ಹೋಂ ಕ್ವಾರಂಟೈನ್ ವ್ಯಕ್ತಿಗಳು ಮಾತು ಕೇಳದೆ ಮನೆಬಿಟ್ಟು ತಿರುಗಲು ಹೋದರೆ, ಅವರಿಗೆ ಕಠಿಣ ಕಾನೂನು ಕ್ರಮ ಜರಗಿಸಿ | ಸಂಪಾದಕೀಯ

ಈ ಹೋಂ ಕ್ವಾರಂಟೈನ್ ವ್ಯಕ್ತಿಗಳು ತಮಗೆ ಸಂಬಂಧಿಸಿದ ವ್ಯಕ್ತಿಗಳಿಗೆ ಮಾತ್ರವಲ್ಲ, ಇಡೀ ಸಮುದಾಯಕ್ಕೆ ಕೊರೋನಾ ಅನ್ನು ತಲುಪಿಸಬಲ್ಲರು. ಒಟ್ಟಾರೆ ಭಾರತದಲ್ಲಿ ಇವತ್ತು ಈ ಪರಿಯಾದ ಲಾಕ್ ಡೌನ್ ಗೆ, ಗಾಬರಿಗೆ, ಭಯಕ್ಕೆ, ಆರ್ಥಿಕತೆಯ ಸ್ಲೋ ಡೌನ್ ಗೆ, ಲಾಕ್ ಡೌನ್ ಗೆ ಜನಸಾಮಾನ್ಯರ ತೊಂದರೆಗೆ ಕಾರಣರಾದವರು ಬೇರೆ ದೇಶ ಸುತ್ತಿ, ಒಂದೋ ದುಡ್ಡು ಮಾಡಿಕೊಂಡು, ಇಲ್ಲವೋ ತಿರುಗಾಡಲು ಹೋಗಿ ಬಂದ ವ್ಯಕ್ತಿಗಳು !

ಅವರು ದಿನೇ ದಿನೇ ಸರ್ಕಾರದ ಮಾತಿನ ವಿರುದ್ಧ ನಡೆದುಕೊಳ್ಳುತ್ತಿದ್ದಾರೆ. ನಿನ್ನೆ ಕೂಡಾ, ಇಲ್ಲೇ ಕರ್ನಾಟಕದಲ್ಲೇ ಹೋಮ್ ಕ್ವಾರಂಟೈನ್ ವ್ಯಕ್ತಿಯೊಬ್ಬ ಕುಟುಂಬ ಸಮೇತ ಕೇರಳ ಪ್ರವಾಸಕ್ಕೆ ಹೊರಟಿದ್ದನಂತೆ. ಅಂತಹ ಮಾತು ಕೇಳದೆ ಬೀದಿಗೆ ಬರುವ ವಿಷಕ್ರಿಮಿಗಳನ್ನು ಸರಕಾರ ನಡು ರಸ್ತೆಯಲ್ಲೇ ಶೂಟ್ ಮಾಡಿ ಸಾಯಿಸಬೇಕು. ಇಲ್ಲದೆ ಹೋದರೆ ಇಡೀ ಭಾರತದಲ್ಲಿ ಮಾರಣ ಹೋಮ ನಡೆದು ಹೋಗುತ್ತದೆ. ಒಂದು ಗುಂಡೇಟು ಮೊಳಗಿ, ಸರಕಾರದ ಕಟ್ಟಪ್ಪಣೆ ಉಲ್ಲಂಘಿಸಿದ ಓರ್ವ ಹೋಮ್ ಸ್ಟೇ ವ್ಯಕ್ತಿಯ ಹೆಣ ಬಿದ್ದರೆ, ಎಲ್ಲವೂ ಸರಿಯಾಗುತ್ತದೆ. ಇವೆಲ್ಲ, ಬೇರೆ ದೇಶದಲ್ಲಿ ನಡೆಯುತ್ತದೆ. ನಮ್ಮ ದೇಶದಲ್ಲಿಯೂ ಆಗಬೇಕು. ಆಗ ಮಾತ್ರ ಪರಿಣಾಮಕಾರಿ ಪರಿಣಾಮ ಸಾಧ್ಯ. ಅಲ್ಲಿ, ಇಲ್ಲಿ, ಬೀದಿಯಲ್ಲಿ, ಅಂಗಡಿಯಲ್ಲಿ ಇಂತವರಿಂದ ಸೋಂಕು ಪಡೆದು ಸಾಯಲು ನಾನಂತೂ ರೆಡಿ ಇಲ್ಲ !- ಸಂ.

