Home latest ಕಾರು ಮಾರುಕಟ್ಟೆಯಲ್ಲಿ ‘ಬಿರುಗಾಳಿ’ | 200 ಕಿ.ಮೀ ಮೈಲೇಜಿನ ನಿರಂತರ ಓಡುವ ಕಾರು 4.5 ಲಕ್ಷಕ್ಕೆ...

ಕಾರು ಮಾರುಕಟ್ಟೆಯಲ್ಲಿ ‘ಬಿರುಗಾಳಿ’ | 200 ಕಿ.ಮೀ ಮೈಲೇಜಿನ ನಿರಂತರ ಓಡುವ ಕಾರು 4.5 ಲಕ್ಷಕ್ಕೆ ಬರ್ತಿದೆ ನೋಡಿ ಬಾಸ್ !

Hindu neighbor gifts plot of land

Hindu neighbour gifts land to Muslim journalist

ಹೊಸ ಕಾರು ಬಂದಿದೆ. ಅದರ ಮೈಲೇಜು ನೋಡಿದ್ರೆ ನೀವು ಬೆರಗಾಗೊದು ಗ್ಯಾರಂಟಿ. ಹಿಂದೆ ಕೇವಲ ಒಂದು ಟೈರಿನ, ಡೈಮಂಡ್ ಕಟ್ ಹೊಡೆದ ವಿಚಿತ್ರ ಆಕಾರದ ಈ ಕಾರು ಹೊರಡ್ತು ಅಂದ್ರೆ ಪ್ರಯಾಣ ನಿರಂತರ.

ವಿಶ್ವದ ಬಹುತೇಕ ಎಲ್ಲಾ ದೇಶಗಳು ಕಾರ್ಬನ್ ಹೊರಸೂಸುವಿಕೆಯನ್ನು ತಡೆಗಟ್ಟಲು ಎಲೆಕ್ಟ್ರಿಕ್ ವಾಹನಗಳ ಅಳವಡಿಕೆಗೆ ಶ್ರಮಿಸುತ್ತಿವೆ. ಹೀಗಾಗಿ, ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ವಾತಾವರಣವು ಅತ್ಯಂತ ವೇಗವಾಗಿ ಬದಲಾಗುತ್ತಿದೆ. ಅದರ ಜೊತೆಗೆ ಹೆಚ್ಚುತ್ತಿರುವ ಪೆಟ್ರೋಲ್-ಡೀಸೆಲ್ ಬೆಲೆಗಳನ್ನು ಗಮನದಲ್ಲಿಟ್ಟುಕೊಂಡು ಗ್ರಾಹಕರು ಈಗ ಈ ವಾಹನಗಳತ್ತ ಮುಖ ಮಾಡುತ್ತಿದ್ದಾರೆ.

ಬೈಕ್ , ಸ್ಕೂಟರ್ ಗಳಿಗೆ ಭಾರಿ ಬೇಡಿಕೆ ಇರುವಾಗಲೇ ಜನ ಎಲೆಕ್ಟ್ರಿಕ್ ಕಾರುಗಳತ್ತ ಆಸಕ್ತಿ ತೋರುತ್ತಿದ್ದಾರೆ. ಅದರಂತೆ ಇದೀಗ ಭಾರತದ ಎಲೆಕ್ಟ್ರಿಕ್ ಕಾರು ತಯಾರಿಕಾ ಕಂಪನಿ ಸ್ಟ್ರೋಮ್ ಮೋಟಾರ್ಸ್ ಸಾಮಾನ್ಯ ಬೆಲೆಗೆ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆ ಮಾಡಲು ಮುಂದಾಗಿದೆ. ಹೌದು, ಸ್ಟ್ರೋಮ್ ಮೋಟಾರ್ಸ್ ಕಂಪೆನಿಯು R3 ಹೆಸರಿನ ಸಣ್ಣ ಮಾದರಿಯ ಎಲೆಕ್ಟ್ರಿಕ್ ಕಾರನ್ನು ವಿನ್ಯಾಸಗೊಳಿಸಿದ್ದು, ಶೀಘ್ರದಲ್ಲೇ ಈ ಕಾರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಈ ಕಾರಿನ ವಿಶೇಷತೆ ಕುರಿತು ಇಲ್ಲಿದೆ ನೋಡಿ ಡೀಟೇಲ್ಸ್..

