ಬೆಳಗಿನ ತಿಂಡಿಗೆ ಇದನ್ನೊಮ್ಮೆ ಟ್ರೈ ಮಾಡಿ ನೋಡಿ
ಬಗೆ ಬಗೆ ರೀತಿಯ ತಿಂಡಿಗಳನ್ನು ಮಾಡುವುದು ಈಗಿನ ಹವ್ಯಾಸವಾಗಿದೆ. ಅದರಲ್ಲೂ ಮನೆಯಲ್ಲಿ ಸಣ್ಣ ಮಕ್ಕಳಿದ್ದರಂತೂ ಏನಾದರೂ ಬಗೆ ಬಗೆ ರೀತಿಯ ತಿಂಡಿಗಳು ಮಾಡ್ಲೇಬೇಕಾಗುತ್ತೆ. ಪ್ರತಿನಿತ್ಯ ನಮ್ಮ ಮನೆಯಲ್ಲಿ ದೋಸೆನೇ ಮಾಡುತ್ತಾರೆ ಎನ್ನುವುದು ಅದೆಷ್ಟೋ ಮಕ್ಕಳ ದೂರು ಕೂಡ ಆಗಿರುತ್ತದೆ. ನಿಮಗೆ ಇವತ್ತು ಒಂದು ಸೂಪರ್ ಆಗಿರೋ ಬೆಳಗಿನ ತಿಂಡಿ ಹೇಳುತ್ತೇವೆ ಕೇಳಿ
ಹೌದು. ಬೆಳಗಿನ ತಿಂಡಿಗೆ ಆರೋಗ್ಯಕರ ಸೋಯಾ ವೆಜ್ ಪ್ಯಾನ್ ಕೇಕ್ ಮಾಡಿ. ಮಾಡಲು ಸುಲಭ ಮಾಡಿ ಆದಮೇಲೆ ಅದನ್ನು ಚಪ್ಪರಿಸಿಕೊಂಡು ತಿನ್ನುತ್ತಾರೆ ನೋಡಿ.
ಸೋಯಾ ವೆಜ್ ಪ್ಯಾನ್ ಕೇಕ್ ತಯಾರಿಸಲು ಬೇಕಾದ ಪದಾರ್ಥಗಳು:-ಒಂದುವರೆ ಕಪ್ ನೆನೆಸಿದ ಸೋಯ ಬಿನ್, ಮುಕ್ಕಾಲು ಕಪ್ ನೆನೆಸಿದ ಅಕ್ಕಿ, ಒಂದುವರೆ ಕಪ್ ಮೊಸರು, ಎರಡು ಸಣ್ಣಗೆ ಹೆಚ್ಚಿದ ಹಸಿರು ಮೆಣಸಿನಕಾಯಿ, ಒಂದು ಟೀ ಸ್ಪೂನ್ ತುರಿದ ಶುಂಠಿ, ಅರ್ಧ ಕಪ್ ಸಣ್ಣದಾಗಿ ಹೆಚ್ಚಿದ ಕ್ಯಾಪ್ಸಿಕಂ, ಅರ್ಧ ಕಪ್ಪು ತುರಿದ ಕ್ಯಾರೆಟ್, ಒಂದು ಸಣ್ಣಗೆ ಹೆಚ್ಚಿದ ಟೊಮ್ಯಾಟೋ, ರುಚಿಗೆ ತಕ್ಕಷ್ಟು ಉಪ್ಪು, ಅರ್ಧ ಟೀ ಸ್ಪೂನ್ ಜೀರಿಗೆ, ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಮತ್ತು ಅಡಿಗೆ ಸೋಡಾ ಬೇಕಾಗುತ್ತದೆ.