ಇವತ್ತಿಗೂ ಕರ್ನಾಟಕ ಸರಕಾರ, ಮಾತ್ರವಲ್ಲ ಇಡೀ ದೇಶದಲ್ಲಿ, ಎಲ್ಲ ಸರಕಾರಗಳು ಹೋಮ್ ಕ್ವಾರಂಟೈನ್ ಮ್ಯಾನೇಜ್ ಮೆಂಟಿನಲ್ಲಿ ದೊಡ್ಡ ಪ್ರಮಾಣದಲ್ಲಿ ಸೋತಿದೆ. ನಮ್ಮ ಕೊರೋನಾ ವಿರುದ್ದದ ಗೆಲುವು ಇರುವುದು, ಎಷ್ಟು ಪ್ರಬಲವಾಗಿ ನಾವು ಹೋಂ ಕ್ವಾರಂಟೈನ್ ಅನ್ನು ಮಾಡುತ್ತೇವೆ ಮತ್ತು ಕಡ್ಡಾಯವಾಗಿ, ಅವರು ಹೊರಹೋಗದಂತೆ ನಿರ್ಬಂದಿಸುತ್ತೇವೆ ಎನ್ನುವುದರಲ್ಲಿ ಗೆಲುವು ನಿರ್ಧಾರವಾಗುತ್ತದೆ.

ತಪ್ಪು 1 : ವಿದೇಶದಿಂದ ಕರ್ನಾಟಕಕ್ಕೇ ಸುಮಾರು 40000 ಜನರು ಕಳೆದೊಂದು ತಿಂಗಳಿನಲ್ಲಿ ಬಂದರಲ್ಲ. ಮೊದಲಿಗೆ ಅವರನ್ನು ದೇಶದೊಳಕ್ಕೆ ಬಿಟ್ಟುಕೊಂಡದ್ದೇ ತಪ್ಪು.

ತಪ್ಪು 2 : ರಾಜತಾಂತ್ರಿಕ ಮತ್ತು ಮಾನವಿಕ ಕಾರಣಗಳಿಂದ ಬಿಟ್ಟುಕೊಂಡಿದ್ದರೂ, ಆ ವ್ಯಕ್ತಿಗಳಿಗೆ ಮೌಖಿಕ ನಿರ್ದೇಶನ ನೀಡಿ ಮನೆಯಲ್ಲಿರಲು ಹೇಳಿದ್ದು ಎರಡನೆಯ ತಪ್ಪು. ನೀವೆಲ್ಲಿಯೂ ಹೋಗಕೂಡದು, ಬರಬಾರದು ಅಂತ ಹೇಳುವುದು ಒಂದು ಥರಹದ ಟ್ರೇನಿಂಗ್ ಥರ. ಅದಕ್ಕೆ ಅಡ್ಮಿನಿಸ್ಟ್ರೇಟಿವ್ ಕಂಟ್ರೋಲ್ ಎಂದೂ ಕರೆಯುತ್ತೇವೆ. ಯುದ್ಧ ಕಾಲದಲ್ಲಿ, ತುರ್ತು ಸಂದರ್ಭಗಳಲ್ಲಿ, ತುರ್ತು ಆರೋಗ್ಯದ ಅಗತ್ಯ ಸನ್ನಿವೇಶಗಳಲ್ಲಿ ಮೌಖಿಕ ಮತ್ತು ಲಿಖಿತ ಸಂದೇಶ/ ಆರ್ಡರ್ ಗಳಿಗೆ ಬೆಲೆಯಿಲ್ಲ.

