PM Kisan : ಪಿಎಂ ಕಿಸಾನ್ ಯೋಜನೆಯ ನಿಯಮ ಬದಲಾವಣೆ | ಏನು ಹೊಸ ನಿಯಮ?

ರೈತರ ನೆರವಿಗೆ ಕೇಂದ್ರ ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸಿ ಆರ್ಥಿಕ ನೆರವಿನ ಜೊತೆಗೆ ರಸಗೊಬ್ಬರ ಪೂರೈಕೆ ಮಾಡಿ ಕೃಷಿ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿದೆ.

ಈಗಾಗಲೆ ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ (ಪಿಎಂ ಕಿಸಾನ್ ಯೋಜನೆ) 12ನೇ ಕಂತಿನ ಹಣವನ್ನು ಸರ್ಕಾರ ಬಿಡುಗಡೆ ಮಾಡಿದ್ದು, 12ನೇ ಕಂತಿನ 2000 ರೂಪಾಯಿಯಂತೆ ಒಟ್ಟು 16,000 ಕೋಟಿ ರೂಪಾಯಿಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಬಿಡುಗಡೆ ಮಾಡಿದ್ದಾರೆ.

ಆದರೆ ಈಗ ಪಿಎಂ ಕಿಸಾನ್ ಯೋಜನೆ ನಿಯಮದಲ್ಲಿ ಕೆಲವು ಬದಲಾವಣೆಯಾಗಿದ್ದು, ಇನ್ನೂ ಹಣ ಖಾತೆಗೆ ಜಮೆ ಆಗಿದೆಯೇ ಎಂದು ಪರೀಕ್ಷಿಸಲು ರಿಜಿಸ್ಟರ್ ಆದ ಮೊಬೈಲ್ ಸಂಖ್ಯೆಯನ್ನು ನಮೂದಿಸುವುದು ಕಡ್ಡಾಯವಾಗಿದೆ.

ಕೆಲವು ರೈತರಿಗೆ 2 ಸಾವಿರ ರೂಪಾಯಿ ಈಗಾಗಲೆ ಖಾತೆಗೆ ಜಮೆ ಆಗಿದ್ದು,ಇನ್ನು ಕೆಲವು ರೈತರಿಗೆ ಹಣ ಜಮೆ ಆಗುತ್ತಿದೆ. ಆದರೆ ಇದರ ನಡುವೆಯೇ ಸರ್ಕಾರವು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ 2022ರ ನಿಯಮದಲ್ಲಿ ಕೆಲವು ಹೊಸ ಬದಲಾವಣೆಯನ್ನು ತರಲು ಮುಂದಾಗಿದೆ.ಈ ಹೊಸ ನಿಯಮವು ನೇರವಾಗಿ 12 ಕೋಟಿ ರಿಜಿಸ್ಟಾರ್ ರೈತರ ಮೇಲೆ ನೇರವಾಗಿ ಪರಿಣಾಮ ಬೀರುವ ಸಾಧ್ಯತೆ ದಟ್ಟವಾಗಿದೆ.

ಪ್ರಧಾನ ಮಂತ್ರಿ ಕಿಸಾನ್ ಯೋಜನೆಯಲ್ಲಿ ಕೇಂದ್ರ ಸರ್ಕಾರವು ಪ್ರಮುಖ ಬದಲಾವಣೆಯನ್ನು ತರಲು ಮುಂದಾಗಿದೆ. ಈಗ ನೀವು ಆಧಾರ್ ಸಂಖ್ಯೆಯನ್ನು ಬಳಸಿಕೊಂಡು ವೆಬ್‌ಸೈಟ್ ಮೂಲಕ ಹಣ ಜಮೆ ಆಗಿರುವ ಸ್ಟೇಟಸ್ ಚೆಕ್ ಮಾಡಲು ಸಾಧ್ಯವಾಗುವುದಿಲ್ಲ.

