ಯುವತಿಯ ಜತೆ ಮಾತನಾಡಿದ ವಿಚಾರ : ಯುವಕನನ್ನು ಥಳಿಸಿ ಕೊಂದ ಯುವತಿಯ ಮನೆಯವರು

Share the Article

ಯುವಕನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ಪೊಲೀಸ್ ಠಾಣಾ ವ್ಯಾಪ್ತಿಯ ಬಾಳ್ಳುಪೇಟೆ ಗ್ರಾಮದ ಅಂಬೇಡ್ಕರ್ ನಗರದಲ್ಲಿ ನಡೆದಿದೆ.

ಅನಿಲ್‌ರಾಜ್ (22) ಮೃತ ಯುವಕ. ಸ್ನೇಹಿತ ಪ್ರಜ್ವಲ್ ಹುಟ್ಟುಹಬ್ಬದ ಪಾರ್ಟಿಯಲ್ಲಿ ಮೃತ ಅನಿಲ್‌ರಾಜ್ ಹಾಗೂ ಸ್ನೇಹಿತ ಪ್ರಸಾದ್ ಭಾಗಿಯಾಗಿದ್ದರು. ಪಾರ್ಟಿಯಿಂದ ವಾಪಾಸ್ ಬರುವಾಗ ಅನಿಲ್‌ರಾಜ್‌ನನ್ನು ಪ್ರಸಾದ್ ಕುಟುಂಬಸ್ಥರು ಅಡ್ಡಗಟ್ಟಿ ಪ್ರಸಾದ್​ ತಂಗಿಯ ಫೋನ್‌ನಲ್ಲಿ ಮಾತನಾಡುತ್ತಿದ್ದ ವಿಷಯವಾಗಿ ಗಂಭೀರವಾಗಿ ಹಲ್ಲೆ ನಡೆಸಿದ್ದಾರೆ.

ಸ್ಥಳದಲ್ಲಿಯೇ ಥಳಿತಕ್ಕೆ ಮೃತಪಟ್ಟ ಯುವಕನನ್ನು ಮನೆಯ ಹಿಂಬದಿಯಲ್ಲಿ ಗುಂಡಿ ತೆಗೆದು ಹೂತಿಟ್ಟಿದ್ದಾರೆ.

ಮಗ ಮನೆಗೆ ಬಾರದ ಹಿನ್ನೆಲೆಯಲ್ಲಿ ಅನಿಲ್ ಪೋಷಕರು ಹುಡುಕಾಡಿಕೊಂಡು ಪ್ರಸಾದ್ ಮನೆಗೆ ತೆರಳಿದ್ದಾರೆ.

ಈ ವೇಳೆ ಶವ ಹೊತ್ತಿದ್ದ ಪ್ರದೇಶದಲ್ಲಿ ಮೃತನ ಕೈಬೆರಳುಗಳು ಹೊರಗೆ ಕಾಣುತ್ತಿತ್ತು. ಈ ಬಗ್ಗೆ ಅನಿಲ್ ಕುಟುಂಬಸ್ಥರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು,ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರೋಪಿಗಳಾದ ಪ್ರಸಾದ್, ಜಯಲಕ್ಷ್ಮಿ, ಪ್ರಿಯ ಮತ್ತು ಮೋಹನ್​ನನ್ನು ಬಂಧಿಸಿದ್ದಾರೆ.

Leave A Reply