ನಿಜಾಮುದ್ದೀನ್ ತಬ್ಲಿಘಿ ಜಮಾತ್ ನಿಂದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವೈರಸ್ ಪಿತೂರಿ | ಮುಸ್ಲಿಂ ನಾಯಕನಿಂದಲೇ ಗಂಭೀರ ಆರೋಪ
ನವದೆಹಲಿ: ನಿಜಾಮುದ್ದಿನ್ ತಬ್ಲಿಘಿ ಜಮಾತ್ ಕಾರ್ಯಕ್ರಮದ ಆಯೋಜಕರ ವಿರುದ್ಧ ಮುಸ್ಲಿಂ ನಾಯಕರೇ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಕೊರೋನಾ ಭೀತಿಯ ನಡುವೆ, ಸರ್ಕಾರದ ಆದೇಶವನ್ನೂ ಲೆಕ್ಕಿಸದೇ ಕಾರ್ಯಕ್ರಮ ನಡೆಸಿದ್ದಕ್ಕೆ ತಬ್ಲಿಘಿಗಳ ವಿರುದ್ಧ ಈಗ ಇಡೀ ದೇಶವೇ ಕುದಿಯುತ್ತಿದೆ.
ಈಗ ತಬ್ಲಿಘಿಗಳ ಬಗ್ಗೆ ಉತ್ತರ ಪ್ರದೇಶದ ಶಿಯಾ ಕೇಂದ್ರ ವಕ್ಫ್ ಬೋರ್ಡ್ ನ ಅಧ್ಯಕ್ಷ ವಾಸೀಮ್ ರಿಜ್ವಿ ಮಾತನಾಡಿದ್ದು, ತಬ್ಲಿಘಿ ಜಮಾತ್ ನ ವಿರುದ್ಧ ಗಂಭೀರ ಆರೋಪ ಮಾಡಿರುವ ವಾಸೀಮ್ ರಿಜ್ವಿ, ದೇಶ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧದ ಪಿತೂರಿ ಇದಾಗಿದೆ ಎಂದಿದ್ದಾರೆ. ತಬ್ಲಿಘಿ ಜಮಾತ್ ಕೊರೋನಾ ವೈರಸ್ ಹರಡುವುದರ ಮೂಲಕ ದೇಶದ ಮೇಲೆ ವಿಷ ದಾಳಿಗೆ ಯೋಜನೆ ರೂಪಿಸಿತ್ತು, ವೈರಸ್ ಹರಡುವುದರ ಮೂಲಕ ಒಂದು ಲಕ್ಷ ಜನರನ್ನು ಕೊಲ್ಲಲು ಜಮಾತ್ ನವರು ಸಂಚು ರೂಪಿಸಿದ್ದರು ಎಂದು ಹೇಳಿದ್ದಾರೆ.
“ತಬ್ಲಿಘಿ ಸಭೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರವನ್ನು ಅಸ್ಥಿರಗೊಳಿಸಲು ಯೋಜಿಸಿತ್ತು. ಇದು ಪ್ರಧಾನಿ ಮೋದಿ ವಿರುದ್ಧದ ಪಿತೂರಿ ಎಂದು ರಿಜ್ವಿ ಆರೋಪಿಸಿದ್ದಾರೆ ಎಂದು ಅವರು ದೂರಿದ್ದಾರೆ.
ಅಲ್ಲದೆ ಆರೋಗ್ಯ ಸಿಬ್ಬಂದಿಗಳ ಜೊತೆ ಅಸಭ್ಯ ವರ್ತನೆ ತೋರಿದ್ದಕ್ಕೆ ತಬ್ಲಿಘಿಗಳ ವಿರುದ್ಧ ವಾಗ್ದಾಳಿ ನಡೆಸಿರುವ ರಿಜ್ವಿ. ತಬ್ಲಿಘಿಗಳ ನಡೆ ವೈದ್ಯಕೀಯ ಸಿಬ್ಬಂದಿಗಳ ಸ್ಥೈರ್ಯ ಕುಗ್ಗಿಸಿದೆ. ರೋಗಿಗಳಿಗೆ ಚಿಕಿತ್ಸೆ ನೀಡುವುದನ್ನು ನಿಲ್ಲಿಸಲು ಉದ್ದೇಶಪೂರ್ವಕವಾಗಿ ಈ ರೀತಿ ನಡೆದುಕೊಂಡಿದ್ದಾರೆ ಎಂದಿದ್ದಾರೆ.
ತಬ್ಲಿಘಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಹಾಗೂ ಮಾರಣಾಂತಿಕ ವೈರಸ್ ನ್ನು ಉದ್ದೇಶಪೂರ್ವಕವಾಗಿ ಹರಡಿರುವುದಕ್ಕೆ ಅವರಿಂದಲೇ ಪರಿಹಾರ ಹಣವನ್ನು ಸಂಗ್ರಹಿಸಬೇಕು ಮತ್ತು ಕಠಿಣ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲು ರಿಜ್ವಿ ಆಗ್ರಹಿಸಿದ್ದಾರೆ.