ಶಿಫ್ಟ್ ಮುಗಿಯಿತೆಂದು ಅರ್ಧದಲ್ಲಿಯೇ ಪ್ರಯಾಣ ನಿಲ್ಲಿಸಿದ ಪೈಲಟ್

Share the Article

ಶಿಫ್ಟ್ ಮುಗಿದಿದ್ದರಿಂದ ವಿಮಾನವನ್ನು ಹಾರಿಸದೇ ಪೈಲಟ್ ಒಬ್ಬ ಪ್ರಯಾಣಿಕರನ್ನು ಪೇಚಿಗೆ ಸಿಲುಕಿಸಿರುವ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ.

ಪಾಕಿಸ್ತಾನ ಇಂಟರ್‌ನ್ಯಾಷನಲ್ ಏರ್‌ಲೈನ್ಸ್ (ಪಿಐಎ) ಪೈಲಟ್ ಇಂಥದ್ದೊಂದು ಕೃತ್ಯ ಎಸಗಿದ್ದಾನೆ. ಹವಮಾನ ವೈಪರಿತ್ಯದಿಂದಾಗಿ ಪಿಕೆ-9754 ವಿಮಾನವು ರಿಯಾದ್‌ನಿಂದ ಹೊರಟು ಇಸ್ಲಮಾಬಾದ್‌ನಲ್ಲಿ ಇಳಿಯಬೇಕಿದ್ದ ವಿಮಾನವು ಸೌದಿ ಅರೇಬಿಯಾದ ದಮಾಮ್‌ನಲ್ಲಿ ತುರ್ತು ಭೂಸ್ಪರ್ಶ ಮಾಡಿತ್ತು. ಹವಾಮಾನ ಸರಿಯಾದ ಮೇಲೆ ವಿಮಾನ ಹಾರಾಟಕ್ಕೆ ಸೌದಿ ಅರೇಬಿಯಾ ಅನುಮತಿ ನೀಡಿತ್ತು.

ಆದರೆ ದಿನದ ತನ್ನ ಶಿಫ್ಟ್ ಅವಧಿ ಮುಗಿದ ಹಿನ್ನೆಲೆಯಲ್ಲಿ ಮತ್ತೆ ವಿಮಾನ ಹಾರಿಸುವುದಿಲ್ಲ ಎಂದು ಪೈಲಟ್ ಹೇಳಿರುವುದರಿಂದ ಭಾರಿ ಕೋಲಾಹಲವೇ ಉಂಟಾಯಿತು. ಪೈಲಟ್‌ನ ಈ ಕ್ರಮದಿಂದ ಪ್ರಯಾಣಿಕರು ಕೆಳಕ್ಕೆ ಇಳಿಯದೇ ಅಲ್ಲಿಯೇ ಪ್ರತಿಭಟನೆ ಶುರು ಮಾಡಿದರು.

ಪರಿಸ್ಥಿತಿ ವಿಕೋಪಕ್ಕೆ ಹೋಗಿ ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು. ಆದರೆ ಏನೇ ಮಾಡಿದರೂ ಪೈಲಟ್ ಮುಂದುವರಿಯಲು ಇಷ್ಟಪಡಲಿಲ್ಲ. ಈ ಹಿನ್ನೆಲೆಯಲ್ಲಿ ವಿಮಾನದಲ್ಲಿದ್ದ ಪ್ರಯಾಣಿಕರಿಗೆ ಹೋಟೆಲ್‌ನಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಯಿತು.

Leave A Reply