ಬಂಟ್ವಾಳದ 10 ತಿಂಗಳ ಮಗುವಿಗೆ ಕೊರೋನಾ !

ಬಂಟ್ವಾಳದ 10 ತಿಂಗಳ ಮಗುವಿಗೆ ಕೊರೋನಾ !

ದಕ್ಷಿಣ ಕನ್ನಡದ ಬಂಟ್ವಾಳ ತಾಲೂಕು ಸಜಿಪನಡು ಗ್ರಾಮದ 10 ತಿಂಗಳ ಮಗುವಿಗೆ ಕೊರೋನಾ ಖಚಿತವಾಗಿದೆ. ಆ ಮಗುವಿನ ಕುಟುಂಬ ನೆಂಟರ ಮನೆಗೆಂದು ಕೇರಳಕ್ಕೆ ಹೋಗಿತ್ತು. ಸಡನ್ ಆಗಿ ಒಂದು ರಾತ್ರಿ ಮಗುವಿಗೆ ತೀವ್ರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಆ ಕೂಡಲೇ ಮಗುವನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಅಲ್ಲಿ ವೈದ್ಯರು ಅನುಮಾನದಿಂದ ಮಗುವಿನ ರಕ್ತದ ಮಾದರಿಯನ್ನು ಲ್ಯಾಬ್ ಗೆ ಕಲಿಸಿಕೊಟ್ಟಿತ್ತು. ಅದು ಮಾರ್ಚ್ 24.

ಇದೀಗ ರಿಪೋರ್ಟ್ ಪಾಸಿಟಿವ್ ಅಂತ ಬಂದಿದ್ದು ಮಗುವಿಗೆ ಕೊರೋನಾ ಇರುವುದು ಖಚಿತವಾಗಿದೆ. ಆದರೂ, ವೈದ್ಯರು ಮಗುವಿನ ಗಂಟಲ ದ್ರವವನ್ನು ಮತ್ತೊಂದು ಬಾರಿ ಪರೀಕ್ಷೆಗೆ ಕಳಿಸಿದ್ದಾರೆ. ಮಗುವನ್ನು ನೋಡಿಕೊಳ್ಳುವುದು ಮತ್ತು ಮಗುವಿಗೆ ಔಷಧ ನೀಡುವುದು ತುಂಬಾ ಸೂಕ್ಷ್ಮ ಕೆಲಸ. ಆದುದರಿಂದ ಮತ್ತೊಂದು ಬಾರಿಯ ಪರೀಕ್ಷೆ ಮಾಡುತ್ತಿರುವುದು. ಈಗಾಗ್ಲೇ ಮಗುವಿನ ಅಪ್ಪ ಅಮ್ಮನನ್ನ ಮಗುವಿನಿಂದ ಪ್ರತ್ಯೇಕಿಸಿ ಹೋಮ್ ಕ್ವಾರಂಟೈನ್ ಇಡಲಾಗಿದೆ.

ಸಜಿಪನಡು ಗ್ರಾಮಕ್ಕೆ ಕಟ್ಟು ನಿಟ್ಟಿನ ದಿಗ್ಬಂಧ ವಿಧಿಸಲಾಗಿದ್ದು ಗ್ರಾಮದೊಳಗೆ ಒಳ ಹೋಗುವ ಮತ್ತು ಹೊರಗೆ ಬರುವ ಎಲ್ಲ ಸಂಚಾರವನ್ನು ಬಂದ್ ಮಾಡಲಾಗಿದೆ.

ಇದರ ಮಧ್ಯೆ ಒಂದು ಶುಭ ಸುದ್ದಿ ಬಂದಿದೆ. ಕರ್ನಾಟಕದ ಮೊದಲ ಸೋಂಕಿತ ವ್ಯಕ್ತಿ ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಅವರ ಇಡೀ ಕುಟುಂಬವೇ ಗುಣಮುಖವಾಗಿದೆ.

Leave A Reply

Your email address will not be published.