ಹಿರೇಬಂಡಾಡಿ ಗ್ರಾಮದ ನೆಕ್ಕಿಲ್ ಎಂಬಲ್ಲಿ ಗುಡ್ಡಕ್ಕೆ ಕರೆಂಟ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ

ಹಿರೇಬಂಡಾಡಿ ಗ್ರಾಮದ ಅಡೆಕ್ಕಲಿನಲ್ಲಿ ಗುಡ್ಡಕ್ಕೆ ಆಕಸ್ಮಿಕ ಬೆಂಕಿ ಬಿದ್ದಿದೆ.
ಅಡೆಕ್ಕಲಿನ ಸಮೀಪ ನೆಕ್ಕಿಲ್ ಎಂಬಲ್ಲಿ ಈ ಬೆಂಕಿ ಆಕಸ್ಮಿಕ ನಡೆದಿದ್ದು, ಪಕ್ಕದಲ್ಲೇ ಹಾದುಹೋಗುವ ವಿದ್ಯುತ್ ಲೈನ್ ನಲ್ಲಿ ಆದ ಶಾರ್ಟ್ ಸರ್ಕ್ಯೂಟ್ ಕಾರಣ ಎನ್ನಲಾಗಿದೆ.

ಬೆಂಕಿಯು ಒಣಗಿದ ಹುಲ್ಲು ವ್ಯಾಪಿಸಿದ್ದ ಗುಡ್ಡವನ್ನು ಸುಡುತ್ತಿರುವಂತೆ ಗ್ರಾಮಸ್ಥರು ಶಾಸಕರ ವಾರ್ ರೂಮ್ ನ ಜೀವನ್ ಅವರಿಗೆ ಸುದ್ದಿ ಮುಟ್ಟಿಸಿದ್ದಾರೆ. ಅಲ್ಲಿಂದ ಅಗ್ನಿಶಾಮಕ ದಳಕ್ಕೆ ಮಾಹಿತಿ ತಲುಪಿ, ನಂತರ ಸ್ಥಳೀಯರ ಮತ್ತು ಅಗ್ನಿಶಾಮಕ ದಳದ ನ ಸಹಾಯದಿಂದ ಬೆಂಕಿಯನ್ನು ನಂದಿಸಲಾಗಿದೆ.


ಘಟನೆಯಲ್ಲಿ ಗುಡ್ಡದಲ್ಲಿದ್ದ ನೀರಿನ ಫೈಬರ್ ಟ್ಯಾಂಕ್ ಒಂದು ಬೆಂಕಿಗೆ ಆಹುತಿಯಾಗಿದೆ.

ಘಟನಾ ಸ್ಥಳದಲ್ಲಿ ಕೆಇಬಿ ಯವರೂ ಹಾಜರಿದ್ದರು. ವಿಶ್ವನಾಥ್ ಕೆಮ್ಮಟೆ, ಜೀವನ್, ಪಂಚಾಯತ್ ಅಧ್ಯಕ್ಷ ಶೌಕತ್ ಅಲಿ ಮತ್ತು VA ರಮಾನಂದ ಚಕ್ಕಡಿ ಅವರು ಬೆಂಕಿ ಆರಿಸುವಲ್ಲಿ ಸಹಾಯಮಾಡಿದರು.

Leave A Reply

Your email address will not be published.