ಅಲ್ಲದೆ, ಪಿಎಂ ಕಿಸಾನ್ ಯೋಜನೆಯ ಹಣ ಖಾತೆಗೆ ಜಮೆ ಆಗಿದೆಯೇ ಎಂದು ತಿಳಿದುಕೊಳ್ಳಲು ನೀವು ನಿಮ್ಮ ರಿಜಿಸ್ಟರ್ ಆದ ಮೊಬೈಲ್ ಸಂಖ್ಯೆಯನ್ನು ಕೂಡಾ ನಮೂದಿಸುವುದು ಮುಖ್ಯವಾಗಿದೆ. ಈ ಹಿಂದೆ ಆಧಾರ್ ಅಥವಾ ಮೊಬೈಲ್ ಸಂಖ್ಯೆಯನ್ನು ಹಾಕಿ ಸ್ಟೇಟಸ್ ಪರಿಶೀಲನೆ ಮಾಡಬಹುದಾಗಿತ್ತು. ಮತ್ತೆ ಮೊಬೈಲ್ ಸಂಖ್ಯೆಯಿಂದಾಗದೆ ಇದ್ದಾಗ ಆಧಾರ್ ಸಂಖ್ಯೆಯಿಂದಲೇ ಸ್ಟೇಟಸ್ ಪರಿಶೀಲನೆ ಮಾಡಬೇಕು ಎಂದು ನಿಯಮ ಜಾರಿ ಮಾಡಲಾಗಿತ್ತು.

ಈಗ ಮತ್ತೊಮ್ಮೆ ಆಧಾರ್ ಸಂಖ್ಯೆಯ ಬದಲಿಗೆ ಮೊಬೈಲ್ ಸಂಖ್ಯೆಯಿಂದಲೇ ಸ್ಟೇಟಸ್ ಪರಿಶೀಲನೆ ಮಾಡಬೇಕು ಎಂಬ ನಿಯಮ ಜಾರಿಗೆ ತರಲಾಗಿದೆ.

ಸ್ಟೇಟಸ್ ಪರಿಶೀಲನೆ ಮಾಡುವ ಪ್ರಕ್ರಿಯೆಯು ಹೀಗಿದೆ

ಮೊದಲು pmkisan.gov.in ವೆಬ್‌ಸೈಟ್‌ಗೆ ಭೇಟಿ ನೀಡಬೇಕು. ಬಳಿಕ, ಎಡಭಾಗದಲ್ಲಿರುವ Beneficiary Status ಮೇಲೆ ಕ್ಲಿಕ್ ಮಾಡಬೇಕು. ಹೊಸ ಪುಟವು ಸ್ಕ್ರೀನ್‌ನಲ್ಲಿ ಕಾಣಿಸಲಿದ್ದು, ರಿಜಿಸ್ಟರ್ ಆದ ನಂಬರ್ ಅನ್ನು ಹಾಕುವ ಮೂಲಕ ನಿಮ್ಮ ಸ್ಟೇಟಸ್ ಅನ್ನು ಪರಿಶೀಲನೆ ಮಾಡಬಹುದು.

ರಿಜಿಸ್ಟರ್ ಆದ ಮೊಬೈಲ್ ಸಂಖ್ಯೆ ಇಲ್ಲವಾದರೆ, link to know your registration number ಮೇಲೆ ಕ್ಲಿಕ್ ಮಾಡಬೇಕು. ಈಗ ಪಿಎಂ ಕಿಸಾನ್ ಯೋಜನೆಗೆ ನೀವು ನೀಡಿದ ಮೊಬೈಲ್ ಸಂಖ್ಯೆಯನ್ನು ಹಾಕಬೇಕು.

ಕ್ಯಾಪ್ಚಾ ಕೋಡ್ ಹಾಕಿ, ಮೊಬೈಲ್‌ಗೆ ಬಂದ ಒಟಿಪಿಯನ್ನು ನಮೂದಿಸಬೇಕು. Get Details ಮೇಲೆ ಕ್ಲಿಕ್ ಮಾಡಬೇಕು ಆಗ ನಿಮ್ಮ ರಿಜಿಸ್ಟರ್ ಆದ ನಂಬರ್ ನಿಮಗೆ ಲಭ್ಯವಾಗುತ್ತದೆ.

ರೈತರಿಗೆ ನೆರವಾಗಲು ಯೋಜನೆ ತಂದಿರುವ ಕೇಂದ್ರ ಕಿಸಾನ್ ಯೋಜನೆಯಡಿ ಸರಕಾರ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ರಿಜಿಸ್ಟರ್ ಮಾಡುವಬದಲಾವಣೆಯನ್ನು ಮಾಡಿದೆ.

Leave A Reply

Your email address will not be published.