Home latest ಎಪಿಎಂಸಿ ಮಾರುಕಟ್ಟೆಯಲ್ಲಿ ಕರ್ತವ್ಯ ನಿರತ ಏಜೆಂಟ್ ನ ಬರ್ಬರ ಹತ್ಯೆ| ಕುಟುಂಬಸ್ಥರ ಮುಗಿಲು ಮುಟ್ಟಿದ ಆಕ್ರಂದನ|

ಎಪಿಎಂಸಿ ಮಾರುಕಟ್ಟೆಯಲ್ಲಿ ಕರ್ತವ್ಯ ನಿರತ ಏಜೆಂಟ್ ನ ಬರ್ಬರ ಹತ್ಯೆ| ಕುಟುಂಬಸ್ಥರ ಮುಗಿಲು ಮುಟ್ಟಿದ ಆಕ್ರಂದನ|

Hindu neighbor gifts plot of land

Hindu neighbour gifts land to Muslim journalist

ಕರ್ತವ್ಯನಿರತ ಏಜೆಂಟ್‌ವೊಬ್ಬರನ್ನು ಎಪಿಎಂಸಿ ಮಾರುಕಟ್ಟೆಯಲ್ಲಿ ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆಯೊಂದು ನಡೆದಿದೆ.

ಮಂಗಳವಾರ ರಾತ್ರಿ ಎಪಿಎಂಸಿ ಮಳಿಗೆಯಲ್ಲಿ ಕೆಲಸ ಮಾಡುತ್ತಿರುವ ಸಂದರ್ಭದಲ್ಲಿ ದುಷ್ಕರ್ಮಿಗಳು ಏಕಾಏಕಿ ಮಾರಕಾಸ್ತ್ರಗಳಿಂದ ದಾಳಿ ಮಾಡಿ ಪರಾರಿಯಾಗಿದ್ದಾರೆ. ಗಂಭೀರ ಗಾಯಗೊಂಡ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದು, ಪೊಲೀಸರು ಸ್ಥಳಕ್ಕೆ ದೌಡಾಯಿಸಿ, ಪರಿಶೀಲನೆ ನಡೆಸುತ್ತಿದ್ದಾರೆ. ಈ ಭೀಕರ ಘಟನೆ ನಡೆದಿರುವುದು ಮೈಸೂರಿನಲ್ಲಿ.

ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರ ಮೂಲದ ಎಂ.ಜೆ.ರವಿ (35) ಎಂಬುವವರೇ ಕೊಲೆಯಾದವರು. ರವಿ ಉತ್ತನಹಳ್ಳಿಯಲ್ಲಿ ವಾಸವಾಗಿದ್ದರು.

ರವಿಗೆ ತಂದೆ-ತಾಯಿ, ಪತ್ನಿ ಹಾಗೂ ಮೂವರು ಮಕ್ಕಳು, ಸಹೋದರಿಯನ್ನು ಅಗಲಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿ ಮುಟ್ಟಿದೆ. ಸ್ಥಳಕ್ಕೆ ದಕ್ಷಿಣ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಲೆಗಾರರ ಪತ್ತೆಗೆ ಬಲೆ ಬೀಸಲಾಗಿದೆ.