ತಪ್ಪು 3 : ಯಾವಾಗ ಸರಕಾರದ ಮಾತು ಕೇಳದೆ ಈ ಹೋಂ ಕ್ವಾರಂಟೈನ್ ವ್ಯಕ್ತಿಗಳು ಹೊರಗಡೆ ಹೋದರೋ, ಆಗ ಹೋಂ ಕ್ವಾರಂಟೈನ್ ವ್ಯಕ್ತಿಗಳಿಗೆ ಸ್ಟ್ಯಾಂಪ್ ಹಾಕೋದನ್ನು ಶುರುಮಾಡಿದರು. ಸ್ಟಾಂಪಿಂಗ್, ಒಂದು ವೇಳೆ ಮಾಡುವುದಿದ್ದರೆ, ಅದು ಮೊದಲ ನಡೆ ಆಗಿರಬೇಕಿತ್ತು – ಯಾವಾಗ ವಿಮಾನ ನಿಲ್ದಾಣದಲ್ಲಿ ಅವರು ಇಳಿದರೋ, ಅಲ್ಲಿಯೇ ಹಾಕಬೇಕಿತ್ತು. ಈ ಹಂತದಲ್ಲಿ ಸ್ಟಾಂಪಿಂಗ್ ಪ್ರಯೋಜನ ಜೀರೋ. ತುಂಬು ತೋಳಿನ ಶರ್ಟ್ ಮತ್ತು ಬುರ್ಕಾ ಹಾಕ್ಕೊಂಡು ಹೊರಹೋದರೆ ನಿಮ್ಮ ಸ್ಟ್ಯಾಂಪ್ ಗೆ ಏನು ಬಂತು ಬೆಲೆ ? ಸರಕಾರಕ್ಕೆ ತಲೆಯಲ್ಲಿ ಏನಿದೆ ಎಂದು ಅರ್ಥನೇ ಆಗುತ್ತಿಲ್ಲ.

ತಪ್ಪು 4 : ಮೊನ್ನೆ ಓರ್ವ ಹೋಂ ಕ್ವಾರಂಟೈನ್ ನಲ್ಲಿದ್ದ ವ್ಯಕ್ತಿ ತನ್ನ ಕುಟುಂಬದೊಂದಿಗೆ ಟ್ರಿಪ್ ಹೋಗುವಾಗ ಸಿಕ್ಕಿಬಿದ್ದಿದ್ದ. ಇವತ್ತು ತುಮಕೂರಿನಿಂದ ಸುದ್ದಿ ಬಂದಿದೆ. ಹೋಂ ಸ್ಟೇ ಯಲ್ಲಿ ಇದ್ದ ವ್ಯಕ್ತಿ ತನ್ನ ಮನೆ ಮುಂದೆ ಅಂಟಿಸಿದ್ದ ಸರಕಾರ ಎಚ್ಚರಿಕೆಯನ್ನು ಹರಿದು ಹಾಕಿ ಬೀದಿ ಸುತ್ತಲು ಹೋಗಿದ್ದನಂತೆ. ನಿನ್ನೆ ಕರಾಯದಲ್ಲಿ ಕೊರೋನಾ ಪಾಸಿಟಿವ್ ಆದ ವ್ಯಕ್ತಿ, ಮನೆಯಿಂದ ಹೊರಹೋಗಬಾರದೆಂದರೂ ಹೊರಹೋಗಿ ಗೆಳೆಯರೊಂದಿಗೆ ಕ್ರಿಕೆಟ್ ಆಡಿದ್ದನಂತೆ. ಹೀಗೆ, ಹೋಂ ಸ್ಟೇ ಯ ವ್ಯಕ್ತಿಗಳು ಮಾತು ಕೇಳುವುದಿಲ್ಲವೆಂದು ಖಚಿತವಾದ ತಕ್ಷಣ ಆದರೂ ಸರಕಾರ ಎಚ್ಚೆತ್ತುಕೊಂಡಿದೆಯಾ ? ಮನಸ್ಸು ಮಾಡಿದರೆ ನಮ್ಮ ಸರ್ಕಾರದ ಮಿಷನರಿಗೆ ಅವರೆಲ್ಲರನ್ನು ದಿನದ 24 ಗಂಟೆಯಲ್ಲಿ ಲಿಫ್ಟ್ ಮಾಡಿ ರಿ-ಲೊಕೇಟ್ ಮಾಡಬಹುದಿತ್ತು. ಅಥವಾ ಪ್ರತಿಯೊಬ್ಬರನ್ನು ಥರ್ಡ್ ಪಾರ್ಟಿ ಮಾನಿಟರಿಂಗ್ ( ಮೂರನೆಯ ವ್ಯಕ್ತಿಯಿಂದ ಕಂಟ್ರೋಲ್ ಮಾಡಬೇಕಿತ್ತು. ). ಕಡ್ಡಾಯವಾಗಿ, ಅವರು ಹೊರಹೋಗದಂತೆ ಕೂಡಿ ಹಾಕಿ ನಿರ್ಬಂಧಿಸಬೇಕಿತ್ತು.

