Home Jobs ESIC Karnataka Recruitment 2022: ರಾಜ್ಯ ವಿಮಾ ನಿಗಮದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ,...

ESIC Karnataka Recruitment 2022: ರಾಜ್ಯ ವಿಮಾ ನಿಗಮದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ, ಆಸಕ್ತರು ನೇರ ಸಂದರ್ಶನದಲ್ಲಿ ಭಾಗವಹಿಸಿ

Hindu neighbor gifts plot of land

Hindu neighbour gifts land to Muslim journalist

ಉದ್ಯೋಗಿಗಳ ರಾಜ್ಯ ವಿಮಾ ನಿಗಮ ಕರ್ನಾಟಕದ (ESIC Karnataka) ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ನೇರ ಸಂದರ್ಶನಗಳ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ಆಸಕ್ತ ಅಭ್ಯರ್ಥಿಗಳು ಅಕ್ಟೋಬರ್ 11 ರಂದು ನಡೆಯಲಿರುವ ಸಂದರ್ಶನದಲ್ಲಿ ಭಾಗವಹಿಸಬಹುದಾಗಿದೆ. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿದೆ.

ಹುದ್ದೆ : 9 ಸೀನಿಯರ್ ರೆಸಿಡೆಂಟ್ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

ವಿದ್ಯಾರ್ಹತೆ: ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಶಿಕ್ಷಣ ಮಂಡಳಿ ಅಥವಾ ವಿಶ್ವವಿದ್ಯಾನಿಲಯಗಳಿಂದ ಎಮರ್ಜೆನ್ಸಿ ಮೆಡಿಸಿನ್ /ಅನೆಸ್ತೇಶಿಯಾ/ರೆಸ್ಪಿರೇಟರಿ ಮೆಡಿಸಿನ್, ಆರ್ಥೋಪೆಡಿಕ್ಸ್, ಜನರಲ್ ಸರ್ಜರಿಯಲ್ಲಿ ಎಂಎಸ್​, ಡಿಎನ್​ಬಿ ನಲ್ಲಿ ಎಂಡಿಯನ್ನು ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಸಂದರ್ಶದಲ್ಲಿ ಭಾಗವಹಿಸಬಹುದು.

ವಯೋಮಿತಿ: ಗರಿಷ್ಠ 45 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಈ ನೇಮಕಾತಿಯ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು.

ಮಾಸಿಕ ವೇತನ: ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 67,700/-ರೂಗಳ ವರೆಗೆ ವೇತನವನ್ನು ನೀಡಲಾಗುತ್ತದೆ.

ಆಯ್ಕೆ ಪ್ರಕ್ರಿಯೆ: ಕಾರ್ಮಿಕರ ರಾಜ್ಯ ವಿಮಾ ನಿಗಮದ ಸೀನಿಯರ್ ರೆಸಿಡೆಂಟ್ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇರ ಸಂದರ್ಶನ ಮತ್ತು ವೈದ್ಯಕೀಯ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುತ್ತದೆ.

ಸಂದರ್ಶನದ ದಾಖಲೆಗಳು: 2 ಪಾಸ್ ಪೋರ್ಟ್​ ಸೈಜ್ ಫೋಟೋ, ವಯಸ್ಸಿನ ದೃಢೀಕರಣ, ಶೈಕ್ಷಣಿಕ ದಾಖಲೆಗಳು, ಜಾತಿ ಮತ್ತು ಮೀಸಲಾತಿ ಪ್ರಮಾಣ ಪತ್ರಗಳನ್ನು ನೇರ ಸಂದರ್ಶನಕ್ಕೆ ತೆರಳುವ ಅಭ್ಯರ್ಥಿಗಳು
ತೆಗೆದುಕೊಂಡು ಹೋಗಬೇಕು.

ಪ್ರಮುಖ ದಿನಾಂಕ:
ನೇರ ಸಂದರ್ಶನದ ದಿನಾಂಕ- ಅಕ್ಟೋಬರ್ 11, 2022

ಸಂದರ್ಶನ ನಡೆಯುವ ಸ್ಥಳ/ವಿಳಾಸ:
Academic Block, ESIC MC and PGIMSR, Rajaji Nagar, Bangalore, Karnataka

ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ನೋಟಿಫಿಕೇಶನ್ ಕ್ಲಿಕ್ ಮಾಡಿ.