ರಾತ್ರಿಬೆಳಗಾಗುವಾಗ ಬದಲಾಗಿತ್ತು ವ್ಯಕ್ತಿಯೊಬ್ಬನ ಖಾಸಗಿ ಅಂಗದ ಗಾತ್ರ!! ಅಸಹಜವಾದ ಘಟನೆಯಿಂದ ಗೂಗಲ್ ನಲ್ಲಿ ಮದ್ದು ಹುಡುಕಿದಾತ ಕೊನೆಗೆ ವೈದ್ಯರ ಮೊರೆ ಹೋದ

Share the Article

ರಾತ್ರಿ ಮಲಗಿರುವಾಗ ಸರಿಯಾಗಿಯೇ ಇದ್ದ ವ್ಯಕ್ತಿಯೊಬ್ಬನ ಖಾಸಗಿ ಅಂಗ ಬೆಳಿಗ್ಗೆ ಎದ್ದು ನೋಡುವಾಗ ಊದಿಕೊಂಡಿತ್ತು. ಇದನ್ನು ಕಂಡು ಗಾಬರಿಗೊಂಡ ಆತ ಗೂಗಲ್ ನಲ್ಲಿ ಮದ್ದು ಹುಡುಕಾಡಿ ಒಂದು ವಾರದಲ್ಲಿ ಕಮ್ಮಿ ಆಗುತ್ತದೆ ಎಂದು ಗೂಗಲ್ ತಿಳಿಸಿದ ಹಾಗೇ ಕಾದು ಕಾದು ಸೋತು ಕೊನೆಗೂ ಕಮ್ಮಿಯಾಗದೆ ಇದ್ದಾಗ ವೈದ್ಯರ ಮೊರೆ ಹೋದ ಘಟನೆಯೊಂದು ಬೆಳಕಿಗೆ ಬಂದಿದೆ.ಅಷ್ಟಕ್ಕೂ ಆತನ ಶಿಶ್ನ ಊದಿಕೊಂಡು ವಿಪರೀತ ನೋವಿಗೆ ರಾತ್ರಿ ಜೇಡರ ಕಚ್ಚಿದ್ದೇ ಕಾರಣ ಎಂಬುವುದು ತಿಳಿದಿದೆ.

ಹೌದು ಇಂತಹದೊಂದು ಘಟನೆ ನಡೆದದ್ದು ವಿದೇಶವಾದ ಯು.ಕೆ ಯಲ್ಲಿ. ಭಾರತದಲ್ಲಿ ಜೇಡ ಕಚ್ಚಿದರೆ ಹಳ್ಳಿ ಮದ್ದಿನ ಮೂಲಕ ಗುಣವಾಗುತ್ತದೆ, ಆದರೆ ಯುಕೆ ಯ ಡೇನಿಯಲ್ ಎಂಬ ವ್ಯಕ್ತಿ ಬೆಳಿಗ್ಗಾಗುವಾಗ ದಪ್ಪವಾಗಿ ಊದಿಕೊಂಡಿದ್ದ ಶಿಶ್ನದ ವಿಚಾರವನ್ನು ತನ್ನ ಗೆಳತಿಗೆ ತಿಳಿಸಿದ್ದಾನೆ. ವಿಪರೀತ ಉರಿತ ಹಾಗೂ ನೋವಿನಿಂದ ಕಂಗಲಾಗಿದ್ದ ಆತ ಮುಜುಗರದಿಂದ ಗೂಗಲ್ ನಲ್ಲಿ ಮದ್ದು ಹುಡುಕಿದ್ದಾನೆ.ವೈದ್ಯರ ಬಳಿ ತೆರಳುವ ಮೊದಲು ತನ್ನ ಮೂರ್ಖತನ ಆ ಬಳಿಕ ಆತನಿಗರಿವಾಗಿದೆ.

ಗೂಗಲ್ ಹೇಳಿದಂತೆ ಮದ್ದು ಮಾಡಿದ ಆತ, ತನ್ನ ಶಿಶ್ನ ಸಹಜ ಸ್ಥಿತಿಗೆ ಮರಳದೆ, ನೋವು ಹೆಚ್ಚಾದಾಗ ವೈದ್ಯರ ಮೊರೆ ಹೋಗಿದ್ದಾನೆ.2014 ರಲ್ಲಿ ಇಂತಹುದೇ ಘಟನೆಯೊಂದು ನಡೆದಿದ್ದು, ಅದರಲ್ಲಿ ಜೇಡರ ಕಡಿತಕ್ಕೊಳಗಾದ ವ್ಯಕ್ತಿ ನರವೈಫಲ್ಯಕ್ಕೆ ತುತ್ತಾಗಿದ್ದ.

Leave A Reply