ವಿಟ್ಲ | ನೀರು ಪಾಲಾದ ವ್ಯಕ್ತಿಯ ಮೃತದೇಹ ಪತ್ತೆ
ವಿಟ್ಲದಲ್ಲಿ ತನ್ನ ಮಗುವಿನೊಂದಿಗೆ ಬಟ್ಟೆ ಒಗೆಯಲು ಎಂದು ಹೋದ ವ್ಯಕ್ತಿಯೊಬ್ಬರು ನೀರು ಪಾಲಾಗಿದ್ದಾರೆ.
ವಿಟ್ಲ ತಾಲೂಕಿನ ಅಳಿಕೆ ಗ್ರಾಮದ ಬಾಂಡಿಲು ಎಂಬಲ್ಲಿ ಬಟ್ಟೆ ತೊಳೆಯಲು ನೀರು ಸಂಗ್ರಹಗಾರಕ್ಕೆ ಘಟಕಕ್ಕೆ ತೆರಳಿದ ವ್ಯಕ್ತಿಯೊಬ್ಬರು ನಿಗೂಢವಾಗಿ ನಾಪತ್ತೆಯಾದ ಘಟನೆ ನಡೆದಿದೆ.ಇದೀಗ ಅವರ ಮೃತದೇಹ ಪತ್ತೆಯಾಗಿದೆ.
ವಿಟ್ಲ ರಾದುಕಟ್ಟೆ ನಿವಾಸಿ ಅಬ್ದುಲ್ ರಝಾಕ್ (42) ಎಂಬವರೇ ನೀರುಪಾಲದ ವ್ಯಕ್ತಿ. ತಮ್ಮ ಮನೆ ಸಮೀಪದ ವ್ಯಕ್ತಿಯೊಬ್ಬರಿಗೆ ಸೇರಿದ ಕೃಷಿ ಚಟುವಟಿಕೆಗೆ ಬಳಸಲ್ಪಡುವ ನೀರು ಸಂಗ್ರಹ ಘಟಕಕ್ಕೆ ಬಟ್ಟೆ ತೊಳೆಯಲು ತನ್ನ ಮಗುವಿನ ಜೊತೆ ಇಂದು ಸಂಜೆ ಹೋಗಿದ್ದರು.
ಅವರು ನೀರಿನಲ್ಲಿ ಚಾಪೆಯನ್ನು ತೊಳೆಯುತ್ತಿದ್ದರು. ಆಗ ತೊಳೆಯುತ್ತಿದ್ದ ಚಾಪೆ ಕೈಜಾರಿ ನೀರಲ್ಲಿ ಹೋಯಿತು. ಅದನ್ನು ಹಿಡಿಯಲು ಮುಂದೆ ಹೋದವರು ಮತ್ತೆ ಹಿಂತಿರುಗಲಿಲ್ಲ. ಅವರು ಕಣ್ಮರೆಯಾಗುತ್ತಿದ್ದ ಅಂತೆ ಮಗು ಭಯಗೊಂಡಾಗ ಓಡಿಬಂದು ಮನೆಯವರಿಗೆ ವಿಷಯ ತಿಳಿಸಿದೆ.
ಹೋಗಿದ್ದ ಮಗು ಹೇಳಿದ ಮಾಹಿತಿಯ ಆಧಾರದ ಮೇಲೆ ಶೋಧ ಕಾರ್ಯ ನಡೆಸಲಾಯಿತು. ಕಾಶಿಮಠ ಪ್ರತಾಪ, ಉಕ್ಕುಡ ಹರೀಶ್, ಸುರೇಶ್ ಅವರ ತಂಡ ನೀರಿನಲ್ಲಿ ಮುಳುಗಿ ಅಬ್ದುಲ್ ರಝಾಕ್ ಅವರನ್ನು ಹುಡುಕಾಟದಲ್ಲಿ ಸಹಕರಿಸಿದರು.
ಕಾಸಿಮ್ ಗೂಡಿನಬಳಿ, ಮೊಹಮ್ಮದ್ ಗೂಡಿನಬಳಿ, ಹಾರೀಸ್ ಗೂಡಿನಬಳಿ, ಇರ್ಷಾದ್, ಸಂಶೀರ್ ಮತ್ತಿತರರ ತಂಡವೂ ಶೋಧ ಕಾರ್ಯ ದಲ್ಲಿ ಪಾಲ್ಗೊಂಡಿದ್ದರು.