BBK 9 : ಮಿತಿಮೀರಿ ರೊಮ್ಯಾನ್ಸ್ ಮಾಡಿದ ರೂಪೇಶ್ ಶೆಟ್ಟಿ -ಸಾನ್ಯಾ ಐಯ್ಯರ್‌ಗೆ ಸುದೀಪ್ ರಿಂದ ಸಖತ್ ಕ್ಲಾಸ್ ! ‘ಈ ಮನೆ ಅದಕ್ಕಲ್ಲ’ ಎಂದು ಗುಡುಗಿದ ಕಿಚ್ಚ

‘ಬಿಗ್ ಬಾಸ್ ಕನ್ನಡ ಸೀಸನ್ 9’ರಲ್ಲಿ ನಿನ್ನೆಯ ಎಪಿಸೋಡಿನಲ್ಲಿ ಕಿಚ್ಚ ಸುದೀಪ್ ಅವರು ಮಂಗಳೂರಿನ ನಟ, ಆ್ಯಂಕರ್ ರೂಪೇಶ್ ಶೆಟ್ಟಿ (Roopesh Shetty) ಹಾಗೂ ಸಾನಿಯಾ ಅವರಿಗೆ ಸಖತ್ ಕ್ಲಾಸ್ ತಗೊಂಡಿದ್ದಾರೆ. ಹೌದು ಇತ್ತೀಚೆಗೆ ಸಾನ್ಯ ಹಾಗೂ ರೂಪೇಶ್ ಶೆಟ್ಟಿ ನಡುವೆ ಆತ್ಮೀಯತೆ ಹೆಚ್ಚಾಗಿದೆ. ಇಬ್ಬರೂ ಫ್ರೆಂಡ್ಸ್ ಎಂದು ಹೇಳುತ್ತಾ ಲಿಮಿಟ್ ಕ್ರಾಸ್ ಮಾಡ್ತಾ ಇರೋದು ಬಿಗ್ ಬಾಸ್ ಕಣ್ಣಿಗೆ ಬಿದ್ದಿದೆ. ಹಾಗಾಗಿ ನಿನ್ನೆ ಸುದೀಪ್ ಇಬ್ಬರಿಗೆ ಸೂಚ್ಯವಾಗಿ ಸೂಚಿಸುತ್ತಾ, ಮೆತ್ತಗೆ ಬಿಸಿ ಮುಟ್ಟಿಸಿದ್ದಾರೆ.

ಮನೆಯಲ್ಲಿ ರಾತ್ರಿ ಲೈಟ್ ಆಫ್ ಆದ ನಂತರವೂ ಇವರು ಹಗ್ ಮಾಡಿಕೊಂಡು ಮಾತನಾಡಿಕೊಂಡಿರುತ್ತಾರೆ. ಈಗ ಈ ಜೋಡಿಯ ರೊಮ್ಯಾನ್ಸ್ ಮಿತಿ ಮೀರಿದೆ. ಸುದೀಪ್ ಆಡಿದ ಮಾತಿಗೆ ಗಳಗಳನೆ ಅತ್ತಿದ್ದಾರೆ ರೂಪೇಶ್ ಶೆಟ್ಟಿ. ಅಷ್ಟು ಮಾತ್ರವಲ್ಲ ಈ ಎಲ್ಲಾ ತಪ್ಪನ್ನು ನಾನು ತಗೋತೀನಿ. ಈ ತರಹ ಕಾಣೋಕೆ ನನಗೆ ಇಷ್ಟವಿಲ್ಲ. ನಾನು ಮನೆಯಿಂದ ಈಗಲೇ ಹೊರಗೆ ಹೋಗ್ತೀನಿ ಅಂತಾನೂ ಹೇಳಿದ್ದಾರೆ.

https://www.instagram.com/reel/Cjs-Nx1Ia40/?utm_source=ig_web_copy_link

‘ಕ್ಯಾಪ್ಟನ್ಸಿ ಅವಧಿ ಮುಗಿದ ನಂತರ ನೀವು ಪಿಕ್‌ನಿಕ್ ಮಾಡ್ತಾ ಇದ್ರಿ. ಆ ರೂಂಗೆ ಒಂದು ಗೌರವ ಇದೆ. ಅದು ಪಿಕ್ನಿಕ್ ಸ್ಪಾಟ್ ಅಲ್ಲ’ ಎಂದರು ಸುದೀಪ್. ಇದಕ್ಕೆ ರೂಪೇಶ್ ಸ್ಪಷ್ಟನೆ ನೀಡುವ ಕೆಲಸ ಮಾಡಿದರು. ‘ನಮ್ಮ ಉದ್ದೇಶ ಆ ರೀತಿ ಇರಲಿಲ್ಲ. ನಾನು ಯಾವಾಗಲೂ ಆ ರೀತಿ ಮಾಡಿಲ್ಲ’ ಎಂದು ಸ್ಪಷ್ಟನೆ ನೀಡಲು ಬಂದರು ರೂಪೇಶ್.

