Home Interesting ಇಸ್ಲಾಮಿಕ್ ಸಂಘಟನೆಯಾಗಿರುವ ತಬ್ಲಿಘಿ ಜಮಾತ್ ಅನ್ನು ಸಂಪೂರ್ಣವಾಗಿ ನಿಷೇಧ ಮಾಡಿದ ಸೌದಿ ಅರೇಬಿಯಾ ಸರ್ಕಾರ !!|...

ಇಸ್ಲಾಮಿಕ್ ಸಂಘಟನೆಯಾಗಿರುವ ತಬ್ಲಿಘಿ ಜಮಾತ್ ಅನ್ನು ಸಂಪೂರ್ಣವಾಗಿ ನಿಷೇಧ ಮಾಡಿದ ಸೌದಿ ಅರೇಬಿಯಾ ಸರ್ಕಾರ !!| ಇಸ್ಲಾಂ ದೇಶದಲ್ಲೇ ಇಸ್ಲಾಮಿಕ್ ಸಂಘಟನೆಯನ್ನು ಕಿತ್ತೊಗೆಯಲು ಕಾರಣ??

Hindu neighbor gifts plot of land

Hindu neighbour gifts land to Muslim journalist

ಕೊರೋನಾ ಆರಂಭಕಾಲದಲ್ಲಿ ದೊಡ್ಡ ಸುದ್ದಿ ಮಾಡಿದ್ದ ತಬ್ಲಿಘಿಗಳು ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಸೌದಿ ಅರೇಬಿಯಾ ಸರ್ಕಾರ ಸುನ್ನಿ ಇಸ್ಲಾಮಿಕ್ ಸಂಘಟನೆಯಾಗಿರುವ ತಬ್ಲಿಘಿ ಜಮಾತ್ ಅನ್ನು ತನ್ನ ದೇಶದಲ್ಲಿ ಸಂಪೂರ್ಣವಾಗಿ ನಿಷೇಧಿಸಿದೆ.

ಈ ಸಂಘಟನೆಯು ಭಯೋತ್ಪಾದನೆ ಚಟುವಟಿಕೆಗಳಿಗೆ ಹೆಬ್ಬಾಗಿಲು ಎಂದಿರುವ ಸರ್ಕಾರ ಈ ಸಂಘಟನೆಯಿಂದ ದೂರ ಇರುವಂತೆ ಪ್ರಜೆಗಳಿಗೆ ಎಚ್ಚರಿಕೆ ನೀಡಿದೆ. ಮುಂದಿನ ಶುಕ್ರವಾರದ ಪ್ರಾರ್ಥನೆಯ ಸಮಯದಲ್ಲಿ ಈ ಕುರಿತು ಜನರಿಗೆ ಮಾಹಿತಿಯನ್ನು ನೀಡಬೇಕೆಂದು ಮಸೀದಿಗಳ ಮುಖ್ಯಸ್ಥರಿಗೆ ಸೌದಿ ಇಸ್ಲಾಮಿಕ್ ವ್ಯವಹಾರಗಳ ಸಚಿವಾಲಯ ಸೂಚಿಸಿದೆ.

ಈ ಸಂಬಂಧ ಹೇಳಿಕೆ ಬಿಡುಗಡೆ ಮಾಡಿದ ಇಸ್ಲಾಮಿಕ್‌ ವ್ಯವಹಾರ ಸಚಿವ, ಶುಕ್ರವಾರ ಪ್ರಾರ್ಥನೆ ನಡೆಯುವ ವೇಳೆ ಎಲ್ಲ ಮಸೀದಿಗಳ ಮುಖ್ಯಸ್ಥರು ತಬ್ಲಿಘಿ ಮತ್ತು ದಾವಾ ಸಂಘಟನೆಯ ಬಗ್ಗೆ ಎಚ್ಚರಿಕೆ ನೀಡಿ 4 ಅಂಶಗಳ ಬಗ್ಗೆ ಹೇಳಬೇಕು ಎಂದು ತಿಳಿಸಿದ್ದಾರೆ.

ಆ 4 ಅಂಶಗಳು?

