OMG : ಅಬ್ಬಾ!!! 1880 ರ ಈ ‘ಲೆವಿಸ್ ಜೀನ್ಸ್’ ಸೇಲಾದ ರೇಟ್ ಕೇಳಿದರೆ ನೀವು ಹೌಹಾರೋದು ಖಂಡಿತ!!!
ಹಿಂದಿನವರ ಜೀವನ ಶೈಲಿಯೇ ವಿಭಿನ್ನ, ಅದರಲ್ಲೂ ಮೊದಲಿನವರು ಬಳಸುತ್ತಿದ್ದ ವಸ್ತುಗಳು, ಪಳೆಯುಳಿಕೆ ಕಾಣಲು ಸಿಗುವುದು ವಿರಳ. ಹಳೆಯ ಜೀವನ ಶೈಲಿಯಲ್ಲಿ ಬಳಸುತ್ತಿದ್ದ ವಸ್ತುಗಳು ದೊರೆತಾಗ ದೊಡ್ದ ಮೌಲ್ಯಕ್ಕೆ ಮಾರಾಟ ಮಾಡಲಾಗುತ್ತದೆ.
ತನ್ನದೇ ಟ್ರೆಂಡ್ ಹೊಂದಿರುವ ಜೀನ್ಸ್ ಎಲ್ಲರೂ ಬಯಸುವ ಉಡುಪಿನ ವೈವಿಧ್ಯವಾಗಿದ್ದು, ಹುಡುಗರು,ಮಹಿಳೆಯರು ಎಂಬ ಬೇಧವಿಲ್ಲದೆ, ಎಲ್ಲರೂ ನೆಚ್ಚಿಕೊಳ್ಳುವ ಬಟ್ಟೆಯಾಗಿದೆ.
ಸಾಮಾನ್ಯವಾಗಿ ಜೀನ್ಸ್ ಮಾರಾಟ ವಾಗುವಾಗ ಹೆಚ್ಚು ಎಂದರೆ 5000 ಇಲ್ಲವೇ ಇನ್ನೂ ಹೆಚ್ಚೆಂದರೆ 10000 ಮೌಲ್ಯ ತೆತ್ತುಕೊಂಡು ಕೊಳ್ಳುತ್ತೇವೆ.
ಆದರೆ, ಲಕ್ಷಗಟ್ಟಲೆ ಬೆಲೆಬಾಳುವ ಜೀನ್ಸ್ ಪ್ಯಾಂಟ್ ನೋಡಿದ್ದೀರಾ????
ಹಳೆ ಶತಮಾನದ ಜೀನ್ಸ್ ಬಾರಿ ದೊಡ್ದ ಮೊತ್ತಕ್ಕೆ ಮಾರಾಟ ವಾದ ಪ್ರಕರಣ ವರದಿಯಾಗಿದೆ.
ಅಕ್ಟೋಬರ್ 1 ರಂದು ನ್ಯೂ ಮೆಕ್ಸಿಕೋದಲ್ಲಿ ನಡೆದ ಹರಾಜಿನಲ್ಲಿ 19 ನೇ ಶತಮಾನದ ಲೆವಿಸ್ ಜೀನ್ಸ್‌ವೊಂದು ಬರೋಬ್ಬರಿ $ 76,000 (62,46,364 ರೂ.)ಗೆ ಮಾರಾಟವಾಗಿದೆ .
ಅದರ ಲೇಬಲ್ ಬಿಳಿಯ ಕಾರ್ಮಿಕರಿಂದ ಮಾಡಲ್ಪಟ್ಟ ಏಕೈಕ ವಿಧವಾಗಿದೆ. 1882 ಮತ್ತು 1890 ರ ನಡುವೆ ಚೀನಿಯರ ವಿರುದ್ಧ ಆ ರೀತಿಯ ಅಭಿಯಾನವು ಅಸ್ತಿತ್ವದಲ್ಲಿದ್ದುದರಿಂದ ಜೀನ್ಸ್ ಆ ಅವಧಿಗೆ ಸೇರಿತ್ತು ಎಂದು ಅಂದಾಜಿಸಲಾಗಿದೆ.
ಲೆವಿಯ ಒನ್-ಪಾಕೆಟ್ ಬಕಲ್ ಬ್ಯಾಕ್ ಜೀನ್ಸ್ ಇನ್ನೂ ಧರಿಸಬಹುದಾದ ಸ್ಥಿತಿಯಲ್ಲಿದ್ದು, ಇದು ಅಮೆರಿಕದ ಪಶ್ಚಿಮದಲ್ಲಿ ವರ್ಷಗಳ ಹಿಂದೆ ಕೈಬಿಟ್ಟ ಚಿನ್ನದ ಗಣಿಯಲ್ಲಿ ಕಂಡುಬಂದಿದೆ ಎನ್ನಲಾಗಿದೆ. ಇದು 1880 ರ ದಶಕದ್ದಾಗಿದ್ದು, ಜೊತೆಗೆ ಈ ದಿನಾಂಕವನ್ನು ಕೂಡ ವರದಿ ಮಾಡಲಾಗಿದೆ.
ಸ್ಯಾನ್ ಡಿಯಾಗೋದ 23 ವರ್ಷ ವಯಸ್ಸಿನ ವಿಂಟೇಜ್ ಬಟ್ಟೆ ವ್ಯಾಪಾರಿ ಕೈಲ್ ಹೌಪರ್ಟ್ ಈ ಜೀನ್ಸ್ ಅನ್ನು ಖರೀದಿಸಿದ್ದಾರೆ. ಹರಾಜಿನ ವಿಡಿಯೋ ಮತ್ತು ಜೀನ್ಸ್ ನ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.