BIGG NEWS : ವಾಹನ ಸವಾರರೇ ಗಮನಿಸಿ | ಹೊಸ ಟೋಲ್ ನೀತಿ ಜಾರಿ ಮಾಡಿದ ಕೇಂದ್ರ ಸರಕಾರ | ಯಾವುದೆಲ್ಲ ಹೊಸ ನಿಯಮ?
ವಾಹನ, ರಸ್ತೆ, ಸಾರಿಗೆ ಹಾಗೂ ಹೆದ್ದಾರಿಗಳ ನಿಯಮಗಳಲ್ಲಿ ಹೊಸ ಬದಲಾವಣೆಗಳನ್ನು ತರುತ್ತಲೇ ಇದ್ದು, ಈಗ ಮತ್ತೊಂದು ಮಹತ್ವದ ಬದಲಾವಣೆ ತರಲು ಮುಂದಾಗಿದೆ.
ಹೌದು. ಶೀಘ್ರದಲ್ಲೇ ಹೆದ್ದಾರಿಗಳ ಟೋಲ್ ಕಾರ್ಯಾಚರಣೆಗಳಲ್ಲಿ ಬದಲಾವಣೆಗಳನ್ನು ತರುವ ಬಗ್ಗೆ ಪ್ರಸ್ತಾವನೆ ಇದ್ದು, ವಾಹನ ಚಾಲಕರಿಂದ ಟೋಲ್ ತೆರಿಗೆ ಸಂಗ್ರಹಣೆ ಪ್ರಕ್ರಿಯೆಯಲ್ಲಿ ಹೊಸ ವಿಧಾನ ಪರಿಚಯಿಸುವ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡುತ್ತಿದೆ.
ಕೇಂದ್ರ ಸರ್ಕಾರ ಮುಂದಿನ ವರ್ಷದಿಂದ ಟೋಲ್ ನೀತಿಯಲ್ಲಿ ಬದಲಾವಣೆ ತರಲಿದ್ದು, ಈ ಹೊಸ ನೀತಿಯಲ್ಲಿ ಟೋಲ್ ತೆಗೆದುಕೊಳ್ಳುವ ಪ್ರಕ್ರಿಯೆಯನ್ನು ಬದಲಾಯಿಸುವ ಮೂಲಕ ಅದನ್ನು ಜಿಪಿಎಸ್ ಆಧಾರಿತವಾಗಿ ಮಾಡಬಹುದು ಎಂದು ಅಂದಾಜಿಸಲಾಗಿದೆ.
ಇದರ ಜೊತೆಗೆ ಜಿಪಿಎಸ್ ವ್ಯವಸ್ಥೆಯಲ್ಲದೇ ವಾಹನಗಳ ಗಾತ್ರದ ಆಧಾರದಲ್ಲಿಯೂ ಟೋಲ್ ಸಂಗ್ರಹಿಸುವ ಸಾಧ್ಯತೆಯು ದಟ್ಟವಾಗಿದೆ. ಪ್ರಸ್ತುತ, ನಿರ್ದಿಷ್ಟ ದೂರದ ಆಧಾರದ ಮೇಲೆ ನಿಗದಿಪಡಿಸಿದ ಮಾನದಂಡದ ಪ್ರಕಾರ ಟೋಲ್ ಸಂಗ್ರಹಿಸುವ ನಿಯಮವಿದೆ.
ಹೆಚ್ಚು ಭಾರದ ವಾಹನಗಳಿಂದ ರಸ್ತೆಗಳು ವೇಗವಾಗಿ ಸವೆದುಹೋಗುತ್ತಿರುವುದರಿಂದ ಸರ್ಕಾರ ಈ ಯೋಜನೆಯನ್ನು ಜಾರಿಗೆ ತರಲು ಮುಂದಾಗಿದೆ ಎಂದು ಅಂದಾಜಿಸಲಾಗಿದೆ. ಕೇಂದ್ರ ಸಾರಿಗೆ ಸಚಿವಾಲಯವು ಈ ಪ್ರಸ್ತಾವನೆ ಬಗ್ಗೆ ಚರ್ಚೆ ನಡೆಸುತ್ತಿದ್ದು, ದೆಹಲಿ-ಮುಂಬೈ ಕಾರಿಡಾರ್ ಸೇರಿದಂತೆ ಮುಂಬರುವ ಗ್ರೀನ್ ಫೀಲ್ಡ್ ಎಕ್ಸ್ಪ್ರೆಸ್ವೇ ಯೋಜನೆಗಳಲ್ಲಿ ಈ ಹೊಸ ಟೋಲ್ ನೀತಿಯನ್ನು ಅಳವಡಿಸುವ ಸಾಧ್ಯತೆ ಇದೆ.
