ತುಪ್ಪದ ಬೆಡಗಿ ಕಾಣೆಯಾದ್ಲಾ?ಯಾವುದೆಲ್ಲ ಸಿನಿಮಾಗಳು ತೆರೆಯಲ್ಲಿ ಅಬ್ಬರಿಸಲಿವೆ?
ಸ್ಯಾಂಡಲ್ ವುಡ್ ಕ್ವೀನ್ ಆದ ರಾಗಿಣಿ “ತುಪ್ಪದ ಹುಡುಗಿ” ಅಂತಾನೆ ಫೇಮಸ್. ಖಡಕ್ ಲುಕ್, ಲವರ್ ಗರ್ಲ್ ಈ ರೀತಿಯ ಯಾವುದೇ ಪಾತ್ರಗಳನ್ನು ಕೊಟ್ರು ಸಲೀಸಾಗಿ ನಿಭಾಯಿಸುವ ಹುಡುಗಿ ರಾಗಿಣಿ ದ್ವಿವೇದಿ.ಅಭಿಮಾನಿಗಳು ರಾಗಿಣಿ ಕಾಣಿಸುತ್ತಿಲ್ಲ, ಕಳೆದು ಹೋಗಿಬಿಟ್ರಾ? ಎಂಬ ನೂರಾರು ಪ್ರಶ್ನೆಗಳಿಗೆ, ಇಲ್ಲ ನಿಮ್ಮ ಮುಂದೆ ಸದ್ಯದಲ್ಲೇ ಬರುತ್ತೇನೆ, ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನ ಕೊಡ್ತೀನಿ ಅಂತ ಸಕ್ಕತ್ತಾಗಿ ಆನ್ಸರ್ ಮಾಡಿದ್ದಾರೆ.
ಹೌದು, ತುಪ್ಪದ ಬೆಡಗಿ ಸಿನಿಮಾಗಳನ್ನ ನೀಡುತ್ತಿಲ್ಲ ಅಂತ ಅಂದುಕೊಂಡರೆ ತಪ್ಪಾಗುತ್ತೆ. ಆಕೆಯ ಜೀವನದಲ್ಲಿ ಹಲವಾರು ಕಷ್ಟಗಳನ್ನು ಕಂಡಿದ್ದಾರೆ. ಅದನ್ನೆಲ್ಲ ಮುನ್ನುಗ್ಗಿ ಮತ್ತೆ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಈಗಾಗಲೇ ತಮಿಳಿನಲ್ಲಿ ಮೂರು ಸಿನಿಮಾ ಮಾಡಲಿಕ್ಕೆ ಒಪ್ಪಿದ್ದು, ಒಂದು ಸಿನಿಮಾದ ಚಿತ್ರೀಕರಣ ಕಂಪ್ಲೀಟ್ ಆಗಿದೆ. ಕನ್ನಡ ಮಾತ್ರವಲ್ಲದೆ ತಮಿಳಿನಲ್ಲೂ ಎರಡು ಮತ್ತು ಒಂದು ಅಂತ ಮೂರು ಸಿನಿಮಾಗಳನ್ನು ಒಪ್ಪಿದ್ದಾರೆ. ಅದರಲ್ಲಿ ಸಂತಾನಂ ಅಭಿನಯದ ಕಿಕ್ ಸಿನಿಮಾ ಕೂಡ ಒಂದು. ಶೂಟಿಂಗ್ ಕಂಪ್ಲೀಟ್ ಕೂಡ ಆಗಿದೆ.
ಸುಂದರ್ ಸೀ ರವರ ಒಂದು ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಇದು ಇವರ ಪ್ರಥಮ ಸಿನಿಮಾ.ಆದರೂ ರಾಗಿಣಿ ಅವರು ನಾನಿದ್ದೀನಿ ಅಂತ ಒಪ್ಪಿದ್ದಾರೆ. ಇದರ ಜೊತೆಗೆ ಇನ್ನೂ ಹಲವಾರು ಸಿನಿಮಾದ ಕಥೆಗಳನ್ನು ಕೇಳಿ, ಸಿನಿಮಾ ಮಾಡುತ್ತೀನಿ ಎಂದು ಅಗ್ರೀ ಕೂಡ ಮಾಡಿದ್ದಾರೆ. ಮಲೆಯಾಳಂ ಶೀಲಾ ಸಿನಿಮಾ ಹಲವಾರು ಭಾಷೆಯಲ್ಲಿ ಬರಲಿದೆ. ಕನ್ನಡ ಮತ್ತು ಮಲಯಾಳಂ ಭಾಷೆಯಲ್ಲಿ ರಿಲೀಸ್ ಆಗಲಿರೋ ಶೀಲಾ ಚಿತ್ರವನ್ನು ರಾಗಿಣಿ ಯಾವ ಭಾಷೆ ಆದ್ರೂ ಸೈ, ಐ ಯಾಮ್ ರೆಡಿ ಎಂದು ಸಜ್ಜಾಗಿದ್ದಾರೆ.
ಸಿನಿಮಾದ ಜೊತೆ ಜೊತೆಯಲ್ಲಿ ಫ್ಯಾಷನ್ ಲೋಕದಲ್ಲಿ ತನ್ನನ್ನ ತಾನು ತೊಡಗಿಸಿಕೊಂಡಿದ್ದಾರೆ. ಸ್ಲಿಮ್, ಬ್ಯೂಟಿ ಆಗಿರುವ ರಾಗಿಣಿ ಯಾವತ್ತಿಗೂ ಎವರ್ ಗ್ರೀನ್ ಹುಡುಗಿ ಅಂತಾನೇ ಹೇಳ್ಬೋದು ಒಟ್ಟಿನಲ್ಲಿ ಸಾಲು ಸಾಲಾಗಿ ಸಿನಿಮಾಗಳನ್ನು ನೀಡಲು ಸಜ್ಜಾಗಿರುವ ರಾಗಿಣಿ ಇವರನ್ನು ಕಾತುರದಿಂದ ನೋಡಲು ಕಾಯ್ತಾ ಇದ್ದಾರೆ, ಸಿನಿಮಾ ಪ್ರಿಯರು.