ಟೀ ಪ್ರಿಯರೇ ನಿಮಗೊಂದು ಗುಡ್ ನ್ಯೂಸ್ | ಚಹಾ ಕುಡಿದರೆ ಸಾವು ಬೇಗ ಬರುದಿಲ್ವಂತೆ !!!

ಟೀ… ಚಾಯ್​… ಹೀಗೆ ಇದನ್ನು ನಾನಾ ಹೆಸರಿನಿಂದ ಕರೆಯಲಾಗುವ ಪಾನೀಯವೇ “ಚಹಾ”. ಪ್ರಪಂಚದ ಹಲವು ಭಾಗಗಳಲ್ಲಿ ವಿವಿಧ ಹೆಸರುಗಳಿಂದ ಕರೆಯಲ್ಪಡುವ ಚಹಾವನ್ನು ಇಷ್ಟಪಡದೆ ಇರುವವರು ವಿರಳ. ಹೆಚ್ಚಿನವರ ದಿನಚರಿ ಒಂದು ಕಪ್ ಚಹಾ ಸೇವನೆಯಿಂದಲೆ ಆರಂಭವಾಗುತ್ತದೆ.
ಟೀ ಕುಡಿಯುವುದರಿಂದ ಹೊಸ ಚೈತನ್ಯದ ಜೊತೆಗೆ ಉಲ್ಲಸಕಾರ ಅನುಭವ ಪಡೆಯುವವರು ಅಧಿಕ ಮಂದಿಯಿದ್ದಾರೆ.

ಚಹಾ ಕುಡಿಯುವವರು ಹೆಚ್ಚು ಕಾಲ ಬದುಕುತ್ತಾರೆ ಎಂಬ ನಂಬಿಕೆಯಿದೆ. ಚಹಾಕ್ಕೆ ಸಂಬಂಧಿಸಿದ ಹಲವಾರು ಅಧ್ಯಯನಗಳು ಚಹಾ ಕುಡಿಯುವುದರಿಂದ ಸಾವಿನ ಅಪಾಯವನ್ನು ಕಡಿಮೆ ಮಾಡಬಹುದು ಎಂದು ಹೇಳಿವೆ. ಅಮೆರಿಕದಲ್ಲಿ ನಡೆಸಲಾಗಿರುವ ಒಂದು ಸಂಶೋಧನೆಯ ಆಧಾರದ ಮೇಲೆ ಈ ಹಕ್ಕು ಮಂಡಿಸಲಾಗುತ್ತಿದೆ. UK ಬಯೋಬ್ಯಾಂಕ್‌ನ ಸಂಶೋಧನೆಯು ದಿನಕ್ಕೆ ಎರಡು ಅಥವಾ ಹೆಚ್ಚಿನ ಕಪ್ ಚಹಾವನ್ನು ಕುಡಿಯುವ ಜನರು ಸಾವಿನ ಅಪಾಯವನ್ನು ಕಡಿಮೆ ಎದುರಿಸುತ್ತಾರೆ ಎಂದು ತೋರಿಸಿದೆ.

ಅಮೆರಿಕಾದಲ್ಲಿ ನಡೆದ ಚಹಾದ ಮೇಲಿನ ಈ ಅಧ್ಯಯನದ ಪ್ರಕಾರ, ಚಹಾ ಕುಡಿಯುವವರಲ್ಲಿ ಸಾವಿನ ಅಪಾಯವು ಚಹಾವನ್ನು ಕುಡಿಯದೆ ಇರುವವರಿಗಿಂತ ಕಡಿಮೆಯಾಗಿದೆ ಎನ್ನಲಾಗಿದೆ. ಈ ಅಧ್ಯಯನದ ಪ್ರಕಾರ, ದಿನಕ್ಕೆ ಎರಡು ಅಥವಾ ಹೆಚ್ಚು ಕಪ್ ಚಹಾವನ್ನು ಕುಡಿಯುವವರಲ್ಲಿ ಸಾವಿನ ಅಪಾಯವು ಶೇ.9 ರಿಂದ ಶೇ.13 ರಷ್ಟು ಕಡಿಮೆಯಾಗಿದೆ.

