Home Entertainment ಬಿಗ್ ಬಾಸ್ ಮನೆಗೆ ಪುಟಾಣಿ ಮಕ್ಕಳು

ಬಿಗ್ ಬಾಸ್ ಮನೆಗೆ ಪುಟಾಣಿ ಮಕ್ಕಳು

Hindu neighbor gifts plot of land

Hindu neighbour gifts land to Muslim journalist

ನಮ್ಮಮ್ಮ ಸೂಪರ್ ಸ್ಟಾರ್  ಸೀಸನ್ 2 ಶನಿವಾರದಿಂದ ಆರಂಭವಾಗಲಿದೆ. ಇದರ ಪ್ರೊಮೋ ಈಗಾಗಲೇ ಬಿಡುಗಡೆಗೊಂಡಿದ್ದು ಸಖತ್ ವೈರಲ್ ಆಗಿದೆ. ಎಲ್ಲರೂ ಆ ಪುಟ್ಟ ಪುಟ್ಟ  ಮಕ್ಕಳನ್ನು ನೋಡಲು ಕಾಯ್ತಾ ಇದ್ದಾರೆ. ಇದೀಗ ಆ ಪುಟಾಣಿ ಮಕ್ಕಳು ಬಿಗ್ ಬಾಸ್ ಮನೆಗೆ ಹೋಗಿದ್ದಾರೆ.

ಹೌದು, ದೊಡ್ಡ ಮನೆಗೆ ಚಿಕ್ಕ ಮಂದಿ ಎಂಟ್ರಿ ಕೊಟ್ಟಿದ್ದಾರೆ. ಬೆಳಂಬೆಳಗ್ಗೆ  ಎಲ್ರೂ ಏಳುವ ಮುಂಚೆಯೇ ಮಕ್ಕಳು ಹೋಗಿ, ಮನೆ ಮಂದಿಗೆ ಕೀಟಲೆ ಕೊಟ್ಟು ಎಬ್ಬಿಸ್ತಾ ಇದ್ದಾರೆ. ಇದರ ಪ್ರೊಮೋ ಈಗಾಗಲೇ ರಿಲೀಸ್ ಕೂಡ ಆಯ್ತು. ಅದನ್ನು ನೋಡೋಕೆ ಸಖತ್ ಮಜವಾಗಿದೆ.

ಸಂಬರಗಿಯ ತಲೆ ಗೂದಲು ಹಿಡಿದು ಎಳೆಯುತ್ತಾ, ಅರುಣ್ ಸಾಗರ್ ನ ಹೆಸ್ರು ತಪ್ಪಾಗಿ ಹೇಳುತ್ತಾ ಫುಲ್ ಗಮ್ಮತ್ ಮಾಡ್ತಾ ಇದ್ದಾರೆ ಸೂಪರ್ ಸ್ಟಾರ್ ಮಕ್ಕಳು. ಇದರ ನಡುವೆ ಪ್ರಶಾಂತ್ ಮತ್ತು ಮಯೂರಿ ಭಾವುಕರಾಗ್ತಾರೆ.

ಅಶ್ವಿನಿಗೆ ತನ್ನ ಒಂದೂವರೆ ವರ್ಷದ ಮಗ ತುಂಬಾ ನೆನಪಿಗೆ ಬಂದು ಜೋರಾಗಿ ಅಳುತ್ತಾಳೆ. ಹಾಗೂ ಸಂಬರಗಿಗೂ ಕೂಡಾ ತನ್ನ ಮಗನ ನೆನಪಾಗಿ ಅಳುತ್ತಾನೆ. ಮೋಜು ಮಸ್ತಿಗಳ ನಡುವೆ  ಎಮೋಷನಲ್ ಆದ ಎಪಿಸೋಡ್ ನೋಡೋಕೆ ವೀಕ್ಷಕರು ಕಾತುರದಿಂದ ಕಾಯ್ತಾ ಇದ್ದಾರೆ.