‘ ಬಿಗ್‍ಬಾಸ್ ನಲ್ಲಿ ಲವ್ ಜಿಹಾದ್ ‘ | ಈ ಕಾರಣಕ್ಕೆ ದೊಡ್ದ ಮನೆಯಿಂದ ನವಾಜ್ ನನ್ನು ಹೊರಹಾಕಿತಾ ಕಲರ್ಸ್ ಚಾನೆಲ್ ?!
ಬಿಗ್ ಬಾಸ್ ಮನೆಯೊಳಗೆ ಭರವಸೆಯಿಂದ ಕಾಲಿಟ್ಟಿದ್ದ ನವಾಜ್ ಪಾಲಿಗೆ ಬಿಗ್ ಬಾಸ್ ವಾಸ ಅಂತ್ಯವಾಗಿದೆ. ಬಿಗ್ ಬಾಸ್ ನ ದೊಡ್ಡ ಮನೆಯ ದೊಡ್ಡ ಸ್ಲೈಡಿಂಗ್ ಬಾಗಿಲಿನ ಮೂಲಕ ಈ ಹುಡುಗ ಎರಡನೇ ವಾರಕ್ಕೆ ಮನೆಯಿಂದ ಆಚೆ ಬರುವಂತಾಗಿದೆ. ನವಾಜ್ ಚೆನ್ನಾಗಿ ಆಡುತ್ತಾನೆ ಎನ್ನುವ ನಂಬಿಕೆ ದೊಡ್ಡ ಹುಸಿ ಆಗಿದ್ದು, ಈ ಕಾರಣಕ್ಕಾಗಿ ಆ ಹುಡುಗನನ್ನು ಎಲಿಮಿನೇಟ್ ಆಗಿದ್ದಾನೆ. ಅರುಣ್ ಸಾಗರ್ ನ ಜೋಡಿದಾರನ ಥರ ಸದಾ ಆತನಿಗೆ ಅಂಟಿಕೊಂಡೇ ಇರುತ್ತಿದ್ದ ಈ ಹುಡುಗ, ಅರುಣ್ ಸಾಗರ್ ಅವರನ್ನು ಒಬ್ಬಂಟಿ ಮಾಡಿ ಬಂದಿದ್ದಾರೆ.
ಆತ ಬಿಗ್ ಬಾಸ್ ಮನೆಯೊಳಗೆ ಕಾಲಿಟ್ಟ ಕೆಲ ದಿನಗಳು ಕ್ವೈಟ್ ಸೈಲೆಂಟ್. ಆನಂತರ ಎಲ್ಲರೊಂದಿಗೆ ಬೆರೆತರು. ಕಳೆದ ವಾರ ದೊಡ್ಮನೆಯಿಂದ ಹೊರಬಂದ ಐಶ್ವರ್ಯ ಜೊತೆ ಲಹರಿಗೆ ಹೋಗಿದ್ದ ನವಾಜ್. ” ದೊಡ್ಡದಾಗಿ ಪ್ರೀತಿ ಮಾಡೋಣ ಸಣ್ಣದಾಗಿ ಮಕ್ಕಳು ಮಾಡೋಣ ” ಎಂದು ಎಂದು ಆಕೆಗೆ ಪ್ರಪೋಸ್ ಕೂಡಾ ಮಾಡಿದ್ದ. ಆಗ ಬಿಗ್ ಬಾಸ್ ನಲ್ಲಿ ಶುರು ಆಗಿದೆ ಲವ್ ಜಿಹಾದ್ ಅಂತ ಮನೆಯ ಹೊರಗೆ ಗದ್ದಲ ಎದ್ದಿತ್ತು. ಹಿಂದೂ ಪರ ಸಂಘಟನೆಗಳು ಪ್ರತಿಭಟನೆ ಕೂಗು ಹಾಕಿದ್ದವು. ಇದೀಗ ಆತನಿಗೆ ಮುಳುವಾದಂತಿದೆ. ಕೆಲವೇ ವಾರಗಳ ಒಳಗೆ ಆತ ದೊಡ್ಮನೆಯಿಂದ’ ಸಣ್ಣದಾಗಿ’ ಹೊರ ಬರುವಂತಾಗಿದೆ. ಒಂದು ಮೂಲಗಳ ಪ್ರಕಾರ ಕನ್ನಡ ವಾಹಿನಿ ಕಲರ್ಸ್ ಕನ್ನಡ ಇದೆಲ್ಲ ರಗಳೆ ಬೇಡ ಎಂದು ಆತನನ್ನು ಹೊರದೂಡಿದೆ ಎನ್ನಲಾಗುತ್ತಿದೆ.
