SBI ಗ್ರಾಹಕರಿಗೆ ಮುಖ್ಯವಾದ ಮಾಹಿತಿ | ATM ನಿಂದ ಹಣ ಪಡೆಯಲು ಇನ್ನುಮುಂದೆ OTP ಬೇಕು

ಇತ್ತೀಚಿಗೆ ATM ನಲ್ಲಿ ಕಳ್ಳತನ ಪ್ರಕರಣ ಹಲವಾರು ರೀತಿ ಕಂಡು ಬರುತ್ತಿದೆ. ಎಲ್ಲಿಯ ತನಕ ಜನ ಮೋಸ ಹೋಗುತ್ತಾರೋ ಅಲ್ಲಿಯ ತನಕ ಕಳ್ಳರು ತಮ್ಮ ಜಾಣ್ಮೆಯನ್ನು ಜಳಪಿಸುತ್ತಾರೆ. ಅಂದರೆ ಗ್ರಾಹಕರನ್ನು ವಂಚಿಸಲು ಮತ್ತು ಅವರ ಖಾತೆಗಳಿಂದ ಹಣವನ್ನು ಕದಿಯಲು ವಿವಿಧ ಆವಿಷ್ಕಾರ ತಂತ್ರಗಳನ್ನು ಬಳಸುತ್ತಾರೆ. ಟೆಕ್ನಲಾಜಿ ಅಷ್ಟು ಮುಂದುವರಿದಿದೆ. ಹಣ ಹಿಂಪಡೆಯಲು ಹೆಚ್ಚಿನ ಜನರು ಎಟಿಎಂಗಳನ್ನು ಬಳಸುವುದರಿಂದ ಸಮಸ್ಯೆ ಹೆಚ್ಚಾಗಿದೆ. ವಂಚನೆಯಿಂದ ಜನರನ್ನು ರಕ್ಷಿಸಲು, ಎಸ್‌ಬಿಐ ಈಗ ಎಟಿಎಂಗಳಿಂದ ನಗದು ಹಿಂಪಡೆಯುವ ನಿಯಮಗಳನ್ನು ಬದಲಾಯಿಸಿದೆ. ಇದರಿಂದ ಜನರು ನಿಟ್ಟುಸಿರು ಬಿಡುವಂತಾಗಿದೆ.ಎಟಿಎಂ ವಹಿವಾಟುಗಳನ್ನು ಹೆಚ್ಚು ಸುರಕ್ಷಿತಗೊಳಿಸಲು ಬ್ಯಾಂಕ್‌ಗಳು ಹೊಸ ನಿಯಮವನ್ನು ಹೊರಡಿಸಿವೆ ಎಂದು ತಿಳಿಸಿದ್ದಾರೆ.

SBI ATM ಗಳಲ್ಲಿ ವಹಿವಾಟುಗಳಿಗಾಗಿ ನಮ್ಮ OTP ಆಧಾರಿತ ನಗದು ಹಿಂಪಡೆಯುವ ವ್ಯವಸ್ಥೆಯು ವಂಚಕರ ವಿರುದ್ಧದ ಒಂದು ಅಸ್ತ್ರವಾಗಿದೆ. ನಿಮ್ಮನ್ನು ವಂಚನೆಯಿಂದ ರಕ್ಷಿಸುವುದು ಯಾವಾಗಲೂ ನಮ್ಮ ಪ್ರಮುಖ ಆದ್ಯತೆಯಾಗಿರುತ್ತದೆ ಮತ್ತು ಕರ್ತವ್ಯ ಸಹ ಆಗಿದೆ . OTP ಆಧಾರಿತ ನಗದು ಹಿಂಪಡೆಯುವ ವ್ಯವಸ್ಥೆಯು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಕುರಿತು SBI ಗ್ರಾಹಕರು ತಿಳಿದಿರಬೇಕು ಎಂದು SBI ಶಾಖೆ ತಿಳಿಸಿದೆ.

SBI ಬ್ಯಾಂಕ್ ನ ಹೊಸ ನಿಯಮದ ಪ್ರಕಾರ, ಗ್ರಾಹಕರು ಎಟಿಎಂಗಳಿಂದ ಒಟಿಪಿ(OTP) ಇಲ್ಲದೆ ಹಣ ಪಡೆಯಲು ಸಾಧ್ಯವಿಲ್ಲ. ನಗದು ಹಿಂಪಡೆಯುವ ಸಮಯದಲ್ಲಿ, ಗ್ರಾಹಕರು ನೋಂದಾಯಿತ ಮೊಬೈಲ್ ಸಂಖ್ಯೆಗೆ OTP ಅನ್ನು ಪಡೆಯುತ್ತಾರೆ. ಈ OTP ನಮೂದಿಸಿದ ನಂತರವಷ್ಟೇ ಹಣವನ್ನು ಹಿಂಪಡೆಯಬಹುದು.

ATM ಹಣ ಹಿಂಪಡೆಯಲು ಈ ಕೆಳಗಿನ ಹಂತ ಅನುಸರಿಸಿ :

  • OTP ನಾಲ್ಕು ಅಂಕಿಯ ಸಂಖ್ಯೆಯಾಗಿದ್ದು, ಗ್ರಾಹಕರು ಒಂದೇ ವಹಿವಾಟಿಗೆ ಪಡೆಯುತ್ತಾರೆ.
  • ಒಂದು ಸಾರಿ ನೀವು ಹಿಂಪಡೆಯಲು ಬಯಸುವ ಮೊತ್ತವನ್ನು ನಮೂದಿಸಿದ ನಂತರ, ಎಟಿಎಂ ಪರದೆಯಲ್ಲಿ OTP ಅನ್ನು ನಮೂದಿಸಲು ನಿಮ್ಮನ್ನು ಕೇಳಲಾಗುತ್ತದೆ.
  • ನೀವು ಬ್ಯಾಂಕ್‌ನಲ್ಲಿ ನೋಂದಾಯಿಸಿದ ಮೊಬೈಲ್ ಸಂಖ್ಯೆಯಲ್ಲಿ ಸ್ವೀಕರಿಸಿದ OTP ಅನ್ನು ನಮೂದಿಸಬೇಕು.
  • ನಂತರ ನೀವು ನಮೂದಿಸಿದ ಹಣ ಪಡೆಯಬಹುದು.

ಈ ರೀತಿಯಾಗಿ ಹಣ ಪಡೆಯಬಹುದು. ಇದರಿಂದಾಗಿ ಯಾವುದೇ ಅಪಾಯಗಲಿಲ್ಲ ಆದರೆ ದಯವಿಟ್ಟು ಹಣ ಹಿಂಪಡೆಯುವ ಮುನ್ನ OTP ಯನ್ನು ಆ ಸಮಯಲ್ಲಿ ಬೇರೆ ವ್ಯಕ್ತಿ ಅಥವಾ ಪರಿಚಯ ಇಲ್ಲದೆ ಯಾರಿಗೂ ಶೇರ್ ಮಾಡದಿರಿ.

Leave A Reply

Your email address will not be published.