ನೀವೂ ಕೂಡ ಮೊಬೈಲ್ ಕ್ಲೀನರ್ ಆಪ್ ಬಳಸುತ್ತಿದ್ದೀರಾ? ; ಹಾಗಿದ್ರೆ ಇರಲಿ ಎಚ್ಚರ!
ಯಾವುದೇ ಒಂದು ಆಪ್ ಬಳಸಬೇಕಾದ್ರೂ ಒಂದು ಬಾರಿ ಯೋಚಿಸುವುದು ಅಗತ್ಯವಾಗಿದೆ. ಯಾಕೆಂದರೆ ಕಿರಾತಕರ ಕೈ ಚಳಕ ಹೆಚ್ಚುತ್ತಿದ್ದು, ಹಣ ವಶ ಪಡಿಸಿಕೊಳ್ಳುವುದೇ ಅವರ ವೃತ್ತಿಯಾಗಿದೆ. ಸಾಮಾನ್ಯವಾಗಿ ನಾವೆಲ್ಲರೂ ಮೊಬೈಲ್ ಸುರಕ್ಷತೆಗೆ ಕ್ಲೀನರ್ ಅಪ್ಲಿಕೇಶನ್ ಗಳನ್ನು ಬಳಸುತ್ತೇವೆ. ಆದ್ರೆ, ಇದೀಗ ಬಳಸೋ ಮುಂಚೆ ಎಚ್ಚರಿಕೆ ವಹಿಸೋದು ಮುಖ್ಯ.
ಹೌದು. ಫೋನ್ ಅನ್ನು ರಕ್ಷಿಸಲು ಉಚಿತ ಆಂಟಿವೈರಸ್ ಅಥವಾ ಫೋನ್ ನ ಮೆಮೊರಿಯನ್ನು ಸ್ವಚ್ಛಗೊಳಿಸಲು ಕ್ಲೀನರ್ ಅಪ್ಲಿಕೇಶನ್ ಗಳನ್ನು ಬಳಸಿದರೆ, ಜಾಗರೂಕರಾಗಿರಿ. ಇಲ್ಲದಿದ್ದರೆ, ಈ ಅಪ್ಲಿಕೇಶನ್ ಗಳು ನಿಮ್ಮ ಬ್ಯಾಂಕ್ ಖಾತೆಯನ್ನು ಖಾಲಿ ಮಾಡಬಹುದು. ಎನ್ಸಿಸಿ ಗ್ರೂಪ್ನ ಫಾಕ್ಸ್-ಐಟಿ ವರದಿಯು ಗೂಗಲ್ ಪ್ಲೇ ಸ್ಟೋರ್ನಲ್ಲಿ ಮೆಲಿಸಿಯಸ್ ಬ್ಯಾಂಕಿಂಗ್ ಟ್ರೋಜನ್ಗಳನ್ನು ಮರೆಮಾಚಿರುವ ಎರಡು ಅಪ್ಲಿಕೇಶನ್ಗಳಿವೆ ಎಂದು ಹೇಳಿದೆ.
ವರದಿಗಳ ಪ್ರಕಾರ, ಶಾರ್ಕ್ಬಾಟ್ ಬ್ಯಾಂಕಿಂಗ್ ಟ್ರೋಜನ್ ಈ ಎರಡು ಅಪ್ಲಿಕೇಶನ್ಗಳಲ್ಲಿ ಕಂಡುಬಂದಿದೆ. ಈ ಎರಡು ಅಪ್ಲಿಕೇಶನ್ಗಳು ಶಾರ್ಕ್ಬಾಟ್ ಬ್ಯಾಂಕಿಂಗ್ ಟ್ರೋಜನ್ಗಳಿಂದ ಸೋಂಕಿಗೆ ಒಳಗಾಗಿರುವುದು ಕಂಡುಬಂದಿದೆ. ಮೊದಲ ಅಪ್ಲಿಕೇಶನ್ ಮಿಸ್ಟರ್ ಫೋನ್ ಕ್ಲೀನರ್ (50,000 ಕ್ಕೂ ಹೆಚ್ಚು ಡೌನ್ಲೋಡ್ಗಳು) ಮತ್ತು ಎರಡನೆಯದು ಕೈಲ್ಹಾವಿ ಮೊಬೈಲ್ ಸೆಕ್ಯುರಿಟಿ. ಇದು 10,000 ಕ್ಕೂ ಹೆಚ್ಚು ಡೌನ್ಲೋಡ್ ಆಗಿದೆ
ಈ ಅಪ್ಲಿಕೇಶನ್ಗಳನ್ನು ಭಾರತ, ಸ್ಪೇನ್, ಆಸ್ಟ್ರೇಲಿಯಾ, ಪೋಲೆಂಡ್, ಜರ್ಮನಿ, ಅಮೆರಿಕ ಮತ್ತು ಆಸ್ಟ್ರಿಯಾದಲ್ಲಿನ ಆಂಡ್ರಾಯ್ಡ್ ಬಳಕೆದಾರರನ್ನು ಗುರಿಯಾಗಿಸಲು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಫೋನ್ ನಲ್ಲಿ ಈ ಅಪ್ಲಿಕೇಶನ್ ಗಳನ್ನು ಡೌನ್ ಲೋಡ್ ಮಾಡುವುದು ಮತ್ತು ಇನ್ಸ್ಟಾಲ್ ಮಾಡುವುದು ನಿಮ್ಮ ಬ್ಯಾಂಕಿಂಗ್ ಭದ್ರತೆಯನ್ನು ಅಪಾಯಕ್ಕೆ ಸಿಲುಕಿಸುತ್ತದೆ. ‘ಈ ಹೊಸ ಅಪ್ಲಿಕೇಶನ್ಗಳು ನಿಮ್ಮ ಫೋನ್ನಲ್ಲಿ ಶಾರ್ಕ್ಬಾಟ್ ಮಾಲ್ವೇರ್ ಅನ್ನು ಸ್ಥಾಪಿಸಲು ಪ್ರವೇಶಿಸಲು ಅನುಮತಿಗಳನ್ನು ಅವಲಂಬಿಸಿಲ್ಲ’ ಎಂದು ಫಾಕ್ಸ್-ಐಟಿ ವರದಿ ಮಾಡಿದೆ.