ಅಲ್ಲದೆ ಆತ ಟಾಸ್ಕ್ ನಲ್ಲಿ ಯಾವಾಗಲೂ ಹಿಂದುಳಿಯುತ್ತಲೇ ಹೋದರು. ಹಾಗಾಗಿ ಎರಡನೇ ವಾರಕ್ಕೆ ಮನೆಯಿಂದ ಆಚೆ ಬರುವಂತಾಗಿದೆ. ಮೌನಿ ಅನಿಸಿದ್ದ ನವಾಜ್, ಒಂದು ವಾರ ಕಳೆಯುತ್ತಿದ್ದಂತೆ ಮನೆಯಲ್ಲಿ ಇದ್ದ ಕೆಲವರನ್ನು ಹೊಡೆಯಬೇಕು ಅನಿಸ್ತಿದೆ ಅಂತ ಹೇಳಿ ಆತಂಕದ ವಾತಾವರಣ ಸೃಷ್ಟಿ ಮಾಡಿದ್ದ. ಅಲ್ಲದೆ ಆಗಾಗ್ಗೆ ಕಾಲು ಕೆರೆದುಕೊಂಡು ಜಗಳಕ್ಕೂ ನಿಲ್ಲುತ್ತಿದ್ದ. ಅರುಣ್ ಸಾಗರ್ ಹೊರತಾಗಿ ಉಳಿದವರ ಜೊತೆ ಅಷ್ಟಾಗಿ ಬೆರೆಯದೇ ಇರುವ ಇನ್ನೊಂದು ಕಾರಣ ಆತನನ್ನು ಮನೆಯಿಂದ ಹೊರಕ್ಕೆ ದೂಕಿದೆ.
ಮಹಾ ಸುಳ್ಳುಗಾರನ ಈ ನವಾಜ್ ? ಈ ವಾರ ನವಾಜ್ ಗೆ ಹೊಸ ಹೊಸ ಬಟ್ಟೆಗಳನ್ನು ಬಿಗ್ ಬಾಸ್ ಮನೆಗೆ ಕಳುಹಿಸಿ ಕೊಟ್ಟಿದ್ದರು. ಅದನ್ನು ನೋಡಿ ಭಾವುಕರಾಗಿದ್ದ ಈತ, “ಜೀವನದಲ್ಲಿ ಎರಡೇ ಎರಡು ಬಟ್ಟೆಗಳನ್ನು ಕಂಡಿದ್ದೆ. ಯಾರೋ ಇಷ್ಟೊಂದು ಹೊಸ ಬಟ್ಟೆಗಳನ್ನು ಕಳುಹಿಸಿದ್ದಾರೆ ” ಎಂದು ಕಣ್ಣೀರಿಟ್ಟಿದ್ದ. ಈ ಕಣ್ಣೀರು ಕೂಡ ಅವರನ್ನು ಕೈ ಹಿಡಿಯದೆ ಹೋಗಲು ಕೂಡಾ ಕಾರಣ ಉಂಟು. ಆತ ಈ ರೀತಿ ಹೇಳಿಕೆ ನೀಡುತ್ತಿದ್ದಂತೆ ಮನೆಯ ಹೊರಗಡೆ ಸೋಶಿಯಲ್ ಮೀಡಿಯಾ ಎತ್ತು ಕೊಂಡಿದೆ. ದಿನಕ್ಕೊಂದು ಬಟ್ಟೆ ಹಾಕಿ ಶೋಕಿ ಮಾಡಿಕೊಂಡು ತಿರುಗಾಡುತ್ತಿರುವ ಈತ ಹೇಳಿದ್ದು ಸುಳ್ಳು ಎಂದು ಟ್ರೋಲಿಗರು ಆತನ ಅಂಗಿ ಪ್ಯಾಂಟು ಜಗ್ಗಿಕೊಂಡು ಟ್ರೋಲ್ ಮಾಡಿದ್ದರು. ಈ ಹಸಿ ಹಸಿ ಸುಳ್ಳು ಕೂಡ ಆತನ ಪಾಲಿಗೆ ಮುಳುವಾಗಿದೆ. ಬಿಗ್ ಬಾಸ್ ಮನೆ ರಿಯಾಜ್ ಪಾಲಿಗೆ ಮುಚ್ಚಿದೆ.