ಇನ್ನೊಂದು ವಾರ ಕರ್ನಾಟಕ ಪೂರ್ತಿ ಸ್ತಬ್ಧ | ಎಲ್ಲಾ ಥಿಯೇಟರ್, ಮಾಲ್, ಜಾತ್ರೆ, ಶಾಲಾ ಕಾಲೇಜುಗಳು, ಸಾರ್ವಜನಿಕ ಸಮಾರಂಭ ಬ್ಯಾನ್ | ಶಾಲಾ ಕಾಲೇಜುಗಳಿಗೆ ಮಾ.28 ರವರೆಗೆ ರಜೆ
ಇನ್ನೊಂದು ವಾರ ಕರ್ನಾಟಕ ಪೂರ್ತಿ ಸ್ತಬ್ಧವಾಗಲಿದೆ. ತೀವ್ರ ವೇಗವಾಗಿ ಹಬ್ಬುತ್ತಿರುವ ಕೊರಾನಾ ವೈರಸ್ ನ ನಿಯಂತ್ರಣಕ್ಕೆ ರಾಜ್ಯ ಸರಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.
ಒಂದು ವಾರದವರೆಗೆ ಎಲ್ಲಾ ಥಿಯೇಟರ್, ಮಾಲ್,ಮದುವೆ, ಜಾತ್ರೆ, ಶಾಲಾ ಕಾಲೇಜುಗಳು, ಸಾರ್ವಜನಿಕ ಸಮಾರಂಭ ಹೀಗೆ, ಪ್ರತಿಯೊಂದು ಜನ ಜಂಗುಳಿ ಸೇರುವ ಕಾರ್ಯಕ್ರಮ ನಿಷೇಧ. ಒಂದೊಮ್ಮೆ ಪರೀಕ್ಷೆಗಳು ನಡೆಯುತ್ತಿದ್ದರೆ ಆ ಸಂದರ್ಭಗಳಲ್ಲಿ ಪರೀಕ್ಷೆ ನಡೆಸಲು ಅನುಮತಿ ನೀಡಲಾಗಿದೆ. ವಿಶ್ವವಿದ್ಯಾಲಯದ ನಿಲಯಗಳು ಕೂಡ ಬಾಗಿಲು ಮುಚ್ಚಿ ಕೂರಲಿವೆ.
15 ದಿನ ಎಲ್ಲಾ ಸರಕಾರಿ ಮತ್ತು ಖಾಸಗಿ ಶಾಲಾ ಕಾಲೇಜುಗಳಿಗೆ ರಜೆ ಮಾ.28 ರ ವರೆಗೆ ರಜೆ ಘೋಷಿಸಲಾಗಿದೆ.
ಮದುವೆ ಈಗಾಗಲೇ ಫಿಕ್ಸ್ ಆಗಿದ್ದರೆ ಸರಳವಾಗಿ ನೂರು ಜನರೊಳಗೆ ಮದುವೆ ನಡೆಸಲು ಆದೇಶ ನೀಡಲಾಗಿದೆ.
ಮುಂದಿನ ವಾರ ನಡೆಯಬೇಕಿದ್ದ ಎಲ್ಲಾ ಪರೀಕ್ಷೆ ಮುಂದೂಡಿಕೆಯಾಗಲಿದೆ. ಎಸ್ ಎಸ್ ಎಲ್ ಸಿ ಮತ್ತಿತರ ಪರೀಕ್ಷೆಗಳು ಎಂದಿನಂತೆ ನಡೆಯಲಿದೆ. ಐಟಿ ಕಂಪೆನಿಯವರಿಗೆ ಸಾಧ್ಯವಾದಷ್ಟು ಮಟ್ಟಿಗೆ ‘ವರ್ಕ್ ಫ್ರಂ ಹೋಮ್ ‘ ಮಾಡಲು ಈಗಾಗಲೇ ಸೂಚನೆ ನೀಡಿದ್ದೇವೆ. ಅಧಿವೇಶನ ನಡೆಯುತ್ತಿದ್ದು ಅದು ಎಂದಿನಂತೆ ನಡೆಯುತ್ತದೆ. ಸರ್ಕಾರಿ ಕಚೇರಿಗಳು ಎಂದಿನಂತೆ ನಡೆಯುತ್ತವೆ ಎಂದು ಸಿಎಂ ಯಡಿಯೂರಪ್ಪ ಹೇಳಿದರು.
ಇಂದು ತೆಗೆದುಕೊಂಡ ನಿರ್ಧಾರವು ಇಡೀ ಕರ್ನಾಟಕ ರಾಜ್ಯಕ್ಕೆ ಅನ್ವಯವಾಗಲಿದೆ. ಸಾರ್ವಜನಿಕರ ಹಿತದಷ್ಠಿಯಿಂದ ಈ ತೀರ್ಮಾನವನ್ನು ಕೈಗೊಂಡಿದ್ದೇವೆ ಎಂದು ಸಿಎಂ ಅವರು ತಿಳಿಸಿದರು.
ಫ್ಲಾಶ್ ನ್ಯೂಸ್ : IPL ಏಪ್ರಿಲ್ 15 ಕ್ಕೆ ಮುಂದೂಡಿಕೆ ಯಾಗಿದೆ