Home Food ಮದುವೆ ಹಾಲ್ ಗೆ ಬೆಂಕಿ ಬಿದ್ದರೂ ನಿಶ್ಚಿಂತೆಯಿಂದ ಮೃಷ್ಟಾನ್ನ ಭೋಜನ ಸವಿದ ಅತಿಥಿಗಳು !! |...

ಮದುವೆ ಹಾಲ್ ಗೆ ಬೆಂಕಿ ಬಿದ್ದರೂ ನಿಶ್ಚಿಂತೆಯಿಂದ ಮೃಷ್ಟಾನ್ನ ಭೋಜನ ಸವಿದ ಅತಿಥಿಗಳು !! | ಏನೂ ಪರಿವಿಲ್ಲದೆ ರಕ್ಕಸರಂತೆ ಊಟ ಮಾಡುತ್ತಿರುವವರ ವೀಡಿಯೋ ಫುಲ್ ವೈರಲ್

Hindu neighbor gifts plot of land

Hindu neighbour gifts land to Muslim journalist

ಈಗ ಅದ್ಧೂರಿ ಮದುವೆಗಳ ಸುಗ್ಗಿ ಕಾಲ. ಪ್ರತಿಯೊಬ್ಬರಿಗೂ ಸ್ವರ್ಗದಲ್ಲೇ ಮದುವೆಯಾಗುವ ಹಂಬಲ. ಮದುವೆ ಅಂದ್ರೇನೇ ಹಾಗೇ, ಅಲ್ಲಿ ನಡೆಯುವ ಸಂತಸ ಸಂಭ್ರಮದ ಕ್ಷಣಗಳಿಗೆ ಕೊರತೆ ಇರುವುದಿಲ್ಲ. ಇನ್ನು ಮದುವೆ ಮನೆಯ ಊಟವಂತೂ ಅದೊಂದು ಪ್ರತ್ಯೇಕ ಅಧ್ಯಾಯವೇ.

ಮದುವೆ ಚೆನ್ನಾಗಿತ್ತು ಎಂದರೆ, ಮದುವೆ ಊಟ ತುಂಬಾ ಸೊಗಸಾಗಿತ್ತು ಎಂದರ್ಥ ಎಂಬ ಮಾತಿದೆ. ಮದುವೆಯಲ್ಲಿ ಊಟಕ್ಕೆ ತೆರಳಲು ಕೆಲವರಿಗೆ ಅವಸರವಾದರೆ, ಇನ್ನೂ ಕೆಲವರಿಗೆ ಭರ್ಜರಿ ಭೋಜನ ಸವಿಯುವ ಆಸೆ. ಅದರಲ್ಲೂ ಕೆಲವರು ಯಾವುದೇ ಯೋಚನೆಯಿಲ್ಲದೆ ಊಟ ಮಾಡುವುದರಲ್ಲೇ ಮಗ್ನರಾಗಿರುತ್ತಾರೆ. ಇದಕ್ಕೆ ತಾಜಾ ಉದಾಹರಣೆಯಂತಿದೆ ಈ ವಿಡಿಯೋ.

ಹೌದು, ಇಲ್ಲೊಂದು ಕಡೆ ಮದುವೆ ಹಾಲ್‍ಗೆ ಬೆಂಕಿ ಬಿದ್ದರೂ ನಿರ್ಲಕ್ಷಿಸಿದ ಅತಿಥಿಗಳು ಭೋಜನ ಸವಿಯುವುದರಲ್ಲೇ ತಲ್ಲೀನರಾದ ವಿಚಿತ್ರ ಘಟನೆಯೊಂದು ನಡೆದಿದೆ. ಅಷ್ಟಕ್ಕೂ ಈ ಘಟನೆ ನಡೆದಿದ್ದು ಎಲ್ಲಿ ಗೊತ್ತಾ?? ಮಹಾರಾಷ್ಟ್ರ ಥಾಣೆಯಲ್ಲಿ.

ಥಾಣೆ ಜಿಲ್ಲೆಯ ಭಿವಂಡಿ ಸಮೀಪದ ಅನ್ಸಾರಿ ಮದುವೆ ಹಾಲ್‍ನಲ್ಲಿ ಭಾನುವಾರ ರಾತ್ರಿ ಬೆಂಕಿ ಭುಗಿಲೆದ್ದಿತ್ತು. ಮದುವೆ ಹಾಲ್ ಸಮೀಪದ ಸ್ಟೋರ್ ರೂಮಿನಿಂದ ಬೆಂಕಿ ಹರಡಿದೆ ಎನ್ನಲಾಗಿದೆ. ಜೊತೆಗೆ ಪಕ್ಕದಲ್ಲೇ ನಿಲ್ಲಿಸಿದ್ದ ಹಲವಾರು ದ್ವಿಚಕ್ರ ವಾಹನಗಳು ಬೆಂಕಿಗೆ ಆಹುತಿಯಾಗಿವೆ. ಇದನ್ನು ನೋಡಿಯೂ ನಿರ್ಲಕ್ಷಿಸಿದ ಅತಿಥಿಗಳು ಭೋಜನ ಸವಿಯುವುದರಲ್ಲೇ ಮಗ್ನರಾಗಿದ್ದಾರೆ. ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಇದೀಗ ‌ವೈರಲ್ ಆಗಿದೆ.

ಅಷ್ಟಕ್ಕೂ ಅಲ್ಲಿ ನಡೆದಿದ್ದೇನು?

ಮದುವೆ ಹಾಲ್‍ನಲ್ಲಿ ಏಕಾಏಕಿ ಬೆಂಕಿ ಹೊತ್ತಿಕೊಂಡಿದೆ. ಈ ವೇಳೆ ಅತಿಥಿಗಳು ಊಟ ಮಾಡುತ್ತಿದ್ದರು. ಬೆಂಕಿ ಬಿದ್ದಿರುವುದನ್ನು ನೋಡುತ್ತಿದ್ದ ಅತಿಥಿಗಳು ಹೊತ್ತಿ ಉರಿಯುತ್ತಿರುವ ಬೆಂಕಿಯನ್ನು ನೋಡುತ್ತಾ ಏನೂ ನಡೆದೇ ಇಲ್ಲ ಎಂಬಂತೆ ಭೋಜನ ಸವಿಯುತ್ತಿದ್ದರು. ಈ ದೃಶ್ಯವನ್ನು ಅಲ್ಲಿದ್ದ ಹಲವರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.

ರವೀಂದ್ರ ಎಂಬವರು ಈ ವೀಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆ ಮೂಲಕ ಹಂಚಿಕೊಂಡಿದ್ದಾರೆ. ಇದಕ್ಕೆ ಸಾಕಷ್ಟು ಕಾಮೆಂಟ್ಸ್ ಬಂದಿದ್ದು, ಊಟ ಮಾಡುತ್ತಿದ್ದ ಅತಿಥಿಗಳಿಗೆ ಕಾಮೆಂಟ್ ಮೂಲಕ ಬೈಗುಳದ ಸುರಿಮಳೆಯೇ ಸುರಿದಿದೆ.