರೆ, ಗರ್ಭಿಣಿಯರು ಗ್ರೀನ್ ಟೀ ಸೇವಿಸಬಹುದೇ? ಸೇವಿಸಬಾರದೇ? ಎನ್ನುವ ಹಲವು ಗೊಂದಲ ಎಲ್ಲರಲ್ಲೂ ಮೂಡುತ್ತದೆ.
ಸಂಶೋಧನೆಗಳ ಪ್ರಕಾರ ಗ್ರೀನ್ ಟೀ ನಲ್ಲಿ ಕೆಫಿನ್ ಅಂಶ ಇರುವುದರಿಂದ ಗರ್ಭಿಣಿಯರು ಎಚ್ಚರಿಕೆ ವಹಿಸಬೇಕು ಎಂದು ಸಂಶೋಧನೆಗಳು ಹೇಳಿವೆ.
ಒಂದು ದಿನಕ್ಕೆ ಒಬ್ಬ ಗರ್ಭಿಣಿ ಮಹಿಳೆ ಸುಮಾರು 200 ಮಿಲಿಗ್ರಾಂ ಕೆಫಿನ್ ಅಂಶ ಸೇವಿಸಬಹುದು ಎಂದು ಕೆಲವು ಸಂಶೋಧನೆಗಳು ತಿಳಿಸಿವೆ. ಕೆಫಿನ್ ಅಂಶ ಹೊಂದಿದ ಯಾವುದೇ ಆಹಾರ ಪದಾರ್ಥಗಳನ್ನು ಇಷ್ಟಕ್ಕೆ ಮಾತ್ರ ಸೀಮಿತಗೊಳಿಸಿಕೊಳ್ಳಬೇಕು.
ಅಂದರೆ ಸರಿಸುಮಾರು ಒಂದು ದಿನಕ್ಕೆ ಹೆಚ್ಚೆಂದರೆ ಎರಡು ಕಪ್ ಗ್ರೀನ್ ಟೀ ಕುಡಿಯಬಹುದು. ಹೀಗಾಗಿ, ಇತರೆ ಸಮಯದಂತೆ ಗರ್ಭ ಧರಿಸಿದ ಸಮಯದಲ್ಲಿ ಅತಿಯಾದ ಗ್ರೀನ್ ಟೀ ಸೇವನೆ ಬೇಡ ಎಂದು ತಜ್ಞರು ಹೇಳಿದ್ದಾರೆ.
ಗ್ರೀನ್ ಟೀಯಲ್ಲಿ ಆ್ಯಂಟಿಆಕ್ಸಿಡೆಂಟ್ ಅಂಶ ಅಧಿಕವಾಗಿದೆ. ಆರೋಗ್ಯಕಾರಿ ಪಾನೀಯವಾಗಿದ್ದರೂ ಗರ್ಭಿಣಿಯರು ಹೆಚ್ಚು ಕುಡಿಯಬಾರದು. ಗ್ರೀನ್ ಟೀಯನ್ನು ಕ್ಯಾಮೆಲಿಯಾ ಸೈನೆನ್ಸಿಸ್ ಸಸ್ಯದಿಂದ ಪಡೆಯಲಾಗುತ್ತದೆ.
ಇದರಲ್ಲಿ ಆ್ಯಂಟಿಆಕ್ಸಿಡೆಂಟ್ ಅಧಿಕವಾಗಿದೆ. ಇದು ಆರೋಗ್ಯ ಪಾನೀಯವಾಗಿದೆ. ದಿನಕ್ಕೆ ಎರಡು ಕಪ್ ಗ್ರೀನ್ ಟೀ ಕುಡಿಯುವುದು ಉತ್ತಮ. ಕೆಲವೊಮ್ಮೆ ಹಸಿರು ಚಹಾವು ದೇಹದಲ್ಲಿ ಫೋಲಿಕ್ ಆಮ್ಲದ ಮಟ್ಟವನ್ನು ಕಡಿಮೆ ಮಾಡುತ್ತದೆ.
ಗರ್ಭ ಧರಿಸಿದ ಮೊದಲ ಮೂರು ತಿಂಗಳು ಗ್ರೀನ್ ಟೀ ಸೇವಿಸುವುದನ್ನು ತಪ್ಪಿಸುವುದು ಒಳ್ಳೆಯದು. ಮೂರನೇ ತ್ರೈಮಾಸಿಕದಲ್ಲಿ ಗ್ರೀನ್ ಚಹ ಸೇವಿಸಬಹುದು. ಆದರೆ, ಗ್ರೀನ್ ಟೀಯಲ್ಲಿ ಕಾಫಿಗಿಂತ ಕಡಿಮೆ ಕೆಫಿನ್ ಇದೆ.