ಸೂಪರ್ ಟ್ರಿಕ್ | ಎರಡೂ ಕೊಠಡಿಗೂ ಒಂದೇ ಎಸಿ!!! ಚಪ್ಪಾಳೆ ತಟ್ಟಿದ ನೆಟ್ಟಿಗರು

ಕೆಲಸ ನಿಮಿತ್ತ ಇಲ್ಲವೇ ಪ್ರವಾಸ ಹೋದಾಗ ಹೋಟೆಲ್ಗಳಲ್ಲಿ ತಂಗುವ ಅವಶ್ಯಕತೆ ಎದುರಾಗುವುದು ಸಹಜ. ಹೀಗೆ ತಂಗಿದ್ದಾಗ ಕುಟುಂಬ ಇಲ್ಲವೆ ಸ್ನೇಹಿತರು ಹಾಗೂ ಒಬ್ಬರೇ ತಂಗುವ ಸಂದರ್ಭ ಬರುವುದು ಸಾಮಾನ್ಯ.

ನಾವು ತಂಗುವ ಎಲ್ಲ ಅನುಕೂಲತೆಯನ್ನು ಹೊಂದಿದೆ ಎಂಬ ವಿಶ್ವಾಸದಿಂದ ಕೇಳಿದ ಮೊತ್ತ ನೀಡಿ ರೂಮ್ ಬುಕ್ ಮಾಡುವುದು ವಾಡಿಕೆ.
ಹೀಗೆ ಬುಕ್ ಮಾಡಿದ ರೂಮಿನಲ್ಲಿ ಬೇಕಾದ ಸೌಲಭ್ಯಗಳು ದೊರೆಯದೇ ಇದ್ದರೆ, ಸಿಟ್ಟು, ಅಸಹನೆ ಹೆಚ್ಚಾಗುವುದರಲ್ಲಿ ಸಂಶಯವಿಲ್ಲ. ಹಾಗೆಂದು ರೂಮ್ ಬುಕ್ ಮಾಡಿದ ಹಣ ವಾಪಸ್ ಸಿಗುತ್ತದೆ ಎಂದು ನಿರೀಕ್ಷಿಸಲು ಕೂಡಾ ಸಾಧ್ಯವಿಲ್ಲ.

ಹೋಟೆಲ್‌ನಲ್ಲಿ ಅಸಮರ್ಪಕ ನಿರ್ವಹಣೆ ಅಥವಾ ಅಸಹಕಾರವನ್ನು ಜೀವನದಲ್ಲಿ ಒಮ್ಮೆಯಾದರೂ ಅನುಭವವಾಗಿರುತ್ತದೆ.
ಟ್ವಿಟ್ಟರ್ ಬಳಕೆದಾರರಾದ ಅನುರಾಗ್ ಅವರು ತಮಗಾದ ಅನುಭವವನ್ನು ನೆಟ್ಟಿಗರ ಮುಂದೆ ಹಂಚಿಕೊಂಡಿದ್ದು, ಅವರು ಅನುಭವಿಸಿದ ಘಟನೆ ನಿಜಕ್ಕೂ ಅಚ್ಚರಿ ಮೂಡಿಸುತ್ತದೆ.


2011 ರಲ್ಲಿ ಮುಂಬೈನ ಹೋಟೆಲ್‌ನಲ್ಲಿ ಹವಾನಿಯಂತ್ರಿತ ಕೊಠಡಿ ಸಿಗುತ್ತದೆ ಎಂಬ ಭರವಸೆಯಿಂದ ಅನುರಾಗ್ ಕೊಠಡಿಯನ್ನು ಬುಕ್ ಮಾಡಿದ್ದಾರೆ.
ಹೋಟೆಲಿನ ವ್ಯವಸ್ಥಾಪಕರು ಎಸಿ ಕೊಠಡಿಯನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ. ಆದರೆ, ಆ ಕೊಠಡಿ ಅಕ್ಷರಶಃ ವಿಭಜಿತ ಎಸಿ ರೂಂ ಆಗಿತ್ತು.

ಅನುರಾಗ್‌ಗೆ ಸ್ಪ್ಲಿಟ್ ಎಸಿ ಇರುವ ಕೋಣೆ ಸಿಕ್ಕಿತಾದರೂ, ಆಶ್ಚರ್ಯಕರವಾಗಿ ಎರಡು ಪ್ರತ್ಯೇಕ ಕೊಠಡಿಗಳಿಗೆ ಸೇವೆ ಒದಗಿಸುವ ರೀತಿಯಲ್ಲಿ ಎಸಿ ಅಳವಡಿಸಲಾಗಿತ್ತು. ಎರಡು ಕೊಠಡಿಗಳ ನಡುವೆ ಗೋಡೆಯಲ್ಲಿ ರಂಧ್ರವನ್ನು ಮಾಡಲಾಗಿದ್ದು, ಒಂದು ಎಸಿ ಘಟಕ ಎರಡೂ ಕೊಠಡಿಗಳನ್ನು ಏಕಕಾಲದಲ್ಲಿ ಕೂಲ್ ಆಗಿಸುತ್ತಿತ್ತು‌.

ಪಕ್ಕದ ಕೋಣೆಯಲ್ಲಿ ಇಬ್ಬರು ಅಂಕಲ್‌ಗಳು ಬೆಳಿಗ್ಗೆ 4 ಗಂಟೆಯವರೆಗೆ ‘ಆಯ್ ಗಣಪತ್ ಚಲ್ ದಾರು ಲಾ’ ಹಾಡನ್ನು ಗುಣುಗುತ್ತಾ ಕಾಲ ಕಳೆದಿರುವ ಸವಿ ನೆನಪನ್ನು ಮೆಲುಕು ಹಾಕಿರುವ ಅನುರಾಗ್ ಫೋಟೊವನ್ನು ಶೇರ್ ಮಾಡಿದ್ದಾರೆ.


ಇವರ ಟ್ವೀಟ್ ನೆಟ್ಟಿಗರನ್ನು ನಗೆಗಡಲಲ್ಲಿ ತೇಲಿಸಿದ್ದು, ಟ್ವಿಟರ್‌ನಲ್ಲಿ ಅವರ ಟ್ವೀಟ್‌ಗೆ ನೂರಾರು ಕಾಮೆಂಟ್‌ಗಳು, ರಿಟ್ವೀಟ್‌ಗಳು ಕೂಡ ಬಂದಿವೆ. ಏರ್ ಕಂಡಿಷನರ್‌ಗೆ ರಿಮೋಟ್ ಅನ್ನು ಹೊಂದಿರುವ ಕೊಠಡಿ ಯಾವುದು ಎಂದು ಕೆಲವರು ಅಚ್ಚರಿ ಪಟ್ಟಿದ್ದು ಕೂಡ ಇದೆ.


ಏನೇ ಆಗಲಿ.. ಸವಿ ಸವಿ ನೆನಪು.. ಸಾವಿರ ನೆನಪು ಎದೆಯಾಳದಲ್ಲಿ ಅಚ್ಚಳಿಯದೆ ಉಳಿದಿರುವ ಸುಂದರ ನೆನಪನ್ನು ಅನುರಾಗ್ ಹಂಚಿ ಕೊಂಡು ಉಳಿದವರನ್ನು ಕೂಡ ನಗಿಸುವ ಪ್ರಯತ್ನ ಮಾಡಿದ್ದಾರೆ.

Leave A Reply

Your email address will not be published.