ತಯಾರಿಸುವ ವಿಧಾನ:- ಸೋಯಾಬಿನ್ ಮತ್ತು ಅಕ್ಕಿಯನ್ನು ಸಪರೇಟ್ ಆಗಿ ಎರಡು ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ. ನಂತರ ಸೋಯಾಬೀನ್ ಅನ್ನು ಚೆನ್ನಾಗಿ ಮಿಕ್ಸ್ ಮಾಡಿ. ಮಿಕ್ಸರ್ ಜಾರಿಗೆ ನೆನೆಸಿದ ಅಕ್ಕಿ, ಮೊಸರು, ಹಸಿಮೆಣಸಿನಕಾಯಿ ಹಾಗೂ ಶುಂಠಿ ಹಾಕೀ ಅವುಗಳನ್ನು ನುಣ್ಣಗೆ ರುಬ್ಬಿರಿ.
ಒಂದು ಬಟ್ಟಲಿನಲ್ಲಿ ಅಕ್ಕಿ ಪೇಸ್ಟ್ ಮತ್ತು ರುಬ್ಬಿದ ಸೋಯಾಬೀನ್ ಜೊತೆಗೆ ಸಣ್ಣದಾಗಿ ಕೊಚ್ಚಿದ ಕ್ಯಾಪ್ಸಿಕಂ, ತುರಿದ ಕ್ಯಾರೆಟ್, ಸಣ್ಣದಾಗಿ ಹೆಚ್ಚಿದ ಟೊಮೇಟೊ, ರುಚಿಗೆ ತಕ್ಕ ಉಪ್ಪು, ಜೀರಿಗೆ ಮತ್ತು ಕಟ್ ಮಾಡಿದ ಕೊತ್ತಂಬರಿ ಸೊಪ್ಪು ಹಾಕಿ ಎಲ್ಲವನ್ನು ಚೆನ್ನಾಗಿ ಮಿಶ್ರಣ ಮಾಡಿ. ಬೇಕಾದರೆ ಸ್ವಲ್ಪ ಪ್ರಮಾಣದಲ್ಲಿ ನೀರನ್ನು ಸೇರಿಸಿ.
ಇವೆಲ್ಲ ಚೆನ್ನಾಗಿ ಮಿಶ್ರಣವಾದ ನಂತರ ಕಾಲು ಸ್ಪೂನಿನಂತ ಸ್ವಲ್ಪ ಅಡಿಗೆ ಸೋಡಾ ಬೆರೆಸಿ ಮಿಶ್ರಣ ಮಾಡಿ. ನಿಮಗೆ ಕೇಕ ಯಾವ ರೀತಿಯಲ್ಲಿ ಬೇಕು ಆ ರೀತಿಯಾಗಿ ಶೇಪ್ ಕೊಡಿ.
ಸೋಯಾ ವೆಜ್ ಪ್ಯಾನ್ ಕೇಕ್ ತಯಾರಿಸುವುದು ಹೇಗೆ?
ಬಾಂಡಲಿಗೆ ಸ್ವಲ್ಪ ಎಣ್ಣೆ ಹಾಕಿ ಬಿಸಿ ಮಾಡಬೇಕು. ತದನಂತರ ಅದಕ್ಕೆ ಎರಡು ಚಮಚ ಹಿಟ್ಟು ಹಾಕಿ, ರೌಂಡ್ ಆಕಾರಕ್ಕೆ ತರಬೇಕು. ಈಗ ಅದನ್ನು ಮುಚ್ಚಿ ಮತ್ತು ಕಡಿಮೆ ಉರಿಯಲ್ಲಿ ಎರಡು ನಿಮಿಷ ಬೇಯಿಸಿ. ಎರಡು ನಿಮಿಷಗಳ ನಂತರ ಸ್ವಲ್ಪ ಎಣ್ಣೆ ಸಿಂಪಡಿಸಿ ಪ್ಯಾನ್ ಕೇಕ್ ನ ಮತ್ತೊಂದು ಬದಿಯನ್ನು ಚೆನ್ನಾಗಿ ಬೇಯಿಸಿ. ನಂತರ ತಟ್ಟೆಗೆ ಹಾಕಿ ಇದೀಗ ಹೊಸ ರೆಸಿಪಿ ಆದ ಸೋಯಾ ವೆಜ್ ಪ್ಯಾನ್ ಕೇಕ್ ಸಿದ್ಧವಾಗಿರುತ್ತದೆ. ಚಪ್ಪರಿಸಿಕೊಂಡು ತಿನ್ನಿ.