Drunk and Drive : ಮದ್ಯ ಪ್ರಿಯರನ್ನು ಬಲೆಗೆ ಬೀಳಿಸಲು ಪೊಲೀಸರ ಹೊಸ ಯೋಜನೆ | ಬಂದಿದೆ ಹೊಸ ಆವಿಷ್ಕಾರ
ಈ ಮದ್ಯ ಸೇವಿಸಿ ವಾಹನ ಚಲಾಯಿಸೋ ವ್ಯಕ್ತಿಗಳಿಗೆ ಪೊಲೀಸರು ಹೊಸ ಪ್ಲ್ಯಾನ್ ವೊಂದನ್ನು ಮಾಡಿದ್ದಾರೆ. ಇದು ಮದ್ಯ ಸೇವಿಸಿ ವಾಹನ ಚಲಾಯಿಸುವವರನ್ನು ಸೆರೆ ಹಿಡಿಯುವುದಲ್ಲದೆ, ಅಪಘಾತಗಳನ್ನು ತಡೆಯುವ ಗುರಿಯೊಂದಿಗೆ ಈ ವ್ಯವಸ್ಥೆ ಮಾಡಲಾಗಿದೆ. ಈ ಮದ್ಯ ಸೇವಿಸಿ ವಾಹನ ಚಾಲಾಯಿಸುವವರನ್ನು ಸೆರೆ ಹಿಡಿಯಲು ಕೇರಳ ಪೊಲೀಸರು ಆಲ್ಕೋ ಸ್ಕ್ಯಾನ್ ವ್ಯಾನ್ ಎಂಬ ಹೊಸ ವ್ಯವಸ್ಥೆ ಮಾಡಿದ್ದಾರೆ. ವಿದೇಶಗಳಲ್ಲಿ ಬಳಕೆಯಾಗುವ ಈ ವಾಹನವನ್ನು ರಾಜ್ಯದ ಎಲ್ಲ ಜಿಲ್ಲೆಗಳಿಗೂ ತಲುಪಿಸುವ ಯೋಜನೆ ರೂಪಿಸಲಾಗಿದೆ.
ತಕ್ಷಣವೇ ಮದ್ಯ ಸೇವಿಸಿ ವಾಹನ ಚಲಾಯಿಸುವವರನ್ನು ಸೆರೆಹಿಡಿಯಲು ಆಲ್ಕೋ ಸ್ಕ್ಯಾನ್ ವ್ಯಾನ್ ಪೊಲೀಸರಿಗೆ ತುಂಬಾ ಸಹಾಯ ಮಾಡಲಿದೆ. ಏಕೆಂದರೆ ವೈದ್ಯಕೀಯ ಪರೀಕ್ಷೆಗಳನ್ನು ಈ ವ್ಯಾನ್‌ನಲ್ಲೇ ತ್ವರಿತವಾಗಿ ಮಾಡಬಹುದಾಗಿದ್ದು, ಪೊಲೀಸ್ ತಪಾಸಣೆಯಲ್ಲಿ ಸಿಕ್ಕಿಬಿದ್ದವರನ್ನು ವೈದ್ಯಕೀಯ ಪರೀಕ್ಷೆಗಾಗಿ ವೈದ್ಯಕೀಯ ಕೇಂದ್ರಕ್ಕೆ ಕರೆದೊಯ್ಯುವುದನ್ನು ತಪ್ಪಿಸಬಹುದು.
ಪೊಲೀಸರು ವಾಹನ ತಪಾಸಣೆ ನಡೆಸುತ್ತಿರುವ ಸಂದರ್ಭ ಚಾಲಕ ಮದ್ಯ ಸೇವಿಸಿರುವುದು, ಇತರ ಮಾದಕ ಪದಾರ್ಥಗಳನ್ನು ಸೇವಿಸಿರುವ ಬಗ್ಗೆ ಅನುಮಾನ ಮೂಡಿದರೆ ವೈದ್ಯಕೀಯ ಕೇಂದ್ರಕ್ಕೆ ಹೋಗದೆ ಈ ವ್ಯಾನ್‌ನಲ್ಲೇ ತ್ವರಿತವಾಗಿ ಪರಿಶೀಲಿಸಬಹುದು. ವ್ಯಕ್ತಿಯ ಲಾಲಾ ರಸವನ್ನು ಬಳಸಿ ವೈದ್ಯಕೀಯ ಪರೀಕ್ಷೆ ಮಾಡಲಾಗುತ್ತದೆ. ಬಳಸಿದ ಅಮಲು ಪದಾರ್ಥವನ್ನು ಸೆಕೆಂಡ್‌ಗಳಲ್ಲಿ ಕಂಡುಹಿಡಿಯಬಹುದು.
ವೈದ್ಯಕೀಯ ಪರೀಕ್ಷೆಗೊಳಗಾದ ವ್ಯಕ್ತಿಯ ಗೌಪ್ಯತೆಗೆ ತೊಂದರೆಯಾಗದ ರೀತಿಯಲ್ಲಿ, ಕೆಲವೇ ಸೆಕೆಂಡ್‌ಗಳಲ್ಲಿ ಲಾಲಾರಸದಿಂದ ಅಮಲು ಪದಾರ್ಥವನ್ನು ತ್ವರಿತವಾಗಿ ಗುರುತಿಸಬಹುದು ಮತ್ತು ಪೊಲೀಸರು ತ್ವರಿತವಾಗಿ ಇತರ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಬಹುದು. ಈ ಮೂಲಕ ಅಧಿಕಾರಿಗಳು ತಮ್ಮ ಕಾರ್ಯ ವಿಧಾನಗಳನ್ನು ತ್ವರಿತವಾಗಿ ಪೂರ್ಣಗೊಳಿಸಬಹುದು.
ದೇಶದಲ್ಲಿ ಮೊದಲ ಬಾರಿಗೆ ಬಳಸಲಾಗುತ್ತಿರುವ ಆಲ್ಕೋ ಸ್ಕ್ಯಾನ್ ವ್ಯಾನ್ ವ್ಯವಸ್ಥೆಯನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಂಗಳವಾರ ಸಂಜೆ ಮಸ್ಕತ್ ಹೋಟೆಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಉದ್ಘಾಟನೆ ಮತ್ತು ಫ್ಲ್ಯಾಗ್‌ಆಫ್ ನೆರವೇರಿಸಿದರು. .