ತಪ್ಪು 5 : ಇಷ್ಟೆಲ್ಲ ಆದ ಮೇಲೆ ಆದರೋ ಸರಕಾರ ಎಚ್ಚತ್ತುಕೊಂಡಿಲ್ಲ. ಜನರಿಗೆ ಬಾಯ್ಮಾತಿನಲ್ಲಿ ಹೇಳಿದರೆ ಅರ್ಥ ಆಗಲ್ಲ ಅಂತ ಇನ್ನೂ ನಮ್ಮ ಸರಕಾರಗಳಿಗೆ ಅರ್ಥ ಆಗಲ್ಲವಲ್ಲ ? ಇನ್ನಾದರೂ ಈ ಹೋಂ ಕ್ವಾರಂಟೈನ್ ಜನರನ್ನು ಭದ್ರತಾಪಡೆಗಳ ಬಂಧನದಲ್ಲಿ ಇಡಬೇಕು. ಈ ಕೆಲಸ ತಕ್ಷಣ ಆಗಬೇಕು. ಇಲ್ಲದೆ ಹೋದರೆ, ನಾವು ನಾವೆಲ್ಲ ಲೈಫ್ ಟೈಮ್ ಹೀಗೆ ಲಾಕ್ ಡೌನ್ ನಲ್ಲೆ ಮನೇಲಿ ಇರಬೇಕಾಗುತ್ತದೆ.

ತಪ್ಪು 7 : ದೇಶದ ಮಟ್ಟದಲ್ಲಿ ನನಗೆ ಗೊತ್ತಿಲ್ಲ, ರಾಜ್ಯ ಮಟ್ಟದಲ್ಲಿ, ಜಿಲ್ಲಾ ಮಟ್ಟದಲ್ಲಿ ಡಿಸಾಸ್ಟರ್ ಕಂಟ್ರೋಲ್ ನಲ್ಲಿ ಪಳಗಿದ ಸಾವಿರಾರು ವೃತ್ತಿಪರರು ಹಲವು ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರುಗಳು ಜನರನ್ನು ಪಾರುಮಾಡುವುದು ( Rescue), ರೋಗ ಹರಡದಂತೆ ಎಚ್ಚರಿಕೆವಹಿಸುವುದು (Containment), Contingency ( ಆಕಸ್ಮಿಕ) ಪ್ಲಾನ್ ಮಾರುವುದರಲ್ಲಿ ನಿಷ್ಣಾತರಾಗಿರುತ್ತಾರೆ. ಮಾಮೂಲು ಸನ್ನಿವೇಶಗಳಲ್ಲಿ, ಆಯಾ ಜಿಲ್ಲೆಯ ಡಿಸಿಯವರೇ ಎಮರ್ಜೆನ್ಸಿ ಕಂಟ್ರೋಲರ್. ಆದರೆ, ಕೆಮಿಕಲ್ ಫ್ಯಾಕ್ಟರಿಗಳಲ್ಲಿ ಕೆಲಸ ಮಾಡಿ ಅನುಭವವಿರುವ ಪ್ರೊಫೆಶನಲ್ಸ್ ಗೆ ಸೋಂಕು ತಡೆಯದಂತೆ ತಡೆಯುವ ಸ್ಟ್ರಾಟೆಜಿಗಳು, ಮುನ್ನೆಚ್ಚರಿಕೆಗಳು ಕರಗತ. ಅವರ ಸಹಾಯವನ್ನು ಸರಕಾರ ಪಡೆದುಕೊಳ್ಳಬೇಕು. ಅದನ್ನು ಬಿಟ್ಟು, ರಾಜಕೀಯ ಅನುಭವಇರುವ, ‘ಮಾತುಗಾರ’ ರನ್ನು ಟಾಸ್ಕ್ ಫೋರ್ಸ್ ಆಗಿ ನೇಮಿಸುತ್ತದೆ ನಮ್ಮ ಸರಕಾರ.

