Home News ಈತನಿಗೆ ಪ್ರತೀ 3 ದಿನಕ್ಕೊಬ್ಬಳು ಹೊಸ ಹುಡುಗಿ ಬೇಕಂತೆ |ಅಂದಹಾಗೆ ಇವರೆಗೂ ಆತ ಮಲಗಿದ್ದು ಬರೊಬ್ಬರಿ...

ಈತನಿಗೆ ಪ್ರತೀ 3 ದಿನಕ್ಕೊಬ್ಬಳು ಹೊಸ ಹುಡುಗಿ ಬೇಕಂತೆ |
ಅಂದಹಾಗೆ ಇವರೆಗೂ ಆತ ಮಲಗಿದ್ದು ಬರೊಬ್ಬರಿ 5000 ಮಹಿಳೆಯರ ಜೊತೆ, ದಾಖಲೆಗೆ ಇರಲೆಂದು ಎಲ್ಲರ ಡೀಟೆಲ್ಸ್ ಅನ್ನು ಎಕ್ಸೆಲ್ ಶೀಟಿನಲ್ಲಿ  ಬರೆದಿಟ್ಟಿದ್ದಾನಂತೆ ಈ ಮಹಾನ್ ಸಾಧಕ !!

Hindu neighbor gifts plot of land

Hindu neighbour gifts land to Muslim journalist

ಸೆಕ್ಸ್ ಕ್ಷೇತ್ರದಲ್ಲಿ ಮತ್ತು ಕಾಮಶಾಸ್ತ್ರದಲ್ಲಿ ದಿನಕ್ಕೊಬ್ಬರು ಹೊಸ ತಾರೆಯರ ಉದಯವಾಗುತ್ತಿದೆ. ಇಲ್ಲಿ ಒಬ್ಬರಿಗಿಂತ ಒಬ್ಬರದು ವಿಭಿನ್ನ ಸಾಧನೆ (!?). ಇವತ್ತಿನ ಈ ವ್ಯಕ್ತಿಯ ಸಾಧನೆ, ನೂರಲ್ಲ, ಇನ್ನೂರಲ್ಲ. ಸಾವಿರ ಆತನಿಗೆ ಸರಿಸಮವಲ್ಲ. ಆತ ಈಗಾಗಲೇ 5000 ರನ್ ಪೇರಿಸಿ, ಇನ್ನೂ ಕ್ರೀಸಿನಲ್ಲಿ ಔಟಾಗದೆ ಉಳಿದಿದ್ದಾನೆ !!

ಆತನ ಸಾಧನೆಯ ಅಂಕಿ ಅಂಶ ಕೇಳಿದ್ರೆ ಎಂಥವರೂ ಬೆಚ್ಚಿ ಬಿದ್ದು ಬಿಡುತ್ತಾರೆ. ಆತ ತನ್ನ ಐಷಾರಾಮಿ ಬದುಕಿನಲ್ಲಿ (ಈವರೆಗೆ ಲೆಕ್ಕಕ್ಕೆ ಸಿಕ್ಕವರಲ್ಲಿ) ಅತೀ ಹೆಚ್ಚು ಮಹಿಳೆಯರೊಂದಿಗೆ ಲೈಂಗಿಕ ಸಂಭೋಗಗಳನ್ನು ನಡೆಸಿದ್ದಾನೆ. 5000 ಕ್ಕೂ ಅಧಿಕ ಸ್ತ್ರೀಯರ ಜತೆ ಯಶಸ್ವಿ ಆಟ ಆಡಿದ ಮಹಾ ಕಿಲಾಡಿ ಆತ !!

ಆತ ತಾನು ಸೆಕ್ಸ್ ಮಾಡುವುದು ಮಾತ್ರವಲ್ಲ, ಅದರ ವಿವರಗಳನ್ನೆಲ್ಲ ಎಕ್ಸೆಲ್ ಶೀಟಿನಲ್ಲಿ ದಾಖಲೆಯಾಗಿ ಬರೆದಿಟ್ಟಿದ್ದಾನೆ. ಬಹುಶಃ ಲೆಕ್ಕ ಹಾಕಿಕೊಂಡೆ ಆತ ಹೆಂಗಸರ ಪಕ್ಕ ಮಲಗುತ್ತಿದ್ದನೆಂದು ಕಾಣುತ್ತೆ. ಲೆಕ್ಕ ತಪ್ಪದೆ ಇರಲಿ ಎಂದು ಎಕ್ಸೆಲ್ ಶೀಟ್ ನಲ್ಲಿ ಪೂರ್ತಿ ವಿವರ ಜೋಡಿಸಿ ಇಟ್ಟಿದ್ದಾನೆ.57 ವರ್ಷದ ಬಿಲಿಯನೇರ್ ಮತ್ತು ಸಿಕ್ವೊಯಾ ಕ್ಯಾಪಿಟಲ್‌ನ ಪಾಲುದಾರ ಮೈಕೆಲ್ ಗೊಗುನ್ ವಿರುದ್ಧ ನಾಲ್ಕು ಮಾಜಿ ಉದ್ಯೋಗಿಗಳು ಸರಿಸುಮಾರು 800 ಮಿಲಿಯನ್ ಡಾಲರ್ ಪರಿಹಾರ ಕೋರಿ ಮೊಕದ್ದಮೆ ಹೂಡಿದಾಗ ಆತನ ಸಾಧನೆಯ ಬಂಡವಾಳ ಹೊರಕ್ಕೆ ಬಿದ್ದಿದೆ.

