

ಪುರುಷರ ಬಾಹ್ಯ ನೋಟವನ್ನು ಶರ್ಟ್ ಹೆಚ್ಚಿಸುತ್ತೆ. ಕೆಲವರಿಗಂತೂ ಶರ್ಟ್ ಚಾಯ್ಸ್ ಮಾಡೋಕೆ ತಲೆನೋವು. ಹೇಗಪ್ಪಾ ಸೆಲೆಕ್ಟ್ ಮಾಡೋದು, ಯಾವುದು ನನಗೆ ಸೂಟ್ ಆಗುತ್ತೆ ಅನ್ನೊದು ಒಂದು ಪ್ರಶ್ನೆ ನಿಮ್ಮಲ್ಲಿ ಇದ್ದೇ ಇದೆ. ಎಷ್ಟೇ ವೆರೈಟಿ ಶರ್ಟ್ ಗಳು ಇದ್ದರೂ ಸಹ ಪುರುಷರ ಅವಶ್ಯಕತೆಯ ವಿಷಯಕ್ಕೆ ಬಂದಾಗ ಚೆಕ್ಸ್ ಶರ್ಟ್ (Checks Shirt) ಖಂಡಿತವಾಗಿಯೂ ಇರಲೇ ಬೇಕಾದ ಒಂದು ಬಟ್ಟೆ (Dress). ಅದರಲ್ಲೂ ವೆರೈಟಿ ಚೆಕ್ಸ್ ಶರ್ಟ್‌ಗಳು ಇದ್ದರೆ, ಅದೇನೋ ಚೆಂದ. ವರ್ಷಪೂರ್ತಿ ಪ್ರತಿ ಸಂದರ್ಭಕ್ಕೂ ಅದರ ವೆರೈಟಿಯೊಂದಿಗೆ ಇದು ಕ್ಲಾಸಿಕ್ ಬಿಳಿ ಶರ್ಟ್ ಗೆ ಕಾಂಪಿಟೇಷನ್ (Competition) ನೀಡುತ್ತದೆ. ಅಂತೂ ಚೆಕ್ಸ್ ಶರ್ಟ್ ಒಮ್ಮೆ ಟ್ರೈ ಮಾಡಿ ನೋಡಿ ಮತ್ತೇ.
ಡೇಟ್, ವೀಕೆಂಡ್ ಅಥವಾ ಆಫೀಸ್ ಹೀಗೆ ಇದನ್ನು ಎಲ್ಲಾ ಕಡೆ ಧರಿಸಬಹುದು. ನೀವು ಚೆಕ್ಸ್ ಶರ್ಟ್ ಖರೀದಿ ಮಾಡುವಾಗ ಫಾಲೋ ಮಾಡಬೇಕಾದ ಕೆಲ ಟಿಪ್ಸ್ (Fashion Tips) ಇಲ್ಲಿದೆ.
ದೊಡ್ಡ ಚೆಕ್ ಶರ್ಟ್ ಹಾಕಿ ನೀವು ಕ್ಲಾಸಿಕ್ ಲುಕ್ ಪಡೆಯಬಹುದು. ನೀವು ಡೇಟ್‌ಗೆ ಹೋಗುವ ಪ್ಲಾನ್ ಇದ್ದರೆ ಸಣ್ಣ ಚೆಕ್ಗಳನ್ನು ಆಯ್ಕೆ ಮಾಡಿಕೊಳ್ಳುವುದು ಉತ್ತಮ. ದೊಡ್ಡ ಚೆಕ್ ಶರ್ಟ್ ಹೆಚ್ಚು ಶಾಂತವಾದ ಅನುಭವವನ್ನು ನೀಡುತ್ತದೆ ಆದರೆ, ಆದರೆ ಚಿಕ್ಕ ಚೆಕ್‌ಗಳು ವಿಭಿನ್ನ ಲುಕ್ ನೀಡುತ್ತದೆ. ಸ್ಲಿಮ್ ಆಗಿ ಇರುವವರು ಸಣ್ಣ ಗಾತ್ರದ ಚೆಕ್ಸ್ ಗಳು ಇರುವ ಶರ್ಟ್ ಉತ್ತಮವಾಗಿ ಮ್ಯಾಚ್ ಆಗುತ್ತೆ .