ಇದು ಮೂರು ಚಕ್ರದ ಕಾರು ಆಗಿದ್ದು, ಮುಂಭಾಗದಲ್ಲಿ 2 ಟಯರ್​​ಗಳನ್ನು ನೀಡಲಾಗಿದ್ದರೆ, ಹಿಂಭಾಗದಲ್ಲಿ ಏಕೈಕ ಟಯರ್ ನೀಡಲಾಗಿದೆ. ಇದಾಗ್ಯೂ ಈ ಕಾರಿನ ಗರಿಷ್ಠ ವೇಗವು 80 ಕಿ.ಮೀ. ಇದೆ. ಹೀಗಾಗಿ ದೂರದ ಪ್ರಯಾಣಕ್ಕೂ ಈ ಕಾರನ್ನು ಬಳಸಿಕೊಳ್ಳಬಹುದು. ಅಷ್ಟೇ ಅಲ್ಲದೆ, ಡೈಮಂಡ್ ಕಟ್ ವಿನ್ಯಾಸದಲ್ಲಿ ರೂಪಿಸಲಾಗಿದ್ದು, ಈ ತ್ರಿಚಕ್ರ ವಾಹನದಲ್ಲಿ ಸನ್​ ರೂಫ್​ ಕೂಡ ನೀಡಲಾಗಿದೆ. ಅಷ್ಟೇ ಅಲ್ಲದೆ ಈ ಕಾರಿನಲ್ಲಿ ಇಬ್ಬರು ಆರಾಮವಾಗಿ ಕುಳಿತುಕೊಳ್ಳುವ ಆಸನ ವ್ಯವಸ್ಥೆಯಿದೆ.

ಭಾರತದ ಇತರೆ ಎಲೆಕ್ಟ್ರಿಕ್ ಕಾರುಗಳು ಹೋಲಿಸಿದರೆ ಸ್ಟ್ರೋಮ್ ಆರ್​3 ಕಾರು ಅತ್ಯುತ್ತಮ ರೇಂಜ್ (ಮೈಲೇಜ್) ನೀಡಲಿದೆ. ಈ ಕಾರಿನಲ್ಲಿ 48-ವೋಲ್ಟ್ ಎಲೆಕ್ಟ್ರಿಕ್ ಮೋಟಾರ್ ನೀಡಲಾಗಿದ್ದು, ಇದು 15 ಕಿಲೋವ್ಯಾಟ್ ವಿದ್ಯುತ್ ಉತ್ಪಾದಿಸುತ್ತದೆ. ಹಾಗೆಯೇ ಕಾರಿನ ಟಾರ್ಕ್ 90 ಎನ್ಎಂ ಆಗಿರುತ್ತದೆ. ಇನ್ನು ಈ ಕಾರನ್ನು ಮೂರು ಗಂಟೆಗಳಲ್ಲಿ ಸಂಪೂರ್ಣ ಚಾರ್ಜ್ ಮಾಡಬಹುದು. ಒಂದು ಬಾರಿ ಪೂರ್ಣ ಚಾರ್ಜ್ ಮಾಡಿದರೆ 200 ಕಿ.ಮೀ. ದೂರದವರೆಗೆ ಪ್ರಯಾಣಿಸಬಹುದು ಎಂದು ಕಂಪೆನಿ ಹೇಳಿಕೊಂಡಿದೆ.

ಸ್ಟ್ರೋಮ್ ಮೋಟಾರ್ಸ್ ಮೂಲಗಳ ಮಾಹಿತಿ ಪ್ರಕಾರ ಸ್ಟ್ರೋಮ್ R3 ಕಾರಿನ ಆರಂಭಿಕ ಬೆಲೆ 4.5 ಲಕ್ಷ ರೂ. ಇರಲಿದೆ. ಅಂದರೆ 5 ಲಕ್ಷಕ್ಕೂ ಕಡಿಮೆ ಬೆಲೆಗೆ ಆರ್​3 ಭಾರತೀಯ ರಸ್ತೆಗಳಿದರೆ ಎಲೆಕ್ಟ್ರಿಕ್ ಕಾರುಗಳಿಗೆ ದೊಡ್ಡ ಪೈಪೋಟಿ ನೀಡುವುದರಲ್ಲಿ ಅನುಮಾನವೇ ಇಲ್ಲ ಎನ್ನಬಹುದು.

ಇನ್ನು R3 ಕಾರಿನಲ್ಲಿ ಒಂದೇ ಡೋರ್ ಕೂಪ್ ನೀಡಲಾಗಿದೆ. ಹಾಗೆಯೇ ಕೀ ಲೆಸ್ ಎಂಟ್ರಿ, ಪವರ್ ವಿಂಡೋ, ಡಿಜಿಟಲ್ ಡಿಸ್‌ಪ್ಲೇ, ಕ್ಲೈಮೇಟ್ ಕಂಟ್ರೋಲ್ ಎಸಿ, 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್, ಜಿಪಿಎಸ್ ನ್ಯಾವಿಗೇಷನ್ ಮತ್ತು ಗೆಸ್ಚರ್ ಕಂಟ್ರೋಲ್ ಸಹ ಇರಲಿದೆ. ಹಾಗೆಯೇ ಪಾರ್ಕಿಂಗ್ ಅಸಿಸ್ಟ್ ಮತ್ತು ರಿವರ್ಸ್ ಕ್ಯಾಮೆರಾವನ್ನು ಸಹ ಹೊಂದಿರುತ್ತದೆ. ಒಟ್ಟಾರೆ ಕ್ಯೂಟ್ ಆಂಡ್ ಬೆಸ್ಟ್ ಕಾರು ಎಷ್ಟು ಜನರ ಮನಸ್ಸು ಗೆಲ್ಲಲಿದೆ ಎಂಬುದು ನೋಡಬೇಕಿದೆ…