ಕರಾಯದಲ್ಲಿ ಕೊರೋನಾ । ಊರಿಡೀ ಬಲಿ ಬಂದ ಈ ವ್ಯಕ್ತಿಯ ಜತೆ ksrtc ಬಸ್ಸಿನಲ್ಲಿ ಪ್ರಯಾಣಿಸಿದವರು ಮತ್ತು ಆತನ ಸಂಪರ್ಕ ಮಾಡಿದವರು ಎಚ್ಚರ !
ಬೆಳ್ತಂಗಡಿ ತಾಲೂಕಿನ ಕರಾಯದಿಂದ ಎದ್ದು ಬಂದ ಕೊರೋನಾ ಕೇಳಿ ಇಡೀ ಬೆಳ್ತಂಗಡಿಯೇ ಬೆಚ್ಚಿ ಬೆದರಿದೆ. ಆ ದಿನ ದುಬೈನಿಂದ ಹೊರಟ ಈ ವ್ಯಕ್ತಿ ನೇರ ಬೆಂಗಳೂರಿನ ನಿಲ್ದಾಣಕ್ಕೆ ಬಂದಿದ್ದ. ಅಲ್ಲಿಂದ ಆತ ಮಜೆಸ್ಟಿಕ್ ( ಕೆಂಪೇಗೌಡ ಬಸ್ ನಿಲ್ದಾಣ ) ಗೆ ಹೇಗೆ ಬಂದ ಎಂಬ ಬಗ್ಗೆ ಮಾಹಿತಿಯಿಲ್ಲ. ಅಲ್ಲಿಂದ ಆತ ksrtc ಕೆಂಪು ಬಸ್ಸು ಹತ್ತಿಕೊಂಡು ಮಂಗಳೂರು ಬಸ್ಸು ಹತ್ತಿದ್ದ. ಆನಂತರ ಆತನ ಮನೆ ಕರಾಯ ಆದುದರಿಂದ ಆತ ಉಪ್ಪಿನಂಗಡಿಯಲ್ಲಿ ಇಳಿದು ಅಲ್ಲಿಂದ ರಿಕ್ಷಾ ಬಾಡಿಗೆ ಮಾಡಿಕೊಂಡು ಕರಾಯದ ತನ್ನ ಮನೆ ಸೇರಿಕೊಂಡಿದ್ದ.
ಹೀಗೆ, ಬೆಂಗಳೂರಿನ ಮೆಜೆಸ್ಟಿಕ್ನಿಂದ ಆತ ಪ್ರಯಾಣಿಸಿದ ಬಸ್ಸಿನಲ್ಲಿ ಸಹಪ್ರಯಾಣಿಸಿದ ಪ್ರಯಾಣಿಕರು ಮತ್ತು ನಿರ್ವಾಹಕರ ಸುರಕ್ಷತೆಯ ಬಗ್ಗೆ ಈಗ ಪ್ರಶ್ನೆ ಎದ್ದಿದೆ.
ಪ್ರಯಾಣದ ದಿನಾಂಕ : 21/03/2020
ಬಸ್ಸು : ಕರ್ನಾಟಕ ಸಾರಿಗೆ
ಆತ ಆ ದಿನ ಪ್ರಯಾಣಿಸಿದ ಬಸ್ಸಿನ ಸಂಖ್ಯೆ : KA 19, F 3329
ಬಸ್ಸು ಹೊರಟ ಸಮಯ : ಸಂಜೆ 4.30
ಈ ಬಸ್ಸಿನಲ್ಲಿ ಸಹಪ್ರಯಾಣಿಸಿದ ರಿಸರ್ವೇಶನ್ ಇದ್ದ ಎಲ್ಲ ಪ್ರಯಾಣಿಕರಿಗೂ ಸುದ್ದಿ ಮುಟ್ಟಿಸಲಾಗಿದೆ. ರಿಸರ್ವೇಶನ್ ಇಲ್ಲದೆ ಬಸ್ಸು ಹತ್ತಿದವರ ಸುರಕ್ಷತೆ ಮತ್ತು ಹಾಗೊಂದು ವೇಳೆ ಅವರಿಗೆ ಸೋಂಕು ತಗುಲಿದ್ದರೆ, ಅವರ ಸಂಪರ್ಕಕ್ಕೆ ಬಂದ ವ್ಯಕ್ತಿಗಳು….ಈ ಎಲ್ಲ ಜನರ ಆರೋಗ್ಯದ ಬಗ್ಗೆ ಕೂಡ ಗಮನ ಹರಿಸಬೇಕಾಗಿದೆ.
