ಪಾಂಡ್ಯ-ಜಡೇಜಾ ಮಿಂಚಿನ ಹೊಡೆತ!! ಸೋತು ಶರಣಾದ ಪಾಕ್-ಜಯಭೇರಿ ಬಾರಿಸಿದ ಟೀಮ್ ಇಂಡಿಯಾ!!

Share the Article

ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಲ್ಲಿ ನಡೆದ ಪಾಕ್ ವಿರುದ್ಧದ ಪಂದ್ಯಾವಳಿಯಲ್ಲಿ ಭಾರತ ಕ್ರಿಕೆಟ್ ತಂಡ ಐದು ವಿಕೆಟ್ ಗಳ ಅಂತರದಲ್ಲಿ ಜಯಭೇರಿ ಬಾರಿಸಿದೆ.

ಟಾಸ್ ಗೆದ್ದ ಭಾರತ ತಂಡ ಫೀಲ್ಡಿಂಗನ್ನು ಆಯ್ಕೆ ಮಾಡಿಕೊಂಡಿದ್ದು, ಎದುರಾಳಿಯ ವಿರುದ್ಧದ ಸೆಣಸಾಟಕ್ಕೆ ಪಾಕ್ ಪ್ರಾರಂಭದಿಂದಲೇ ಉತ್ತಮ ವೇಗ ಪಡೆದಿರಲಿಲ್ಲ.

ಪಂದ್ಯ ಪ್ರಾರಂಭವಾಗಿ ಮೂರನೇ ಓವರ್ ನಲ್ಲಿ ನಾಯಕನ ವಿಕೆಟ್ ಪತನವಾಗಿದ್ದು, ಭುವನೇಶ್ವರ್ ಕುಮಾರ್ ಮಿಂಚಿನ ಬೌಲಿಂಗ್ ಗೆ ಪಾಕ್ ನಾಯಕ ಬಾಬರ್ ಆಜಂ ಪೆವಿಲಿಯನ್ ಹಾದಿ ಹಿಡಿದರು.

ಒಟ್ಟು 148 ಅಂಕಗಳ ಗುರಿ ನೀಡಿದ ಪಾಕ್,19.5 ಓವರ್ ನಲ್ಲಿ 147 ರನ್ ಗಳಿಗೆ ಆಲ್ ಔಟ್ ಆಗುವ ಮೂಲಕ ತಲೆಬಾಗಿ ಶರಣಾಗಿದೆ. ಹಾರ್ದಿಕ್ ಪಾಂಡ್ಯ-ರವೀಂದ್ರ ಜಡೇಜಾ ಮಿಂಚಿನ ಆಟಕ್ಕೆ ಪಾಕ್ ಕ್ರಿಕೆಟ್ ತಂಡ ಶರಣಾಗಿದ್ದು, ಭಾರತ ಜಯಭೇರಿ ಬಾರಿಸಿದೆ.

Leave A Reply