Home ದಕ್ಷಿಣ ಕನ್ನಡ ಪುತ್ತೂರಿನಲ್ಲಿ ಜಾಬ್ ಜಿಹಾದ್ | ಮಾರ್ಕೆಟಿಂಗ್ ಜಾಬ್ ಕೊಡಿಸುವ ನೆಪದಲ್ಲಿ ಹಿಂದೂ ಯುವತಿಯ ಜತೆ ಮಾರ್ಕೆಟ್...

ಪುತ್ತೂರಿನಲ್ಲಿ ಜಾಬ್ ಜಿಹಾದ್ | ಮಾರ್ಕೆಟಿಂಗ್ ಜಾಬ್ ಕೊಡಿಸುವ ನೆಪದಲ್ಲಿ ಹಿಂದೂ ಯುವತಿಯ ಜತೆ ಮಾರ್ಕೆಟ್ ಸುತ್ತುವ ಕೆಲಸ !!!

Hindu neighbor gifts plot of land

Hindu neighbour gifts land to Muslim journalist

ಪುತ್ತೂರು : ಅನ್ಯಕೋಮಿನ ಯುವಕನೋರ್ವ ಅಂಗಡಿಗೆ ಬಂದ ಹಿಂದೂ ಯುವತಿಗೆ ಕಿರುಕುಳ ನೀಡಿದ ಘಟನೆ ಮಾಸುವ ಮುನ್ನವೇ, ಈಗ ಪುತ್ತೂರಿನಲ್ಲಿ ಮತ್ತೊಂದು ಲವ್ ಜಿಹದ್ ಪ್ರಕರಣ ಬೆಳಕಿಗೆ ಬಂದಿದೆ.

ಮುಸ್ಲಿಂ ಯುವಕನ ಜೊತೆ ಹಿಂದೂ ಯುವತಿ ಪತ್ತೆಯಾದ ಘಟನೆ ಪುತ್ತೂರಿನಲ್ಲಿ ನಡೆದಿದೆ. ಯುವತಿ ಕುಂದಾಪುರ ಮೂಲದ ಹಿಂದೂ ಯುವತಿಯಾಗಿದ್ದು, ಯುವಕ ಕೋಟೇಶ್ವರದ ಮುಸ್ಲಿಂ ಹುಡುಗ ಎಂದು ಹೇಳಲಾಗಿದೆ. ಇಬ್ಬರೂ ಜೊತೆಯಾಗಿರುವ ವಿಷಯ ತಿಳಿದ ಜಾಗರಣ ವೇದಿಕೆಯ ಕಾರ್ಯಕರ್ತರು ಮುಸ್ಲಿಂ ವ್ಯಕ್ತಿಯನ್ನು ತಡೆದು ವಿಚಾರಿಸಿದಾಗ ಲವ್ ಜಿಹಾದ್ ವಿಷಯ ಬಯಲಾಗಿದೆ. ಕೆಲಸ ಕೊಡಿಸುವ ನೆಪದಲ್ಲಿ ಜಾಬ್ ಜಿಹಾದ್ ನಡೆದಿದೆ ಎನ್ನಲಾಗಿದೆ.

ಇನ್ನು ಮುಸ್ಲಿಂ ಯುವಕ ಅಮೀರ್ ಎಂದು ತಿಳಿದು ಬಂದಿದೆ. ಹಿಂದೂ ಯುವತಿಗೆ ಪುತ್ತೂರಿನಲ್ಲಿ ಮಾರ್ಕೆಟಿಂಗ್ ಕೆಲಸ ಕೊಡುವ ಆಮಿಷ ಒಡ್ಡಿ ಈತ ಲವ್ ಜಿಹಾದ್‌ಗೆ ಯತ್ನಿಸಿದ್ದಾನೆ. ಹಲವು ಕಡೆಗಳಲ್ಲಿ ಇವರಿಬ್ಬರು ಹಲವು ಕಡೆಗಳಲ್ಲಿ ಸುತ್ತಾಡಿಕೊಂಡಿದ್ದರು. ಸಿಕ್ಕ ಸಿಕ್ಕ ಮಾರ್ಕೆಟ್ ಅಂಗಡಿಗೆ ತಿರುಗಾಡಿಕೊಂಡಿದ್ದರು ಅನ್ನೋದು ತಿಳಿದು ಬಂದಿದೆ.

ಇನ್ನು ಇವರಿಬ್ಬರ ಬಗ್ಗೆ ತಿಳಿದಿದ್ದ ಕುಂದಾಪುರದ ಹಿಂದೂ ಸಂಘಟನೆಗಳು ಪುತ್ತೂರಿನ ಹಿಂದೂ ಸಂಘಟನೆಯವರಿಗೆ ಮಾಹಿತಿಯನ್ನು ನೀಡಿದ್ದರು‌. ಇಬ್ಬರನ್ನೂ ಅಲ್ಲಿ ಸೇರಿದ್ದ ಕಾರ್ಯಕರ್ತರು ಪುತ್ತೂರು ಪೊಲೀಸರಿಗೆ ಒಪ್ಪಿಸಿದ್ದು, ಠಾಣೆಯಲ್ಲಿ ವಿಚಾರಣೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಪುತ್ತೂರು ಠಾಣೆಯ ಮುಂದೆ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಸೇರಿದ್ದರು ಎನ್ನಲಾಗಿದೆ. ಹುಡುಗಿಯರ ಮನೆಯ ಬಡತನವನ್ನು ಬಂಡವಾಳ ಮಾಡಿಕೊಂಡು ಉದ್ಯೋಗ ಕೊಡಿಸುವ ನೆಪದಲ್ಲಿ ಜಾಬ್ ಜಿಹಾದ್ ಗೆ ತೊಡಗುತ್ತಿರುವುದು ಇತ್ತೀಚಿನ ಬೆಳವಣಿಗೆ.