Home Business 15 ವರ್ಷದ ಹಿಂದಿನ ಐಫೋನ್ ಸೇಲಾದ ರೇಟ್ ಕೇಳಿದರೆ ಖಂಡಿತ ಬೆಚ್ಚಿ ಬೀಳ್ತೀರ..!! ಈ ಫೋನಿನ...

15 ವರ್ಷದ ಹಿಂದಿನ ಐಫೋನ್ ಸೇಲಾದ ರೇಟ್ ಕೇಳಿದರೆ ಖಂಡಿತ ಬೆಚ್ಚಿ ಬೀಳ್ತೀರ..!! ಈ ಫೋನಿನ ವಿಶೇಷತೆ ಏನು ಗೊತ್ತೇ?

Hindu neighbor gifts plot of land

Hindu neighbour gifts land to Muslim journalist

ಪ್ರಸ್ತುತ ಜಗತ್ತಿನಲ್ಲಿ ಆಹಾರಕ್ಕಿಂತ ಹೆಚ್ಚು ತಂತ್ರಜ್ಞಾನ ಗಳಿಗೆ ಹೆಚ್ಚಿನ ಆದ್ಯತೆ ಮತ್ತು ಬೇಡಿಕೆ ಇದೆಯಾ ಎಂಬ ಪ್ರಶ್ನೆ ಒಂದು ಸರಿ ನಮಗೆ ಅನ್ನಿಸಬಹುದು. ಹೌದು 2007 ರಲ್ಲಿ ಬಿಡುಗಡೆಯಾದ ಮೊದಲ ತಲೆಮಾರಿನ, ಫ್ಯಾಕ್ಟರಿ ಚಿಹ್ನೆ ಇರುವ, ಬಾಕ್ಸ್‌ ತೆರೆದಿರದ ಐಫೋನ್ ಒಂದು ಸುಮಾರು 15 ವರ್ಷಗಳ ಬಳಿಕ ಬರೋಬ್ಬರಿ 32 ಲಕ್ಷ ರೂಪಾಯಿಗಳಿಗೆ ಹರಾಜಾಗಿದೆ. ಅಂದು ಕೇವಲ 49,305 ರೂಪಾಯಿ ಪ್ರೈಸ್ ಟ್ಯಾಗ್ ಇದ್ದ ಐಫೋನ್ ಇವತ್ತು 32 ಲಕ್ಷ ರೂಪಾಯಿಗಳಿಗೆ ಹರಾಜಾಗಿದೆ ಅನ್ನೋದು ನೀವು ನಂಬಲೇ ಬೇಕು. ಈ ಐಫೋನ್ ಇತ್ತೀಚೆಗೆ ನಡೆದ ಹರಾಜಿನಲ್ಲಿ ತನ್ನ ಮೂಲ ಬೆಲೆಗಿಂತ 65 ಪಟ್ಟು ಹೆಚ್ಚು ಬೆಲೆಗೆ ಮಾರಾಟವಾಗುವ ಮೂಲಕ ದಾಖಲೆ ಸೃಷ್ಟಿ ಮಾಡಿದೆ.

ಮೊದಲ ಐಫೋನ್ ಅನ್ನು ಆಪಲ್ ಸಹ ಸಂಸ್ಥಾಪಕ ಸ್ಟೀವ್ ಜಾಬ್ಸ್ ಅವರು ಜನವರಿ 9, 2007 ರಂದು ಬಿಡುಗಡೆಗೊಳಿಸಿದ್ದರು. ಇದು ಬಿಡುಗಡೆಯಾದ ಐದು ತಿಂಗಳ ನಂತರ ಮಾರಾಟಕ್ಕೆ ಲಭ್ಯವಾಯಿತು. ಈ ಐಫೋನ್‌ ಬಿಡುಗಡೆಯನ್ನು ಸ್ಮಾರ್ಟ್‌ಫೋನ್ ಉದ್ಯಮ ಜಗತ್ತಿನಲ್ಲಿ ಗೇಮ್ ಚೇಂಜರ್ (game changer) ಎಂದೇ ಪರಿಗಣಿಸಲಾಗಿದೆ.

