ಕರಾಯದ ಕೊರೋನಾ ಸೋಂಕಿತನಿಗೆ ಶುಶ್ರೂಷೆಗೈದ ಇಬ್ಬರು ವೈದ್ಯರು, 6 ನರ್ಸುಗಳು ಮತ್ತು 4 ಜನ ಆಯಾಗಳು ಹೋಂ ಕ್ವಾರಂಟೈನ್

ಪುತ್ತೂರು / ಬೆಳ್ತಂಗಡಿ, ಮಾ. 29 : ಬೆಳ್ತಂಗಡಿ ತಾಲೂಕಿನ ಕರಾಯದ ಕೊರೋನಾ ಸೋಂಕಿತ ಪುತ್ತೂರಿನ ಸರಕಾರೀ ಐಸೋಲೇಷನ್ ನಲ್ಲಿದ್ದು, ಆತನ ಜತೆಗೆ ವ್ಯವಹರಿಸಿದ್ದ ಆಸ್ಪತ್ರೆಯ ಇಬ್ಬರು ವೈದ್ಯರು, ಆರು ಮಂದಿ ನರ್ಸುಗಳು ಮತ್ತು ಕೊಠಡಿಯ ಸ್ವಚ್ಛತೆಗೆ ಬರುತ್ತಿದ್ದ ನಾಲ್ಕು ಜನ ಆಯಾಗಳನ್ನು ಹೋಂ ಕ್ವಾರಂಟೈನ್ ನಲ್ಲಿ ಕಡ್ಡಾಯವಾಗಿ ಇರಲು ಸೂಚಿಸಲಾಗಿದೆ. ಇಂದಿನಿಂದಲೇ ಈ ಆದೇಶ ಪಾಲನೆಯಾಗಲಿದ್ದು, ಅವರೆಲ್ಲ ಇಂದು, ಮಾ. 29 ರಿಂದ ರಜೆಯಲ್ಲಿದ್ದು ಕರ್ತವ್ಯಕ್ಕೆ ಹಾಜರಾಗಿಲ್ಲ.

ಕರಾಯದ ಈ ವ್ಯಕ್ತಿ ಮಾ. 21 ರಂದು ದುಬೈನಿಂದ ತನ್ನ ಹುಟ್ಟೂರು ಕರಾಯದ ಜನತಾ ಕಾಲೋನಿಗೆ ಬಂದಿದ್ದ. ದುಬೈನಿಂದ ಹೊರಟ ಈ ವ್ಯಕ್ತಿ ನೇರ ಬೆಂಗಳೂರಿನ ನಿಲ್ದಾಣಕ್ಕೆ ಬಂದಿದ್ದ. ಅಲ್ಲಿಂದ ಆತ ksrtc ಕೆಂಪು ಬಸ್ಸು ಹತ್ತಿಕೊಂಡು ಮಂಗಳೂರು ಬಸ್ಸು ಹತ್ತಿದ್ದ. ಆನಂತರ ಆತನ ಮನೆ ಕರಾಯ ಆದುದರಿಂದ ಆತ ಉಪ್ಪಿನಂಗಡಿಯಲ್ಲಿ ಇಳಿದು ಅಲ್ಲಿಂದ ರಿಕ್ಷಾ ಬಾಡಿಗೆ ಮಾಡಿಕೊಂಡು ಕರಾಯದ ತನ್ನ ಮನೆ ಸೇರಿಕೊಂಡಿದ್ದ.

ಅಲ್ಲದೆ, ಈಗ ಸೋಂಕಿತನಾದ ವ್ಯಕ್ತಿ, ಆತನಿಗೆ ಕಡ್ಡಾಯವಾಗಿ ಹೋಂ ಕ್ವಾರಂಟೈನ್ ನಲ್ಲಿ ಇರಬೇಕೆಂದು ಹೇಳಿದ್ದರೂ ಆತ ಅಕ್ಕ ಪಕ್ಕದ ಮನೆ, ಅಂಗಡಿ, ಪೊಲೀಸ್ ಠಾಣೆ ಮತ್ತು ಬೆಳ್ತಂಗಡಿಗೂ ಒಮ್ಮೆ ಹೋಗಿ ಬಂದಿದ್ದ. ಅಲ್ಲದೆ, ತನ್ನ ಜವಾಬ್ದಾರಿ ಮರೆತು ಊರಲ್ಲಿ ಕ್ರಿಕೆಟ್ ಆಡಿದ್ದ. ಮಸೀದಿಗೆ ಎಡತಾಕಿದ್ದ. ಊರೂಸ್ ಗೆ ಕೂಡ ಹೋಗಿದ್ದ. ಹೀಗೆ ಹೋಗುವುದರ ಮುಖಾಂತರ ಎಲ್ಲೆಲ್ಲಿ ಸಾವಿನ ಸ್ಯಾಂಪಲ್ ಹಂಚಿ ಬಂದಿದ್ದಾನೋ ಯಾರಿಗೆ ಗೊತ್ತು?

ಮಾ. 24 ಆತನಿಗೆ ಕೊರೋನಾದ ಗುಣ ಲಕ್ಷಣಗಳಾದ ಒಣ ಕೆಮ್ಮು,ಉಸಿರಾಟದ ಸಮಸ್ಯೆ ತೋರಿ ಬಂದ ಹಿನ್ನೆಲೆಯಲ್ಲಿ ಆತ ಪುತ್ತೂರಿನ ಸರಕಾರೀ ಆಸ್ಪತ್ರೆಗೆ ದಾಖಲಾಗಿದ್ದ. ಅಲ್ಲಿ ಆತನನ್ನು ಶುಶ್ರೂಷೆ ಮಾಡಿದ ವೈದ್ಯ ಮತ್ತು ಸಿಬ್ಬಂದಿಗಳನ್ನು ಈಗ ಹೋಂ ಕ್ವಾರಂಟೈನ್ ನಲ್ಲಿ ಇಡುತ್ತಿರುವುದು.

Leave A Reply

Your email address will not be published.