ಲಾಕ್‌ಡೌನ್ ಆದೇಶ ಪಾಲಿಸದಿದ್ದರೆ ಕಠಿಣ ಕ್ರಮ-ಡಿ.ಸಿ.ಸಿಂಧೂ ಬಿ.ರೂಪೇಶ್

ಮಂಗಳೂರು: ಕೊರೊನಾ ಕೋವಿಡ್ -19ವೈರಸ್ ದಿನದಿಂದ ದಿನಕ್ಕೆ ಅತ್ಯಂತ ವೇಗವಾಗಿ ಹರಡುತ್ತಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮಾ.31ರವರೆಗೆ ಜಾರಿಗೆ ತಂದಿರುವ ಲಾಕ್‌ಡೌನ್ ಆದೇಶ ಪಾಲಿಸದಿದ್ದರೆ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧು ಬಿ. ರೂಪೇಶ್ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಲಾಕ್‌ಡೌನ್ ಮಾಡಿದರೂ ಅಂಗಡಿ ಮುಂಗಟ್ಟು ತೆರೆದಿದೆ.

ಜನಸಂಚಾರವೂ ಹೆಚ್ಚಾಗಿದ್ದು ಈ ಬಗ್ಗೆ ದೂರುಗಳು ಬರುತ್ತಿದ್ದು, ಈ ಆದೇಶವನ್ನು ಪ್ರತಿಯೊಬ್ಬರು ಗಂಭೀರವಾಗಿ ಪರಿಗಣಿಸಬೇಕಿದೆ. ಲಾಕ್‌ಡೌನ್ ಒಂದು ದಿನದ ವಿಷಯವಲ್ಲ, ಒಂದು ದಿನ ಕರ್ಫ್ಯೂ ಮಾಡಿದರೆ ಪರಿಹಾರ ಸಾಧ್ಯವಾಗಲ್ಲ. ಸಾಮೂಹಿಕವಾಗಿ ಈ ರೋಗ ಹರಡಲು ಆರಂಭವಾದರೆ ಇದನ್ನು ನಿಯಂತ್ರಣ ಮಾಡಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ಇದನ್ನು ಗಂಭೀರವಾಗಿ ಪರಿಗಣಿಸಿ ಕೂಡಲೇ ಅನಗತ್ಯವಾಗಿ ಓಡಾಡುವುದನ್ನು ನಿಲ್ಲಿಸಿ, ಅಂಗಡಿ ಮುಂಗಟ್ಟು ಬಂದ್ ಮಾಡಿ ಇಲ್ಲದಿದ್ದರೆ ಕಠಿಣ ಕ್ರಮಕೈಗೊಳ್ಳುವುದು ಅನಿವಾರ್ಯವಾದೀತು ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದ್ದಾರೆ.

1 Comment
  1. Clarissa.J says

    You have mentioned very interesting points! ps nice
    site.Raise your business

Leave A Reply

Your email address will not be published.