ಅಲ್ಲದೆ, ಈಗ ಸೋಂಕಿತನಾದ ವ್ಯಕ್ತಿ, ಆತನಿಗೆ ಕಡ್ಡಾಯವಾಗಿ ಹೋಂ ಕ್ವಾರಂಟೈನ್ ನಲ್ಲಿ ಇರಬೇಕೆಂದು ಹೇಳಿದ್ದರೂ ಆತ ಅಕ್ಕ ಪಕ್ಕದ ಮನೆ, ಅಂಗಡಿ, ಪೊಲೀಸ್ ಠಾಣೆ ಮತ್ತು ಬೆಳ್ತಂಗಡಿಗೂ ಒಮ್ಮೆ ಹೋಗಿ ಬಂದಿದ್ದ. ಅಲ್ಲದೆ, ತನ್ನ ಜವಾಬ್ದಾರಿ ಮರೆತು ಊರಲ್ಲಿ ಕ್ರಿಕೆಟ್ ಆಡಿದ್ದ. ಮಸೀದಿಗೆ ಎಡತಾಕಿದ್ದ. ಊರೂಸ್ ಗೆ ಕೂಡ ಹೋಗಿದ್ದ. ಹೀಗೆ ಹೋಗುವುದರ ಮುಖಾಂತರ ಎಲ್ಲೆಲ್ಲಿ ಸಾವಿನ ಸ್ಯಾಂಪಲ್ ಹಂಚಿ ಬಂದಿದ್ದಾನೋ ಯಾರಿಗೆ ಗೊತ್ತು?
ಆತನೇನೋ ಯುವಕ, ಆಸ್ಪತ್ರೆಗೆ ಹೋಗಿ ಒಳ್ಳೆಯ ಚಿಕಿತ್ಸೆ ಪಡೆದುಕೊಂಡು ಗುಣಮುಖನಾಗಿ ಬರುತ್ತಾನೆ. ಆತನಿಂದ ಸಾವಿನ ಸ್ಯಾಂಪಲ್ ಯಾರಾದರೂ ವೃದ್ದರು ಪಡಕೊಂಡಿದ್ದಾರೆ ಅವರ ಗತಿಯೇನು ? ಇನ್ನು ಆತ ಹೋದ ಹೆಜ್ಜೆ ಗುರುತುಗಳನ್ನು ಹಿಡಿದುಕೊಂಡು ಪೊಲೀಸರು, ಆರೋಗ್ಯ ಇಲಾಖೆ, ಎಲ್ಲಾ ಆಡಳಿತ ವ್ಯವಸ್ಥೆ ಹೋಗಬೇಕಿದೆ. ಇದರ ಬದಲು ಇಂತಹಾ ಬೇಜವಾಬ್ದಾರಿಯ ವ್ಯಕ್ತಿಗಳನ್ನು ವಿಮಾನ ನಿಲ್ದಾಣದಿಂದಲೇ ಎತ್ತಾಕಿಕೊಂಡು ಬಂದು ಯಾವುದಾದರೂ ಹಳೆಯ ಶೆಡ್ಡಿನಲ್ಲಿ ಹಾಕಿ ಪಹರೆ ಕಾದಿರುತ್ತಿದ್ದರೆ, ಈಗ ಮಾಡುವ ಇಷ್ಟೆಲ್ಲ ಶ್ರಮ ಇರುತ್ತಿರಲಿಲ್ಲ. ಮತ್ತು ಮುಖ್ಯವಾಗಿ ಬೇರೆ ಯಾರಿಗೂ ಸೋಂಕು ಬರುವ ಸಾಧ್ಯತೆ ಇರುತ್ತಿರಲಿಲ್ಲ.