Home ದಕ್ಷಿಣ ಕನ್ನಡ ಸುಬ್ರಹ್ಮಣ್ಯ: ರಾತ್ರಿ ವೇಳೆ ಗೋ ಸಾಗಾಟ ನಡೆಸಿದ ಮುಖಂಡ, ವಾಹನ ಸಹಿತ ಹಿಂದೂ ಸಂಘಟನೆಯ ಕಾರ್ಯಕರ್ತರ...

ಸುಬ್ರಹ್ಮಣ್ಯ: ರಾತ್ರಿ ವೇಳೆ ಗೋ ಸಾಗಾಟ ನಡೆಸಿದ ಮುಖಂಡ, ವಾಹನ ಸಹಿತ ಹಿಂದೂ ಸಂಘಟನೆಯ ಕಾರ್ಯಕರ್ತರ ವಶಕ್ಕೆ!!

Hindu neighbor gifts plot of land

Hindu neighbour gifts land to Muslim journalist

ಸುಬ್ರಹ್ಮಣ್ಯ: ಇಲ್ಲಿನ ಹರಿಹರ ಪಲ್ಲತಡ್ಕ ನಿವಾಸಿ ಮುಖಂಡರೊಬ್ಬರು ರಾತ್ರಿ ವೇಳೆ ದನ ಸಾಗಾಟ ನಡೆಸಿದ ಪರಿಣಾಮ ಪಿಕ್ ಅಪ್ ವಾಹನ ಸಹಿತ ದನಗಳನ್ನು ಕುಕ್ಕೇ ಸುಬ್ರಹ್ಮಣ್ಯದ ಪೇಟೆಯಲ್ಲಿ ಹಿಂದೂ ಕಾರ್ಯಕರ್ತರು ತಡೆದು ಪ್ರಶ್ನಿಸಿದ್ದು, ಇತ್ತಂಡಗಳ ನಡುವೆ ಮಾತಿನ ಚಕಮಕಿಯ ಬಳಿಕ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿ ಮಾತುಕತೆಯಲ್ಲಿ ಸುಖಾಂತ್ಯಗೊಂಡ ಘಟನೆಯೊಂದು ವರದಿಯಾಗಿದೆ.

ಘಟನೆ ವಿವರ: ತನ್ನ ಸಂಬಂಧಿಕರ ಮನೆಗೆಂದು ಮುಖಂಡರೊಬ್ಬರು ಹರಿಹರ ಪಲ್ಲತಡ್ಕದಿಂದ ಪಿಕ್ ಅಪ್ ವಾಹನದಲ್ಲಿ ಎರಡು ದನಗಳನ್ನು ರಾತ್ರಿ ವೇಳೆ ಸಾಗಿಸುವ ಮಾಹಿತಿ ಪಡೆದ ಕುಕ್ಕೆಯ ಹಿಂದೂ ಸಂಘಟನೆಗಳ ಕಾರ್ಯಕರ್ತರು ಕುಕ್ಕೇಯ ಪೇಟೆಯಲ್ಲಿ ವಾಹನವನ್ನು ತಡೆದಿದ್ದು, ದನ ಸಾಗಾಟದ ಅನುಮತಿ ಪತ್ರ ತೋರಿಸುವಂತೆ ಕೇಳಿದ್ದರು.

ಈ ವೇಳೆ ಮಾತು ಮುಂದುವರಿಸಿದ ಮುಖಂಡ ಅನುಮತಿ ಪತ್ರ ಇಲ್ಲ, ನನ್ನ ಸಂಬಂಧಿಕರ ಮನೆಗೆ ಕೊಡೊಯ್ಯುತ್ತಿದ್ದೇನೆ ಎಂದಿದ್ದಾರೆ. ಇದರಿಂದ ಕಾರ್ಯಕರ್ತರು ಕೆರಳಿದ್ದು,ಮಾತಿನ ಚಕಮಕಿಯೂ ನಡೆದಿದ್ದು, ಬಳಿಕ ಪ್ರಕರಣ ಠಾಣೆಯ ಮೆಟ್ಟಿಲೇರಿದೆ. ಈ ವೇಳೆ ಠಾಣೆಗೆ ಕೆಲ ಬಿಜೆಪಿ ಮುಖಂಡರು ಆಗಮಿಸಿದ್ದು, ಇತ್ತಂಡಗಳ ನಡುವಿನ ಮಾತುಕತೆಯ ಬಳಿಕ ಗೋವುಗಳನ್ನು ಮರಳಿ ಹಟ್ಟಿಗೆ ಬಿಡಲಾಯಿತು.