ಬಸ್ & ತೈಲ ಟ್ಯಾಂಕರ್ ನಡುವೆ ಡಿಕ್ಕಿ,20 ಮಂದಿ ಸಜೀವ ದಹನ !

ಪಂಜಾಬ್ ಪ್ರಾಂತ್ಯದಲ್ಲಿ ಇಂದು ಪ್ರಯಾಣಿಕರ ಬಸ್ ಮತ್ತು ತೈಲ ಟ್ಯಾಂಕರ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ 20 ಮಂದಿ ಸಜೀವ ದಹನವಾಗಿರುವ ಘಟನೆ ನಡೆದಿದೆ. ಕಳೆದ ಮೂರು ದಿನಗಳಲ್ಲಿ ಈ ಪ್ರಾಂತ್ಯದಲ್ಲಿ ನಡೆದ ಎರಡನೇ ದೊಡ್ಡ ರಸ್ತೆ ಅಪಘಾತ ಇದಾಗಿದೆ.

 

ಪಾಕಿಸ್ತಾನದ ಲಾಹೋರ್‌ನಿಂದ ಸುಮಾರು 350 ಕಿಮೀ ದೂರದಲ್ಲಿರುವ, ಪಂಜಾಬ್ ಪ್ರಾಂತ್ಯದಲ್ಲಿ, ಮುಲ್ತಾನ್‌ನಲ್ಲಿರುವ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

“ಲಾಹೋರ್‌ನಿಂದ ಕರಾಚಿಗೆ ಹೋಗುತ್ತಿದ್ದ ಬಸ್ ಮತ್ತು ತೈಲ ಟ್ಯಾಂಕರ್ ನಡುವೆ ಡಿಕ್ಕಿ ಸಂಭವಿಸಿ 20 ಜನರು ಸಾವನ್ನಪ್ಪಿದ್ದಾರೆ. ಡಿಕ್ಕಿಯ ರಭಸಕ್ಕೆ ಬಸ್ ಮತ್ತು ಟ್ಯಾಂಕರ್ ಎರಡೂ ಹೊತ್ತಿ ಉರಿದಿವೆ. ಹೀಗಾಗಿ ಅದರಲ್ಲಿದ್ದ 20 ಪ್ರಯಾಣಿಕರು ಸಜೀವ ದಹನವಾಗಿದ್ದಾರೆ. ಇನ್ನುಳಿದ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಅವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಜೀವ ದಹನವಾಗಿರುವ ಪ್ರಯಾಣಿಕರ ಗುರುತು ಪತ್ತೆ ಹಚ್ಚಲು ಸಾಧ್ಯವಾಗುತ್ತಿಲ್ಲ. ಅಷ್ಟರ ಮಟ್ಟಿಗೆ ದೇಹಗಳು ಚಾರ್ ಆಗಿವೆ ಡಿಎನ್ಎ ವರದಿ ಬಂದ ನಂತ್ರ, ಮೃತದೇಹಗಳನ್ನು ಕುಟುಂಬಗಳಿಗೆ ಹಸ್ತಾಂತರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ ಮೂರು ದಿನಗಳಲ್ಲಿ ಈ ಪ್ರಾಂತ್ಯದಲ್ಲಿ ನಡೆದ ಎರಡನೇ ದೊಡ್ಡ ರಸ್ತೆ ಅಪಘಾತ ಇದಾಗಿದೆ. ಶನಿವಾರ, ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಪ್ರಯಾಣಿಕರ ಬಸ್‌ಗೆ ಲೋಡ್ ಟ್ರಕ್ ಡಿಕ್ಕಿ ಹೊಡೆದು ಕನಿಷ್ಠ 13 ಜನರು ಸಾವನ್ನಪ್ಪಿದ್ದರು.

Leave A Reply

Your email address will not be published.