ಬಣ್ಣ ಎಂದು ಬಂದಾಗ ನಿಮ್ಮ ಮೈ ಬಣ್ಣ ಚಿಂತೆ ಬೇಡ ಬಣ್ಣಗಳನ್ನು ಆಯ್ಕೆಮಾಡಲು ಬಂದಾಗ ನಿಮ್ಮ ಚರ್ಮದ ಬಣ್ಣದ ವಿರುದ್ಧವಾಗಿ ಬಟ್ಟೆ ಖರೀದಿಸುವುದು ಬೇಡ ಆದರೆ ಡಾರ್ಕ್ ಬಣ್ಣದ ಚೆಕ್ ಶರ್ಟ್ ಬಹುತೇಕ ಎಲ್ಲರಿಗೂ ಸೂಟ್ ಆಗುತ್ತದೆ. ಚೆಕ್ ಶರ್ಟ್ ಧರಿಸುವ ಉತ್ತಮ ವಿಧಾನವೆಂದರೆ ಟೈ ಹಾಕಿ ಧರಿಸಬೇಕು. ದೇಹಕ್ಕೆ ಶಕ್ತಿ ನೀಡುತ್ತವೆ ಈ ನೈಸರ್ಗಿಕ ಸಿರಪ್‌ಗಳು, ಫಿಟ್ ಆಯಂಡ್ ಫೈನ್ ಆಗ್ತಿರ. ಚೆಕ್ಸ್ ಶರ್ಟ್ ಗೆ ಟೈ ಉತ್ತಮ ಲುಕ್ ಕೊಡುತ್ತೆ.
ನಾವು ದಪ್ಪಗಿದ್ದರೂ ನಡೆಯುತ್ತೆ. ಆದರೆ ಅಂಗಿಯ ದಪ್ಪವನ್ನು ಸಾಮಾನ್ಯವಾಗಿ ಜನರು ಕಡೆಗಣಿಸುತ್ತಾರೆ ಆದರೆ ನಿಮ್ಮ ಲುಕ್ ನಿರ್ಧರಿಸುವಲ್ಲಿ ಇದು ಮಹತ್ವದ ಪಾತ್ರವನ್ನು ವಹಿಸುತ್ತದೆ. ದಪ್ಪ ಶರ್ಟ್‌ಗಳನ್ನು ವರ್ಷಪೂರ್ತಿ ಧರಿಸಬಹುದು. ನೀವು ಹೆಚ್ಚಾಗಿ ಫ್ಲಾನೆಲ್ ಶರ್ಟ್ಗಳನ್ನು ಆರಿಸಿಕೊಳ್ಳಿ. ಬೇಸಿಗೆ ಕಾಲದಲ್ಲಿ ಫ್ಲಾನೆಲ್ ಶರ್ಟ್‌ಗಳಿಂದ ದೂರವಿರಿ.
ನಿಮ್ಮ ಸಹೋದ್ಯೋಗಿಗಳನ್ನು ಮೆಚ್ಚಿಸಲು, ಡಾರ್ಕ್ ಟಾರ್ಟನ್ ಚೆಕ್ ಶರ್ಟ್ ಅನ್ನು ಪ್ರಯತ್ನಿಸಿ. ನೀವು ಪಾರ್ಟಿಗೆ ಹೋಗುತ್ತಿದ್ದರೆ, ಟೀ ಶರ್ಟ್ ಬೋರ್ ಆಗುತ್ತಿದೆ ಎಂದರೆ ಕ್ಯಾಶುಯಲ್ ಚೆಕ್ ಶರ್ಟ್‌ನ ಹಾಕಿಕೊಳ್ಳಿ.
ನೀವು ಮೀಟಿಂಗ್ ಹೋಗುವಾಗ ಬಹಳ ಫಾರ್ಮಲ್ ಆಗಿ ಇರಬೇಕು. ಈ ಸಮಯದಲ್ಲಿ ನೀವು ಹೆಚ್ಚು ಆಕರ್ಷಕವಾಗಿರಲು ನೇವಿ ಬ್ಲೂ ಪ್ಯಾಂಟ್‌ನೊಂದಿಗೆ ಬಟನ್-ಡೌನ್ ಕಾಲರ್ ಶರ್ಟ್ ಅನ್ನು ಧರಸಿಬಹುದು. ನೀವು ಸಾರ್ವಜನಿಕವಾಗಿ ನಿಮ್ಮ ಲುಕ್ ಹಾಳು ಮಾಡಿಕೊಳ್ಳಬಾರದು ಎಂದರೆ ಮೊದಲು ಅದನ್ನು ಧರಿಸಿ, ಕನ್ನಡಿಯ ಮುಂದೆ ನಿಂತು ಪ್ರಯೋಗಿಸಿ. ಚೆಕ್ಸ್ ಮತ್ತು ಬಣ್ಣಗಳಲ್ಲಿ ಲಭ್ಯವಿರುವ ಹಲವು ಆಯ್ಕೆಗಳ ಹೊರತಾಗಿಯೂ, ಸ್ಟೈಲಿಂಗ್‌ಗೆ ಬಂದಾಗ ನೀವು ಎಂದಿಗೂ ಗೊಂದಲಕ್ಕೀಡಾಗಬಾರದು. ಅಂತೂ ಚೆಕ್ಸ್ ಶರ್ಟ್ ನಿಮ್ಮ ಅಂದವನ್ನು ಹೆಚ್ಚಿಸೋದರಲ್ಲಿ ಸಂಶಯ ಇಲ್ಲ ಬಿಡಿ.













