Sky lord You tuber Death!!ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದ ಯೂಟ್ಯೂಬರ್ ಭೀಕರ ಅಪಘಾತದಲ್ಲಿ ಸಾವು!!

Share the Article

ಭೀಕರ ರಸ್ತೆ ಅಪಘಾತಕ್ಕೆ ಸಿಕ್ಕಿ ಜನಪ್ರಿಯ ಗೇಮಿಂಗ್ ಯೂಟ್ಯೂಬರ್ ಅಭಿಯುದಯ್ ಮಿಶ್ರಾ ಮೃತಪಟ್ಟ ದಾರುಣ ಘಟನೆ ನಡೆದಿದೆ.

ಮಧ್ಯಪ್ರದೇಶದ ಭೋಪಾಲ್‌ನಿಂದ 122 ಕಿ.ಮೀ ದೂರದಲ್ಲಿರುವ ಸೊಹಾಗ್‌ಪುರ ಬಳಿ ಇರುವ ರಾಜ್ಯ ಹೆದ್ದಾರಿಯಲ್ಲಿ ಟ್ರಕ್‌ಗೆ ಮಿಶ್ರಾ ಚಲಾಯಿಸುತ್ತಿದ್ದ ಬೈಕ್ ಡಿಕ್ಕಿ ಹೊಡೆದಿದೆ. ಈ ವೇಳೆ ಮಿಶ್ರಾ ಅವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

Sky lord ಎಂದು ಕರೆಯಲ್ಪಡುತ್ತಿದ್ದ ಅಭಿಯುದಯ್ ಮಿಶ್ರಾ ಅವರು ಪಬ್ಜಿಯಂತೆಯೇ ಮೊಬೈಲ್‌ನಲ್ಲಿರುವ ಫ್ರೀ ಪೈರ್‌ನಂತಹ ಗೇಮ್‌ನ ವೀಡಿಯೋಗಳನ್ನು ಅಪ್‌ಲೋಡ್ ಮಾಡುತ್ತಿದ್ದರು. ಇದರ ಜನಪ್ರಿಯತೆಯಿಂದ ಅವರು ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಅಧಿಕ ಅಭಿಮಾನಿಗಳನ್ನು ಹೊಂದಿದ್ದರು. ಅಭಿಯುದಯ್ ಮಿಶ್ರಾ ಅವರನ್ನು ಸ್ಕೈಲಾರ್ಡ್ ಎಂಬ ಅನ್ವರ್ಥ ನಾಮದಿಂದ ಕರೆಯಲಾಗುತ್ತಿತ್ತು.

ಒಟ್ಟು 4.24 ಲಕ್ಷ ಇನ್‌ಸ್ಟಾಗ್ರಾಂನಲ್ಲಿ ಇವರಿಗೆ ಫಾಲೋವರ್ಸ್‌ ಇದ್ದಾರೆ. ಇವರು ಯೂಟ್ಯೂಬ್‌ನಲ್ಲಿ 10 ಲಕ್ಷಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದು, ಎರಡು ವಾರಗಳ ಹಿಂದೆ ಕೊನೆಯ ವೀಡಿಯೋವನ್ನು ಪೋಸ್ಟ್ ಮಾಡಿದ್ದರು. ಘಟನೆಗೆ ಸಂಬಂಧಿಸಿ ಮಿಶ್ರಾ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ತೀವ್ರ ಸಂತಾಪವನ್ನು ಸೂಚಿಸಿದ್ದಾರೆ.

Leave A Reply