ತನ್ನ ಮನೆಯೊಳಗೆಯೇ ನಿಗೂಢವಾದ ರೀತಿಲಿ ಪತ್ತೆಯಾದ ವಿದ್ಯಾರ್ಥಿನಿಯ ಶವ!

ಬಾಲಕಿಯೊಬ್ಬಳು ತನ್ನ ಮನೆಯೊಳಗೆ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.

 

ಶವವಾಗಿ ಪತ್ತೆಯಾಗಿರುವ ವಿದ್ಯಾರ್ಥಿನಿ ಖದೀಜಾ ರೆಹಶಾ (17) ಎಂದು ಗುರುತಿಸಲಾಗಿದೆ.

ಈ ಘಟನೆ ಕೋಯಿಕ್ಕೋಡ್ನ ಅಥೋಲಿಯಲ್ಲಿ ಇಂದು ಬೆಳಿಗ್ಗೆ ನಡೆದಿದ್ದು, ಬಾಲಕಿ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಪ್ಲಸ್ ಟು ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿನಿಯಾಗಿದ್ದಾಳೆ.

ಈಕೆ ಅಥೋಲಿ ಪರಂಬತ್ ನ ಬಶೀರ್ ಎಂಬವರ ಮಗಳಾಗಿದ್ದು, ತನ್ನ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಮೃತದೇಹವನ್ನು ಕೋಯಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಆದರೆ, ಆಕೆ ಮನೆಯೊಳಗೇನೆ ಶವವಾಗಿ ಪತ್ತೆಯಾಗಲು ಕಾರಣ ಏನು, ಹೇಗೆ ನಡೆಯಿತು, ಆತ್ಮಹತ್ಯೆಯೋ ಎಂಬುದರ ಬಗ್ಗೆ ತನಿಖೆ ಬಳಿಕ ತಿಳಿದು ಬರಬೇಕಿದೆ.

Leave A Reply

Your email address will not be published.