‘ನೀವು ಮಿತಿಮೀರಿ ನಡೆದುಕೊಂಡಿದ್ದೀರಿ. ಆ ರೀತಿ ಆಗಿದ್ದಕ್ಕಾಗಿಯೇ ನಾವು ಹೇಳಿರೋದು. ನೀವು ಮಧ್ಯರಾತ್ರಿ ಹಗ್ ಮಾಡಿಕೊಳ್ಳಿರಿ. ಅದಕ್ಕೆ ನಾವು ಯಾವಾಗಲೂ ಅಪಸ್ವರ ತೆಗೆದಿಲ್ಲ. ಅದು ಇಲ್ಲಿ ಸಮಸ್ಯೆ ಅಲ್ಲ. ಈ ಮೊದಲು ಅನೇಕರು ಈ ಮನೆಯಲ್ಲಿ ಕ್ಲೋಸ್ ಆಗಿದ್ದರು. ಆದರೆ, ಈಗ ಇದನ್ನು ಹೇಳ್ತಿದೀವಿ ಎಂದರೆ ಅರ್ಥ ಮಾಡಿಕೊಳ್ಳಿ. ನೀವು ಈ ರೀತಿ ಮಾಡ್ತಾ ಇರೋದ್ರಿಂದಲೇ ನಮಗೆ ಕಟೆಂಟ್ ಸಿಗುತ್ತಿದೆ ಎಂದುಕೊಂಡರೆ ಈ ಮನೆ ಅದಕ್ಕಲ್ಲ’ ಎಂದು ಸುದೀಪ್ ಎಚ್ಚರಿಕೆ ನೀಡಿದರು.

ಇದರಿಂದ ನೊಂದ ರೂಪೇಶ್ ಅತ್ತಿದ್ದಾರೆ. ನಾನು ಅಂತದ್ದೇನೂ ಮಾಡಿಲ್ಲ ಎಂದು ಮನೆ ಮಂದಿಯಲ್ಲಿ ಹೇಳಿದ್ದಾರೆ. ಮನೆಮಂದಿ ಮುಖ್ಯವಾಗಿ ಅರುಣ್ ಸಾಗರ್ ಅವರು ಸಮಾಧಾನ ಮಾಡುತ್ತಾರೆ. ಆದರೂ ರೂಪೇಶ್ ನೊಂದುಕೊಂಡೇ ಇರುತ್ತಾರೆ. ಕೊನೆಗೆ ಸುದೀಪ್ ಅವರು ಬಂದು ನಿಮ್ಮ ಇಮೇಜ್ ಗೆ ಏನೂ ಧಕ್ಕೆಯಾಗಿಲ್ಲ ಎಂದು ಹೇಳುತ್ತಾರೆ. ಈ ಮಾತು ಕೇಳಿ ರೂಪೇಶ್ ಶೆಟ್ಟಿ ಅವರಿಗೆ ತಕ್ಕಮಟ್ಟಿನ ಸಮಾಧಾನ ದೊರಕಿರಬಹುದು ಎಂದು ವೀಕ್ಷಕರ ಅಭಿಪ್ರಾಯ.

ಒಟಿಟಿ ಸೀಸನ್‌ನಲ್ಲಿ ಮಿಂಚಿದ ಈ ಜೋಡಿ ಟಿವಿ ಸೀಸನ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಹಾಗಾಗಿ ಮೊದಲೇ ಒಳ್ಳೆಯ ಬಾಂಧವ್ಯ ಇರುವುದರಿಂದ ಇವರಿಬ್ಬರು ಮನೆಯಲ್ಲಿ ಒಟ್ಟಾಗಿ ಕಾಣಿಸಿಕೊಳ್ಳುತ್ತಾರೆ. ಈಗ ಇಬ್ಬರ ಮಧ್ಯೆ ಆಪ್ತತೆ ಹೆಚ್ಚುತ್ತಿರುವುದನ್ನು ಗಮನಿಸಿದ ಸುದೀಪ್ ಎಚ್ಚರಿಕೆ ನೀಡಿದ್ದು, ಮುಂದೆ ಇವರ ನಡೆ ದೊಡ್ಮನೆಯಲ್ಲಿ ಯಾವ ರೀತಿ ಇರುತ್ತೆ ಎಂದು ಕಾದು ನೋಡಬೇಕಿದೆ.

https://www.instagram.com/reel/CjvOnkYIpzL/?utm_source=ig_web_copy_link

Leave A Reply

Your email address will not be published.