ಮೊದಲಿಗೆ ಈ ಐಫೋನ್ ಹರಾಜಿನಲ್ಲಿ ಭಾಗಿಯಾದವರು 2,500 ಡಾಲರ್‌ಗೆ ಹರಾಜು ಕೂಗಿದರು ನಂತರ ಅದು 10 ಸಾವಿರ ಡಾಲರ್‌ಗೆ ಏರಿಕೆ ಆಯ್ತು. ಎರಡು ದಿನ ಇದೇ ಬೆಲೆಯಲ್ಲಿ ನಿಂತಿತ್ತು. ಎರಡು ದಿನ ಕಳೆದಂತೆ 28 ಬಾರಿ ಬೇರೆ ಬೇರೆ ಮೊತ್ತದೊಂದಿಗೆ ಹರಾಜು ಕೂಗುತ್ತಾ ಹೋಗಿದ್ದರಿಂದ ಇದರ ದರ ಏರಿಕೆ ಆಗುತ್ತಾ ಹೋಗಿದ್ದು, ಶೀಘ್ರವಾಗಿ ಇದರ ಬೆಲೆ ಒಮ್ಮೆಲೆ ಡಾಲರ್‌ನಲ್ಲಿಯೇ ಐದು ಅಂಕಿಯನ್ನು ದಾಟಿದೆ. ಅಂದರೆ ಹರಾಜಿನಲ್ಲಿ ಕೊನೆಯದಾಗಿ ಈ ಫೋನ್‌ ಅನ್ನು 39.339.60 ಡಾಲರ್‌ಗೆ ಕೂಗಲಾಗಿತ್ತು , ಈ ಬೆಲೆಯೂ ಈ ಐಫೋನ್‌ನ ಮೂಲ ಬೆಲೆಗಿಂತ 65 ಪಟ್ಟು ಹೆಚ್ಚು ಹೊಂದಿತ್ತು. 8ಜಿಬಿ ಸ್ಟೋರೇಜ್ ಜೊತೆ 2 ಮೆಗಾಫಿಕ್ಸೆಲ್ ಕ್ಯಾಮರಾವನ್ನು ಈ ಫೋನ್ ಹೊಂದಿದೆ. ಈ ಫೋನ್‌ ಅನ್ನು ಮೊದಲ ಬಾರಿಗೆ ಅಮೆರಿಕಾದಲ್ಲಿ 2007ರಲ್ಲಿ 599 ಡಾಲರ್ ಅಂದರೆ 49,305 ರೂಪಾಯಿ ಬೆಲೆಗೆ ಮೊದಲ ಬಾರಿಗೆ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿತ್ತು.

ಈ ಐಫೋನ್(iPhone) ಅನ್ನು ಸೆಪ್ಟೆಂಬರ್ 30 ರಂದು LCGಯಲ್ಲಿ ಹರಾಜಿಗಿಡಲಾಗಿತ್ತು ಭಾನುವಾರ ಹರಾಜು ಮುಕ್ತಾಯಗೊಂಡಾಗ ಅಚ್ಚರಿ ಕಾದಿತ್ತು. ಹರಾಜು ಬ್ಲಾಕ್‌ನಲ್ಲಿ $30,000 ಡಾಲರ್ ಅಂದರೆ ಭಾರತದ ರೂಪಾಯಿ ಲೆಕ್ಕದಲ್ಲಿ ಹೇಳುವುದಾದರೆ 24,61,662 ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತಕ್ಕೆ ಹರಾಜಾಗಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಅಂದಾಜಿಗೂ ಮೀರಿ ಅದು 32 ಲಕ್ಷ ರೂಪಾಯಿಗೆ ಹರಾಜಾಗಿದೆ. ಈ ಫೋನ್ ಮೊದಲು ಹೊರಬಂದಾಗ ಇದ್ದ ಮಾರಾಟದ ಮೂಲ ಬೆಲೆಗಿಂತ 65 ಪಟ್ಟು ಹೆಚ್ಚು.