ಟೀ ಕುಡಿಯದೇ ಇರುವವರಲ್ಲಿ ಸಾವಿನ ಅಪಾಯ ಹೆಚ್ಚಾಗಿರುವ ಸಾಧ್ಯತೆ ಇದೆ ಎಂದು ಸಂಶೋಧಕರು ಹೇಳಿದ್ದಾರೆ. ಮತ್ತೊಂದೆಡೆ, ಮದ್ಯಪಾನವು ಸಾವಿನ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಅಧ್ಯಯನ ಹೇಳಿದೆ. ಒಂದು ಕಪ್ ಚಹಾ ಸಾಕು ಕೆಲವರಿಗೆ ಟೀ ಸೇವನೆಯ ಕೆಟ್ಟ ಅಭ್ಯಾಸವಿರುತ್ತದೆ. ಈ ಜನರು ದಿನಕ್ಕೆ ಎರಡು ಕಪ್ ಗಳಿಗಿಂತ ಹೆಚ್ಚು ಚಹಾವನ್ನು ಕುಡಿಯುತ್ತಾರೆ. ಆದ್ದರಿಂದ ಈ ಅಭ್ಯಾಸಗಳನ್ನು ಬದಲಾಯಿಸುವ ಅವಶ್ಯಕತೆಯಿದೆ.
ಊಟವಾದ ಬಳಿಕ ಟೀ ಕುಡಿಯದರೆ ಇದ್ದರೆ ಆಗ ಅವರಿಗೆ ಏನೋ ಕಳೆದುಕೊಂಡಿದ್ದೇವೆ ಎನ್ನುವ ಭಾವನೆ ಮೂಡುವುದು. ಇಂತಹ ಸಮಯದಲ್ಲಿ ಚಾ ಕುಡಿದರೆ ಅದು ಆರೋಗ್ಯಕ್ಕೆ ಒಳ್ಳೆಯದೇ ಅಥವಾ ಅಲ್ಲವೇ ದ್ವಂದ್ವದ ನಿಲುವು ಕೂಡ ಹಲವರಲ್ಲಿದೆ.

ಊಟಕ್ಕೆ ಮೊದಲು ಅಥವಾ ಬಳಿಕ ಯಾರೂ ಟೀ ಕುಡಿಯಬಾರದು. ಯಾಕೆಂದರೆ ಇದು ದೇಹಕ್ಕೆ ತುಂಬಾ ಕೆಟ್ಟದಾಗಿ ಪರಿಣಾಮ ಬೀರುವುದು. ಚಾದಲ್ಲಿ ಫೆನೊಲಿಕ್ ಅಂಶವಿರುವುದರಿಂದ ದೇಹವು ಸರಿಯಾದ ಪ್ರಮಾಣದಲ್ಲಿ ಕಬ್ಬಿನಾಂಶವನ್ನು ಹೀರಿಕೊಳ್ಳದಂತೆ ತಡೆಯುವುದು.

ಕಾಫಿ ಮತ್ತು ಚಹಾದಲ್ಲಿ ಕೆಫಿನ್ ಅಂಶವು ಹೆಚ್ಚಿನ ಪ್ರಮಾಣದಲ್ಲಿ ಇದೆ. ಇದರಿಂದ ದಿನಕ್ಕೆ ಎರಡು ಕಪ್ ಗಿಂತ ಹೆಚ್ಚು ಟೀಕುಡಿದರೆ ಅದರಿಂದ ನಿದ್ರೆಯ ಸಮಸ್ಯೆಗಳು ಕಾಣಿಸಿಕೊಳ್ಳುವುದು.
ಆದರೆ ಗ್ರೀನ್ ಟೀ ಮತ್ತು ಗಿಡಮೂಲಿಕೆ ಟೀ ಜೀರ್ಣಕ್ರಿಯೆಗೆ ಸಹಕಾರಿ ಆಗಿವುದು. ಉರಿಯೂತ ಶಮನಕಾರಿ ಮತ್ತು ಕಿಣ್ವಗಳನ್ನು ಹೊಂದಿರುವಂತಹ ಇದು ಪ್ರೋಟೀನ್ ವಿಘಟಿಸಲು ನೆರವಾಗುವುದು ಮತ್ತು ಅದನ್ನು ಜೀರ್ಣಿಸಲು ಸಹಕರಿಸುವುದು. ಗ್ರೀನ್ ಟೀ ಮತ್ತು ಗಿಡಮೂಲಿಕೆ ಟೀ ಊಟವಾದ ಬಳಿಕ ಕುಡಿಯಲು ಸುರಕ್ಷಿತವಾಗಿದೆ.

ಅತಿಯಾದರೆ ಅಮೃತವೂ ವಿಷ ಎಂಬಂತೆ ಅತಿಯಾದ ಟೀ ಸೇವನೆಯೂ ಕೂಡಾ ಕೆಡುಕು ಉಂಟುಮಾಡುತ್ತದೆ. ನಿಯಮಿತವಾಗಿ ಟೀ ಕುಡಿದರೆ ಹೃದಯದ ಆರೋಗ್ಯ, ಜೀರ್ಣಕ್ರಿಯೆ ಮತ್ತು ರಕ್ತ ಸಕ್ಕರೆ ಮಟ್ಟ ನಿಯಂತ್ರಣ ಸೇರಿದಂತೆ ಅನೇಕ ಆರೋಗ್ಯಕ್ಕೆ ಸಂಬಂಧಿಸಿದ ಲಾಭಗಳನ್ನು ಪಡೆಯಬಹುದು.

Leave A Reply

Your email address will not be published.