  1. ಈ ಸಂಘಟನೆಯ ಜೊತೆ ನಂಟು ಹೊಂದುವುದನ್ನು ನಿಷೇಧಿಸಲಾಗಿದೆ ಎಂಬುದನ್ನು ತಿಳಿಸಬೇಕು.
  2. ತಬ್ಲಿಘಿಗಳ ಪ್ರಮುಖ ತಪ್ಪು ನಡೆಗಳ ಬಗ್ಗೆ ವಿವರಿಸಬೇಕು.
  3. ಭಯೋತ್ಪಾನೆಗೆ ಹೆಬ್ಬಾಗಿಲು, ತಪ್ಪು ಮಾರ್ಗದರ್ಶನ ನೀಡುವ ಈ ಸಂಘಟನೆಯಿಂದ ದೂರ ಇರುವಂತೆ ಹೇಳಬೇಕು.
  4. ತಬ್ಲಿಘಿ ಸಂಘಟನೆಯಿಂದ ಸಮಾಜಕ್ಕೆ ಇರುವ ಅಪಾಯದ ಬಗ್ಗೆ ವಿವರಿಸಬೇಕು.

ತಬ್ಲಿಘಿಗಳು ಯಾರು?

ಬ್ರಿಟಿಷರ ಅವಧಿಯಲ್ಲಿ 1926 ರಲ್ಲಿ ಭಾರತದಲ್ಲಿ ಹುಟ್ಟಿಕೊಂಡ ತಬ್ಲಿಘಿ ಜಮಾತ್ ಸುನ್ನಿ ಇಸ್ಲಾಮಿಕ್ ಮಿಷನರಿ ಸಂಘಟನೆಯಾಗಿದೆ. ಮುಸ್ಲಿಂ ಸಂಪ್ರದಾಯ, ಆಚರಣೆ, ಉಡುಪುಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಎಂದು ಪ್ರತಿಪಾದಿಸುತ್ತದೆ. ಜಗತ್ತಿನಾದ್ಯಂತ 35 ರಿಂದ 40 ಕೋಟಿ ಅನುಯಾಯಿಗಳು ಇದ್ದಾರೆ ಎಂದು ಅಂದಾಜಿಸಲಾಗಿದೆ. ರಾಜಕೀಯ ಚಟುವಟಿಕೆಯಿಂದ ದೂರ ಇದ್ದು ಧರ್ಮ ಪ್ರಚಾರ ಮಾತ್ರ ನಮ್ಮ ಕೆಲಸ ಎಂದು ಸಂಘಟನೆ ಹೇಳಿಕೊಳ್ಳುತ್ತದೆ.‌

ಕಳೆದ ವರ್ಷ ಕೋವಿಡ್ ಮೊದಲ ಅಲೆಯ ಸಮಯದಲ್ಲಿ ಭಾರತದಲ್ಲಿ ಲಾಕ್‌ಡೌನ್ ನಿಯಮಗಳನ್ನು ಉಲ್ಲಂಘಿಸಿ ದೆಹಲಿಯ ನಿಜಾಮುದ್ದೀನ್ ಪ್ರದೇಶದಲ್ಲಿ ಸಾಮೂಹಿಕ ಸಭೆಯ ಆಯೋಜಿಸಿದ್ದಕ್ಕೆ ಈ ಸಂಘಟನೆಯ ವಿರುದ್ಧ ಮೊದಲ ಬಾರಿಗೆ ದೇಶದಲ್ಲಿ ಭಾರೀ ಟೀಕೆಗಳು ವ್ಯಕ್ತವಾಗಿತ್ತು.

ತಬ್ಲಿಘಿಗಳು ನೇರವಾಗಿ ಉಗ್ರ ಕೃತ್ಯದಲ್ಲಿ ಭಾಗಿಯಾದ ಬಗ್ಗೆ ಯಾವುದೇ ಉದಾಹರಣೆ ಇಲ್ಲ. ಆದರೆ ಈ ಸಂಘಟನೆ ನೀಡುವ ವಿಪರೀತ ಧರ್ಮ ಬೋಧನೆಯಿಂದ ಇದರ ಅನುಯಾಯಿಗಳು ತೀವ್ರವಾದಿ ಮುಸ್ಲಿಮ್‌ ಸಂಘಟನೆಗಳಿಗೆ ಸೇರುತ್ತಾರೆ ಎನ್ನುವುದು ಅಮೆರಿಕದ ಈವರೆಗಿನ ಆರೋಪವಾಗಿದೆ.