Breaking News | ಪೊಲೀಸರ ಉಸ್ತುವಾರಿಯಲ್ಲಿಯೇ ‘ ಡಿ-ಮಾರ್ಟ್ ‘ ಮಾಲ್ ನಲ್ಲಿ ಭರ್ಜರಿ ವ್ಯಾಪಾರ | ಬೆಂಗಳೂರಿನ ಯಲಹಂಕ ನ್ಯೂ ಟೌನ್
ಸರಕಾರ ವಾರದ ಹಿಂದೇನೆ ಎಲ್ಲ ಮಾಲ್ ಗಳನ್ನು ಬಂದ್ ಮಾಡುವಂತೆ ಆದೇಶ ಹೊರಡಿಸಿತ್ತು. ಅದರಂತೆ ಎಲ್ಲ ಮಾಲ್ ಗಳು ನಿಯತ್ತಾಗಿ ಬಾಗಿಲು ಮುಚ್ಚಿದ್ದವು. ಆದರೆ ಡಿ ಮಾರ್ಟ್ ಮಾತ್ರ ಇವತ್ತಿಗೂ, ಈ ಕ್ಷಣಕ್ಕೂ ವ್ಯಾಪಾರ ಮಾಡುತ್ತಿದೆ. ಪೊಲೀಸರ ಸುಪರ್ದಿಯಲ್ಲಿಯೆ ಎಂದರೆ ನೀವು ಯಾರೂ ನಂಬಲಿಕ್ಕಿಲ್ಲ.
ಈ ಚಿತ್ರ ಕಂಡು ಬರುತ್ತಿರುವುದು ಬೆಂಗಳೂರಿನ ಯಲಹಂಕ ನ್ಯೂ ಟೌನ್ ನ ಮದರ್ ಡೈರಿಯ ಪಕ್ಕ ಇರುವ ಡಿ ಮಾರ್ಟ್ ನಲ್ಲಿ.
ಭರ್ಜರಿ ವ್ಯಾಪಾರ ಅತ್ತ ನಡೆದಿದ್ದರೆ ಪಕ್ಕದಲ್ಲೇ ಪೊಲೀಸು ಜೀಪು ನಿಂತಿದೆ. ಒಳಗೆ ದೊಡ್ಡ ಗುಂಪು ಶಾಪಿಂಗ್ ಮಾಡುತ್ತಿದೆ. ಗೇಟ್ ನಲ್ಲಿ ಮತ್ತೆ ನೂರು ಜನ ಕಾದು ಕೂತಿದ್ದಾರೆ.
ಅತ್ತ ಕರ್ನಾಟಕವನ್ನು ಟೋಟಲ್ ಲಾಕ್ ಡೌನ್ ಮಾಡಲು ಮೀನ ಮೇಷ ಎಣಿಸುತ್ತಿದೆ. ದೆಹಲಿಯಲ್ಲಿ ಕೇಜ್ರಿವಾಲ್ ಟೋಟಲ್ ಲಾಕ್ ಡೌನ್ ಮಾಡಿ ಎಲ್ಲರ ಕೈಯಿಂದ ‘ ಶಬಾಷ್ ‘ ಅಂತ ಹೊಗಳಿಸಿಕೊಳ್ಳುತ್ತಿದ್ದಾರೆ. ಬೇರೆ ಕೆಲವು ರಾಜ್ಯಗಳು, ದೇಶಗಳು ಟೋಟಲ್ ಲಾಕ್ ಡೌನ್ ಮಾಡಿವೆ. ಬೇರೆಲ್ಲ ರಾಜ್ಯಗಳು ಟೋಟಲ್ ಲಾಕ್ ಔಟ್ ಮಾಡುತ್ತಿದ್ದರೆ, ಕರ್ನಾಟಕ ಸರಕಾರ ಕಣಿ ಕೇಳುತ್ತಾ ಕೂತಿದೆ. ಅತ್ತ ಮಾಲ್ ಗಳು ಕಾರ್ಯಾಚರಿಸುತ್ತಿವೆ. ನಮ್ಮ ಸರಕಾರ ಏನೇನೋ ದೊಡ್ಡ ದೊಡ್ಡ ಯೂಸ್ ಲೆಸ್ ಪ್ಲಾನ್ ಮಾಡುತ್ತಿದ್ದಾರೆ. ಓಪನ್ ಆಗಿ ದೊಡ್ಡ ಜನ ಜಂಗುಳಿ ಸೇರುವ ಮಾಲ್ ಗಳನ್ನೇ ಕಂಟ್ರೋಲ್ ಮಾಡಲಾಗದ ಸರಕಾರದ ಬಗ್ಗೆ ಜನಕ್ಕೆ ನಿಜಕ್ಕೂ ಅಪನಂಬಿಕೆ ಹುಟ್ಟುತ್ತಿದೆ. ಕೊರೋನಾ ಕಂಟ್ರೋಲ್ ಬಂದ ಹಾಗೆ. ಶೇಮ್ ಶೇಮ್ !!