ತಮ್ಮ ಮನಸ್ಸಿನ ಮೇಲೆ ನಿಯಂತ್ರಣ ಇಲ್ಲದ ಪುರುಷರು ಹಿಜಾಬ್ ಧರಿಸಲು ಮಹಿಳೆಯರಿಗೆ ಒತ್ತಾಯ ಮಾಡುತ್ತಾರೆ- ಸಚಿವ ಅನಿಲ್ ವಿಜ್

Share the Article

ರಾಜ್ಯದಲ್ಲಿ ಶಾಲೆಯಲ್ಲಿ ಮಾತ್ರವಲ್ಲದೇ ಹೊರಗೆ ಕಾಲಿಡುವಾಗ ಹಿಜಾಬ್ ಧರಿಸಿಯೇ ಓಡಾಡಬೇಕು ಎಂಬ ಹೊಸ ವಿಚಾರ ರಾಜ್ಯದಲ್ಲಿ ಚರ್ಚಾ ವಿಷಯವಾಗಿ ಮಾರ್ಪಟ್ಟು, ಅದರಿಂದ ಹಿಂದೂ – ಮುಸ್ಲಿಂ ವಿರೋಧಿ ಬಣಕ್ಕೆ ನಾಂದಿಯಾಗಿ ಗಲಾಟೆಗಳು, ಪ್ರತಿಭಟನೆಗಳು ನಡೆದದ್ದು ಎಲ್ಲರಿಗೂ ನೆನಪಿರಬಹುದು..ಸದ್ಯ ಶಾಲೆಗಳಲ್ಲಿ ಸಮವಸ್ತ್ರದ ಹೊರತು ಬೇರೆ ಉಡುಪು ಧರಿಸಲು ಕೋರ್ಟ್ ಅವಕಾಶ ಕಲ್ಪಿಸಿಲ್ಲ.

ಇತ್ತೀಚಿನ ದಿನಗಳಲ್ಲಿ ಹಿಜಾಬ್ ವಿಚಾರ ರಾಜ್ಯದಲ್ಲಿ ಮಾತ್ರವಲ್ಲದೆ ವಿದೇಶದಲ್ಲಿ ಕೂಡ ಸಂಚಲನ ಸೃಷ್ಟಿಸಿದೆ. ವಿದೇಶದಲ್ಲಿ ಅದರಲ್ಲೂ ಪ್ರಸ್ತುತ ಇರಾನ್ ನಲ್ಲಿ ಹಿಜಾಬ್ ವಿರೋಧಿ ಪ್ರತಿಭಟನೆಗಳು ತೀವ್ರ ಸ್ವರೂಪ ಪಡೆದುಕೊಂಡಿದೆ.

ಗಲಭೆಕೋರರ ಮೇಲೆ ಅಶ್ರುವಾಯು ಪ್ರಯೋಗಿಸುವ ಜೊತೆಗೆ ಕೆಲವೆಡೆ ಪ್ರತಿಭಟನಾಕಾರರ ಮೇಲೆ ಪೊಲೀಸರು ಗುಂಡು ಹಾರಿಸಿರುತ್ತಿರುವ ಘಟನೆಯೂ ನಡೆಯುತ್ತಿದೆ.

ಹರ್ಯಾಣದ ಕ್ಯಾಬಿನೆಟ್ ಸಚಿವ ಅನಿಲ್ ವಿಜ್ ಅವರು ಈಗ ನಡೆಯುತ್ತಿರುವ ಹಿಜಾಬ್ ವಿವಾದದ ಬಗ್ಗೆ ಮಾತನಾಡುತ್ತಾ, ತಮ್ಮ ಮೇಲೆ ಯಾವುದೇ ನಿಯಂತ್ರಣವಿಲ್ಲದ ಪುರುಷರು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಮಹಿಳೆಯರನ್ನು ಹಿಜಾಬ್ ಧರಿಸುವಂತೆ ಒತ್ತಾಯಿಸುತ್ತಾರೆ ಅಲ್ಲದೇ, ಪುರುಷರು ತಮ್ಮ ಮನಸ್ಸನ್ನು ಬಲಪಡಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.

ಪುರುಷರು ತಮ್ಮ ಬಯಕೆಗಳು ಅಥವಾ ಉತ್ಸಾಹವನ್ನು ನಿಯಂತ್ರಿಸಲು ಸಾಧ್ಯವಾಗದೇ ಇದ್ದಾಗ ಮಹಿಳೆಯರನ್ನು ಹಿಜಾಬ್ ಧರಿಸಲು ಮತ್ತು ತಮ್ಮನ್ನು ತಾವು ಸಂಪೂರ್ಣವಾಗಿ ಮುಚ್ಚಿಕೊಳ್ಳುವಂತೆ ಬಲವಂತಪಡಿಸುತ್ತಾರೆ. ಮಾನಸಿಕವಾಗಿ ತಮ್ಮನ್ನು ತಾವು ನಿಯಂತ್ರಿಸಿಕೊಳ್ಳಲು ಆಗದೇ ಮಹಿಳೆಯರಿಗೆ ಶಿಕ್ಷೆ ನೀಡುತ್ತಿದ್ದಾರೆ.

ಮಹಿಳೆಯರ ಸ್ವಾತಂತ್ಯವನ್ನು ಕಸಿದುಕೊಂಡಿದ್ದಾರೆ. ಇದು ಘೋರ ಅನ್ಯಾಯ ಎಂದು ಹೇಳಿದ್ದಾರೆ. ಹಿಜಾಬ್ ಪ್ರಕರಣದ ಬಗ್ಗೆ ಮುಖ್ಯ ನ್ಯಾಯಮೂರ್ತಿಗಳು ತೀರ್ಪು ಹೊರಡಿಸುವ ಮುನ್ನವೇ ಸಚಿವರು ಈ ಹೇಳಿಕೆ ನೀಡಿದ್ದು, ಇದರ ಕುರಿತಾಗಿ ಭಾರಿ ಚರ್ಚೆಯಾಗುವ ಸಾಧ್ಯತೆ ದಟ್ಟವಾಗಿದೆ.


ಹಿಜಾಬ್ ಧರಿಸಲು ಅನುಮತಿ ಕೋರಿ ಹೈಕೋರ್ಟ್ ಆದೇಶ ಪ್ರಶ್ನಿಸಿ ವಿದ್ಯಾರ್ಥಿನಿಯರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳು ವಿಭಿನ್ನ ಅಭಿಪ್ರಾಯದ ಹಿನ್ನೆಲೆಯಲ್ಲಿ ಹಿಜಾಬ್ ಪ್ರಕರಣವನ್ನು ಸಿಜೆಐ ಪೀಠಕ್ಕೆ ವರ್ಗಾವಣೆ ಮಾಡಿ ಆದೇಶಿಸಿದೆ.

Leave A Reply