Home latest ‘ಅಮ್ಮಾ ಬೇಗ ಬಾ ಎಲ್ಲರೂ ಸೇರಿಸಿ ನನ್ನನ್ನು ಸಾಯಿಸಿ ಬಿಡುತ್ತಾರೆ’ಎಂದ ಮಗಳು ಮರುಕ್ಷಣದಲ್ಲೇ ಶವ!|ವರದಕ್ಷಿಣೆಗಾಗಿ ಅಪ್ಪನ...

‘ಅಮ್ಮಾ ಬೇಗ ಬಾ ಎಲ್ಲರೂ ಸೇರಿಸಿ ನನ್ನನ್ನು ಸಾಯಿಸಿ ಬಿಡುತ್ತಾರೆ’ಎಂದ ಮಗಳು ಮರುಕ್ಷಣದಲ್ಲೇ ಶವ!|ವರದಕ್ಷಿಣೆಗಾಗಿ ಅಪ್ಪನ ಜೊತೆಗೂಡಿ ಪತ್ನಿಯನ್ನೇ ಕೊಂದ ನೀಚ ಗಂಡ

Hindu neighbor gifts plot of land

Hindu neighbour gifts land to Muslim journalist

ನೆಲಮಂಗಲ:ವರದಕ್ಷಿಣೆಗಾಗಿ ಅಪ್ಪನ ಜೊತೆ ಪತಿ ಸೇರಿ ಪತ್ನಿಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕು ದಾಬಸ್ ಪೇಟೆಯಲ್ಲಿ ನಡೆದಿದೆ.

30 ವರ್ಷದ ರೇಖಾ ಎಂಬುವವರು ಕೊಲೆಯಾಗಿದ್ದು,ಮೃತರ ಮಾವ ನಾರಯಣಪ್ಪ ಮತ್ತು ಪತಿ ಗಿರೀಶ್​ನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.ಗಂಡನ ಮನೆಯವರೆಲ್ಲಾ ಸೇರಿ ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ತುಮಕೂರು ತುಮಕೂರು ಜಿಲ್ಲೆಯ ದಿಬ್ಬೂರು ಗ್ರಾಮದ ರೇಖಾ ಅವರನ್ನು 12 ವರ್ಷಗಳ ಹಿಂದೆ ದಾಬಸ್‌ಪೇಟೆಯ ಗಿರೀಶ್ ಜತೆ ಮದುವೆ ಮಾಡಿಕೊಡಲಾಗಿದ್ದು,ಮದುವೆಯಾದ ದಿನದಿಂದಲೂ ವರದಕ್ಷಿಣೆಗಾಗಿ ಪ್ರತಿನಿತ್ಯ ರೇಖಾರಿಗೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಕಿರುಕುಳ ನೀಡಲಾಗುತ್ತಿತ್ತು.

ಈ ಬಗ್ಗೆ ರೇಖಾ, ತಾಯಿಯ ಜೊತೆಯೂ ನೋವು ಹಂಚಿಕೊಂಡಿದ್ದರು ಎನ್ನಲಾಗಿದ್ದು,ಎರಡು ವರ್ಷಗಳಿಂದ ಈ ಹಿಂಸೆ ಹೆಚ್ಚಾಗಿತ್ತು.ಮಂಗಳವಾರ ಮನೆಯಲ್ಲಿ ಹಲ್ಲೆ ಮಾಡಿದಾಗ ಎಲ್ಲರೂ ಸೇರಿ ನನ್ನನ್ನು ಕೊಲೆ ಮಾಡಿಬಿಡುತ್ತಾರೆ ಎಂದು ರೇಖಾ ಅಂದುಕೊಂಡಿದ್ದರು.ಆದ್ದರಿಂದ ರೇಖಾ ಕೊಲೆಗೂ ಮುನ್ನ ತಾಯಿಗೆ ಕರೆ ಮಾಡಿ, ಅತ್ತಿದ್ದಾರೆ. ‘ಅಮ್ಮಾ ಬೇಗ ಬಾ, ನನ್ನನ್ನು ಎಲ್ಲರೂ ಸೇರಿಸಿ ಸಾಯಿಸಿಯೇ ಬಿಡುತ್ತಾರೆ’ ಎಂದಿದ್ದಾರೆ. ಆಗ ತಾಯಿ ‘ಹೆದರಬೇಡ, ನಾವೆಲ್ಲ ಸೇರಿ ಮಾತನಾಡುತ್ತೇವೆ, ಧೈರ್ಯಗೆಡಬೇಡ, ನಾನು ಬರುವವರೆಗೆ ನಿಶ್ಚಿಂತೆಯಿಂದ ಇರು’ ಎಂದಿದ್ದಾರೆ. ಆದರೆ ಅವರು ಬರುವಷ್ಟರಲ್ಲಿಯೇ ರೇಖಾ ರಕ್ತಸಿಕ್ತವಾಗಿ ಶವವಾಗಿ ಬಿದ್ದಿದ್ದಾರೆ.

ಮರಣೋತ್ತರ ಪರೀಕ್ಷೆಗಾಗಿ ತುಮಕೂರು ಸರ್ಕಾರಿ ಅಸ್ಪತ್ರೆಗೆ ಮೃತ ದೇಹವನ್ನು ರವಾನೆ ಮಾಡಲಾಗಿದೆ. ದಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ಸದ್ಯ ಗಂಡನ ಮನೆಯವರನ್ನು ಬಂಧಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.