Urfi Javed Video: ತನ್ನ ಮುಖವನ್ನೇ ಕನ್ನಡಿಯಿಂದ ಮುಚ್ಚಿದ ಉರ್ಫಿಯ ಹೊಸ ಲುಕ್ | ಮೈ ಆಯಿತು, ಇನ್ನು ಮುಖಕ್ಕೆ ….!!!

ಉರ್ಫಿ ಜಾವೇದ್ ಫ್ಯಾಷನ್ ಐಕಾನ್ ಎಂಬ ಹೆಸರು ಪಡೆದಿದ್ದಾಳೆ. ಅದೆಂತೆಂಥ ಬಟ್ಟೆ ಧರಿಸಿ ಬಂದು ಜನರ ಕಣ್ಮಣ ತಣಿಸುವ ಈಕೆಯ ಪ್ರಯತ್ನ ನಿರಂತರವಾಗಿ ಇದೆ. ಯಾವಾಗಲೂ ತನ್ನ ಹೊಸ ಹೊಸ ನೋಟ, ಬಟ್ಟೆಯಿಂದ ಜನರ ಗಮನಸೆಳೆಯುವ ಉರ್ಫಿ ಹಲವು ಮಂದಿಯ ಕೆಂಗಣ್ಣಿಗೂ ಗುರಿಯಾಗಿದ್ದಾಳೆ. ಉರ್ಫಿಯ ನಿರಂತರ ಪ್ರಯತ್ನ ಆಕೆಯ ಅಭಿಮಾನಿಗಳನ್ನು ಖುಷಿ ಪಡಿಸುವುದರಲ್ಲೇ ಇರುತ್ತದೆ. ಹಾಗಾಗಿ ಆಕೆಯ ಧಿರಿಸಿನ ಮೇಲೆ ನಡೆಯುವ ಪ್ರಯೋಗ ಮುಂದುವರಿಯುತ್ತಲೇ ಇದೆ. ಹಾಗೆನೇ, ಉರ್ಫಿ ಕೂಡ ತನ್ನ ಅಭಿಮಾನಿಗಳನ್ನು ವಿಚಿತ್ರ ಬಟ್ಟೆಗಳನ್ನು ತೊಡುವ ಮೂಲಕ ರಂಜಿಸುತ್ತಿರುತ್ತಾರೆ.

 

ಇದೀಗ ಉರ್ಫಿ ಜಾವೇದ್ ಮತ್ತೊಮ್ಮೆ ತಮ್ಮ ಹೊಸ ಲುಕ್ ಅನ್ನು ಇನ್‌ಸ್ಟಾಗ್ರಾಮ್ ಮೂಲಕ ಹಂಚಿಕೊಂಡಿದ್ದಾರೆ.

ಉರ್ಫಿ ಜಾವೇದ್ ಅವರ ಇತ್ತೀಚಿನ ಲುಕ್ ಒಂದು ಭಾರೀ ವೈರಲ್ ಆಗಿದೆ. ಯಾರಾದರೂ ಈ ರೀತಿಯ ಫ್ಯಾಷನ್ ಲುಕ್ ಟ್ರೈ ಮಾಡಿದ್ದಾರಾ ಇಲ್ವಾ ? ಉರ್ಫಿ ಅಂತೂ ಮಾಡಿದ್ದಾರೆ. ಈ ಹೊಸ ವೀಡಿಯೋದಲ್ಲಿ ಉರ್ಫಿ ಜಾವೇದ್ ಅವರ ದೇಹಕ್ಕೆ ಕನ್ನಡಿಗಳನ್ನು ಅಂಟಿಸಿ ಬೋಲ್ಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇದರೊಂದಿಗೆ, ಉರ್ಫಿ ಜೀನ್ಸ್‌ನ ಬಟನ್‌ಗಳನ್ನು ಸಹ ತೆರೆದಿದ್ದು, ಹೆಚ್ಚು ಹಾಟ್ ಆಗಿ ಕಾಣುತ್ತಿದ್ದಾರೆ. ಇಷ್ಟೇ ಅಲ್ಲ, ಈ ಸಮಯದಲ್ಲಿ ಉರ್ಫಿ ತನ್ನ ಮುಖವನ್ನು ಸಂಪೂರ್ಣವಾಗಿ ಮುಚ್ಚಿಕೊಂಡಿರುವುದು ನಿಜಕ್ಕೂ ಅತ್ಯಂತ ಆಸಕ್ತಿದಾಯಕ ಸಂಗತಿಯಾಗಿದೆ.

ಈ ಫ್ಯಾಷನ್ ಬಟ್ಟೆಯ( ?) ವೀಡಿಯೋ ಕೆಲವೇ ಸಮಯದಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಉರ್ಫಿಯ ಈ ಲುಕ್ ನೋಡಿ ಅಭಿಮಾನಿಗಳು ತರಹೇವಾರಿ ಕಮೆಂಟ್ ಮಾಡಿದ್ದಾರೆ. ಕಾಮೆಂಟ್ ವಿಭಾಗದಲ್ಲಿ, ಇದುವರೆಗಿನ ಉರ್ಫಿಯ ಬೋಲ್ಡ್ ಲುಕ್ ಎಂದು ಹೇಳುತ್ತಿದ್ದಾರೆ. ಅಷ್ಟೇ ಅಲ್ಲ, ಒಟಿಟಿಯಲ್ಲಿ ತೋರಿಸಿರುವ ಅಡಲ್ಟ್ ಕಂಟೆಂಟ್‌ಗಿಂತ ಉರ್ಫಿಯ ಈ ಲುಕ್ ಸಖತ್ ಬೋಲ್ಡ್ ಆಗಿದೆ ಪಡ್ಡೆಹೈಕಳ ಮನದಾಳದ ಮಾತಾಗಿದೆ.

https://www.instagram.com/reel/Ci4V8tosWfv/?utm_source=ig_web_copy_link

Leave A Reply

Your email address will not be published.