ಮತ್ತು ಈ ಐಫೋನ್ ಅನ್ನು ಪ್ಯಾಕ್ ಮಾಡಿದ ನಂತರ ತೆರೆದೇ ಇಲ್ಲ ಎಂಬುದನ್ನು ಖಚಿತಪಡಿಸಲು ಈ ಹರಾಜು ವೆಬ್‌ಸೈಟ್ (website), ಇದು ದೋಷರಹಿತ ಸ್ಥಿತಿಯಲ್ಲಿ ಇದೆ ಎಂದು ಹೇಳಿದೆ. ಇದರ ಪ್ಯಾಕ್ ಮೇಲಿರುವ ಫ್ಯಾಕ್ಟರಿ ಸೀಲ್, ಸರಿಯಾದ ವಿವರಗಳು ಬಾಕ್ಸ್‌ನ ಬಿಗಿತ ಎಲ್ಲವೂ ಸುಸ್ಥಿತಿಯಲ್ಲಿದೆ. ಅಲ್ಲದೇ ಬಾಕ್ಸ್ ಮೇಲಿರುವ ಲೇಬಲ್‌ಗಳು ಯಥಾಸ್ಥಿತಿ ಇದ್ದು, ಮಾರುಕಟ್ಟೆಗೆ ಹೋದ ನಂತರದ ಯುಪಿಸಿ ಸ್ಟಿಕ್ಕರ್‌ಗಳಾಗಲಿ ಸೀಲ್‌ಗಳಾಗಲಿ ಯಾವುದು ಸಹ ಇದರ ಮೇಲಿಲ್ಲ. ಬ್ರಾಂಡ್ ಹೊಸದರಂತೆ ಇದ್ದು ಎಂದು ಕೂಡ ಇದನ್ನು ಉಪಯೋಗ ಮಾಡಿಲ್ಲ ಎಂದು ಈ ಹರಾಜು ವೆಬ್‌ಸೈಟ್ ಹೇಳಿಕೊಂಡಿದೆ.

15 ವರ್ಷಗಳ ಹಿಂದೆ ಇದನ್ನು ಅನಾವರಣಗೊಳಿಸಿದ ಆಪಲ್ ಸಹ-ಸಂಸ್ಥಾಪಕ ಮತ್ತು ಸಿಇಒ ದಿವಂಗತ ಸ್ಟೀವ್ ಜಾಬ್ಸ್ ಇದನ್ನು ಐಪಾಡ್, ಫೋನ್ ಮತ್ತು ಇಂಟರ್ನೆಟ್ ಸಂವಹನಕಾರ ಎಂದು ಕರೆದಿದ್ದರು. ಮೊದಲ ತಲೆಮಾರಿನ ಈ ಐಫೋನ್ (first-generation iPhone)3.5-ಇಂಚಿನ ಪರದೆ, 2 ಮೆಗಾಪಿಕ್ಸೆಲ್ ಕ್ಯಾಮೆರಾ ಮತ್ತು ಸಫಾರಿ ವೆಬ್ ಬ್ರೌಸರ್‌ ಹೊಂದಿತ್ತು. ಇದು ಆರಂಭದಲ್ಲಿ ಕೇವಲ 4 GB ಅಥವಾ 8 GB ಸಂಗ್ರಹಣೆ ಸಾಮರ್ಥ್ಯದೊಂದಿಗೆ ಲಭ್ಯವಿತ್ತು. ನಂತರ 16 GB ಆಯ್ಕೆಯನ್ನು ಹೊಂದಿತ್ತು. ಇಂದು ಆಪಲ್ ಐಫೋನ್ ಉದ್ಯಮ ಬಹಳ ದೂರ ಸಾಗಿ ಬಂದಿದ್ದು, ಇಂದಿನ ಹೊಸ ಐಫೋನ್ iPhone 14, 6.1 ಇಂಚಿನ ಸ್ಕ್ರೀನ್ ಹೊಂದಿದ್ದು, 12 ಮೆಗಾಪಿಕ್ಸೆಲ್ ಕ್ಯಾಮೆರಾ ಮತ್ತು 512 GB ವರೆಗೆ ಸಂಗ್ರಹಣೆ ಸಾಮರ್ಥ್ಯವನ್ನು ಹೊಂದಿದೆ. ಇದು $799 ಡಾಲರ್‌ಗೆ ಮಾರುಕಟ್ಟೆಯಲ್ಲಿ ಲಭ್ಯವಿದೆ.