ಟೋಲ್ ದರ ನಿಗದಿಪಡಿಸುವ ಸಂಬಂಧ ಸಾರಿಗೆ ಸಚಿವಾಲಯವು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಬಿಎಚ್ ಯು)-ವಾರಾಣಸಿಯ ನೆರವನ್ನು ಕೇಳಿದೆ.
ಜನರು ತಾವು ಬಳಸಿದ ವಿದ್ಯುಚ್ಛಕ್ತಿಯ ಮೊತ್ತವನ್ನು ಪಾವತಿಸುವ ರೀತಿಯಲ್ಲಿಯೇ ವಾಹನದ ಗಾತ್ರ ಮತ್ತು ರಸ್ತೆ ಮೂಲಸೌಕರ್ಯಗಳ ಮೇಲಿನ ವಾಹನದ ಸಂಭಾವ್ಯ ಒತ್ತಡ ಆಧರಿಸಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪಾವತಿಸುವ ಟೋಲ್ ಮೊತ್ತವನ್ನು ನಿರ್ಧರಿಸಬಹುದಾಗಿದೆ.
ಟೋಲ್ ಸಂಗ್ರಹಣೆ ಪ್ರಕ್ರಿಯೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಈ ಕ್ರಮ ಕೈಗೊಳ್ಳಲು ಮುಂದಾಗಿದ್ದು, ವಾಹನವು ರಸ್ತೆಯಲ್ಲಿ ಪ್ರಯಾಣಿಸುವ ಸಮಯ ಮತ್ತು ದೂರವನ್ನ ಆಧರಿಸಿ ವಾಹನದ ಟೋಲ್ ಸಂಗ್ರಹವನ್ನ ನಿರ್ಧರಿಸಬಹುದು.
ಐಐಟಿ ಬಿಎಚ್ಯುಗೆ ಟೋಲ್ನ ಹೊಸ ಮಾರ್ಗವನ್ನು ಸಿದ್ಧಪಡಿಸುವ ಕಾರ್ಯವನ್ನೂ ವಹಿಸಲಾಗಿದೆ. ಆದರೂ ಕೂಡ ಇದರ ಬಗ್ಗೆ ಸರ್ಕಾರ ಯಾವುದೇ ಮಾಹಿತಿ ಬಹಿರಂಗಗೊಳಿಸಿಲ್ಲ.
ಈ ನೀತಿಯ ಅಡಿಯಲ್ಲಿ ವಾಹನದ ತೂಕವನ್ನು ಸಹ ನಿರ್ಣಯಿಸಬಹುದಾಗಿದ್ದು, ಆದರೆ, ಈ ಯೋಜನೆಯ ಕಾಮಗಾರಿ ಇನ್ನೂ ಕೂಡ ಆರಂಭವಾಗಿಲ್ಲ. ಇದಲ್ಲದೆ, IIT BHU ಯಾವ ಸೂತ್ರದ ಅಡಿಯಲ್ಲಿ ಟೋಲ್ ತೆಗೆದುಕೊಳ್ಳುವ ವಿಧಾನವನ್ನು ಬದಲಾಯಿಸಲು ಪರಿಗಣಿಸುತ್ತದೆ ಎಂಬುದನ್ನೂ ಸರ್ಕಾರಕ್ಕೆ ತಿಳಿಸುತ್ತದೆ.
ಈ ಹೊಸ ಟೋಲ್ ಯೋಜನೆಯಿಂದ ಸಣ್ಣ ವಾಹನಗಳ ಮಾಲೀಕರಿಗೆ ಮತ್ತು ಕಡಿಮೆ ದೂರ ಪ್ರಯಾಣಿಸುವವರಿಗೆ ನೆರವಾಗಬಹುದು.
ಪ್ರಸ್ತುತ ನಿಯಮದ ಅನ್ವಯ ದೂರಕ್ಕೆ ತಕ್ಕಂತೆ ಟೋಲ್ ತೆಗೆದುಕೊಳ್ಳುವ ನಿಯಮವಿದ್ದು, ಕಡಿಮೆ ದೂರದವರೆಗೆ ಮತ್ತು 5-ಆಸನಗಳಿಂದ 7-ಆಸನಗಳವರೆಗೆ ಹೆಚ್ಚಿನ ಟೋಲ್ ಪಾವತಿಸಬೇಕಾದ ಕಾರಣ ಎಲ್ಲರಿಗೂ ಒಂದೇ ಟೋಲ್ ವಿಧಿಸಲಾಗುತ್ತದೆ. ಹಾಗಾಗಿ, ಇದರಲ್ಲಿ ಬದಲಾವಣೆಗಳನ್ನು ಮಾಡಬಹುದು ಎಂದು ಊಹಿಸಲಾಗಿದೆ.