ತಪ್ಪು 6 : ಅಲ್ಲಿ ಕೇಂದ್ರದಲ್ಲಿ ಆರೋಗ್ಯ ಮಂತ್ರಿ ಇದ್ದಾರೆ. ಹೆಸರಿಗೆ ಆತ ವೈದ್ಯ. ENT ಡಾಕ್ಟರ್. ಕೊರೋನಾ ಹಬ್ಬಿದ ವಿಚಾರದಲ್ಲಿ, ಭಾರತದಲ್ಲಿ ಎಲ್ಲರಿಂದ ಮೊದಲು ಫೇಲ್ಯೂರು ಆದದ್ದು ಅಂದರೆ ಅದು ಭಾರತದ ಅಯೋಗ್ಯ ಅರೋಗ್ಯ ಮಂತ್ರಿ ಡಾ. ಹರ್ಷವರ್ಧನ್. ಯಾಕೆಂದರೆ, ನಮ್ಮ ಮುಂದೆ ಮೂರು ತಿಂಗಳ ಅನುಭವ ಇತ್ತು. ಚೀನಾದ ಉದಾಹರಣೆ ನಮ್ಮಕಣ್ಣ ಮುಂದಿತ್ತು. ಕೊರೋನಾ ಮುಖ್ಯವಾಗಿ ಭಾರತಕ್ಕೆ ಹರಡಿದ್ದು ವಿದೇಶದಿಂದ ಬಂದ ಪ್ರಯಾಣಿಕರಿಂದ. ಅವರನ್ನು ಸರಿಯಾಗಿ ಗೃಹಬಂಧನದಲ್ಲಿಟ್ಟು ನಿಯಂತ್ರಿಸಬೇಕಿತ್ತು. ಅದು ಗೊತ್ತಿದ್ದೂ, ಸಾಕಷ್ಟು ತಯಾರಿ ಆಗುವಲ್ಲಿ ಮತ್ತು ವಿದೇಶದಿಂದ ಕೊರೋನಾದ ಒಳ ಹರಿವು ( ಮುಖ್ಯವಾಗಿ ವಿಮಾನ ನಿಲ್ದಾಣಗಳ ಮೂಲಕ ) ನಿಯಂತ್ರಿಸುವಲ್ಲಿ ಅರೋಗ್ಯ ಮಂತ್ರಿ ಡಾ. ಹರ್ಷವರ್ಧನ್ brutal ಆಗಿ ಫೇಲ್ ಆಗಿದ್ದಾರೆ. ಒಂದು ಕನಿಷ್ಠ ಮೀಟಿಂಗು ಕೂಡಾ ರಾಜ್ಯಗಳ ಜತೆ ನಡೆಸಿದ್ದು ಯಾರು ಕೂಡಾ ಕಂಡಿಲ್ಲ. ಇವೇ ಕಾರಣಗಳಿಗಾಗಿ ಆತ, ಈಗ ಅಲ್ಲದೆ ಹೋದರು, ಕೊರೋನಾ ಕಂಟ್ರೋಲ್ ಬಂದ ಮೇಲೆಯಾದರೂ ಮಂತ್ರಿಮಂಡಲದಿಂದ ಹೊರ ಬಂದುಬಿಡಬೇಕು.

ಮೋದಿ ಮಧ್ಯೆ ಬಂದು ಪರಿಸ್ಥಿತಿ ಕೈಗೆ ತೆಗೆದುಕೊಂಡು 21 ದಿನಗಳ ಲಾಕ್ ಡೌನ್ ಘೋಷಿಸದೆ ಹೋಗಿದ್ದರೆ, ಬಹುಶ: ಪರಿಸ್ಥಿತಿಯನ್ನು ಊಹಿಸಿಕೊಳ್ಳಲೂ ಸಾಧ್ಯವಾಗುತ್ತಿಲ್ಲ.

ಕೊನೆಯದಾಗಿ ಸರಕಾರಕ್ಕೆ ಬೇಡಿಕೆ ಮತ್ತು ಎಚ್ಚರಿಕೆ. ನೀವು ಎಲ್ಲಕ್ಕಿಂತ ಮೊದಲು ಹೋಂ ಕ್ವಾರಂಟೈನ್ ಅವರನ್ನು 100 % ಮ್ಯಾನೇಜ್ ಮಾಡಿ. ಅಲ್ಲಿಗೆ ಅರ್ಧ ಯುದ್ಧ ಗೆದ್ದಂತೆಯೇ ! ಮಾತು ಕೇಳದೆ, ಕಮ್ಯೂನಿಟಿ ಸೋಂಕಿಗೆ ತೊಡಗುವ ಇಂತವರಿಗೆ ಸರಕಾರ ಶೂಟ್ ಅಟ್ ಸೈಟ್ ಆಜ್ಞೆ ಮಾಡಿಸಿ. ಒಂದು ಜೀವ ಹೋದರೇನಂತೆ: ಲಕ್ಷ ಜೀವಗಳು ಉಳಿಯುತ್ತವೆ !

ಸುದರ್ಶನ್ ಬಿ. ಪ್ರವೀಣ್, ಬೆಳಾಲು ( ಸಂ )

Leave A Reply

Your email address will not be published.