ಆತನ ಈ ವಿಕೃತ ಸಾಧನೆಯ ಬಗ್ಗೆ ನಮಗೆ ಅರಿವಾಗಬೇಕಾದರೆ ಒಂದಷ್ಟು ಲೆಕ್ಕಾಚಾರ ಮಾಡುವುದು ಅಗತ್ಯ. ಈಗ ಆತನಿಗೆ 57 ವರ್ಷ. ಆತ ಸಂಭೋಗ ಮಾಡಿದ ಒಟ್ಟು ಮಹಿಳೆಯರ ಸಂಖ್ಯೆ 5000. ತನ್ನ 17 ವರ್ಷಕ್ಕೆ ಆತ ಸೆಕ್ಸ್ ನಲ್ಲಿ ತೊಡಗಿಕೊಂಡ ಎಂದುಕೊಳ್ಳೋಣ. ಅಂದರೆ ಒಟ್ಟು 40 ವರ್ಷ ಆತ ಹೊಸ ಹೊಸ ಸ್ತ್ರೀ ಸುಖವನ್ನು ಅನುಭವಿಸುತ್ತಾ ಬಂದಿದ್ದಾನೆ. ಅಂದರೆ ವರ್ಷಕ್ಕೆ 125 ವಿಭಿನ್ನ ನವ ಜವ್ವನೆಯರ ಜತೆ ಆತ ಸೆಕ್ಸ್ ಮಾಡಿದ್ದಾನೆ. ಅಂದರೆ, 3 ದಿನಕ್ಕೆ ಒಂದು ಹೊಸ ಹುಡುಗಿ !!

ಅತ ಸೆಕ್ಸ್ ಮಾಡಲು ಯುವತಿಯರನ್ನು ಕರೆದೊಯ್ಯುಲೊಂದೇ ಹಲವಾರು ಸೇಫ್ ಹೌಸ್‌ಗಳನ್ನು ಹೊಂದಿದ್ದಾನೆ. ಮತ್ತು ತನ್ನ ಅಕ್ರಮ ಲೈಂಗಿಕ ಚಟುವಟಿಕೆಗಳಿಗೆ ಮಹಿಳೆಯರನ್ನು ಕರೆದೊಯ್ಯುವ ಉದ್ದೇಶಕ್ಕಾಗಿ ಈತ ತನ್ನ ಮಾಲೀಕತ್ವದ ಬಾರ್‌ನಲ್ಲಿ “ಬೂಮ್ ಬೂಮ್” ಎಂಬ ಕೋಣೆ ಇರಿಸಿದ್ದಾನೆ ಎನ್ನಲಾಗಿದೆ. ಅಲ್ಲಿನ ಸ್ಥಳೀಯ ಬಾರ್‌ನಲ್ಲಿ ನೆಲಮಾಳಿಗೆಯಲ್ಲಿ ಆತ ಒಂದು  ‘ಬೂಮ್ ಬೂಮ್’ ಕೊಠಡಿಯಲ್ಲಿ ನಡೆಸಿದ ಕಾಮದಾಟದ ದಾಖಲೆಗಳನ್ನು ಇಟ್ಟುಕೊಂಡಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಸಿಲಿಕಾನ್ ವ್ಯಾಲಿಯ ಈ ಬಿಲಿಯನೇರ್ ವಿರುದ್ಧ ದಾಖಲಾದ ಆಘಾತಕಾರಿ ಸಿವಿಲ್ ದೂರಿನಲ್ಲಿ ಆತ ಹದಿಹರೆಯದವರು ಸೇರಿದಂತೆ ಅನೇಕ ಯುವತಿಯರ ಜೊತೆ ಮಲಗಿದ್ದರು ಎಂದು ಆರೋಪಿಸಲಾಗಿದೆ. ಇದರ ಜತೆ, ಗೊಗುಯೆನ್ ತನ್ನ ಭದ್ರತಾ ಮುಖ್ಯಸ್ಥರಿಗೆ ವಿರೋಧಿಗಳನ್ನು ಕೊಲ್ಲುವಂತೆ ಆದೇಶಿಸಿದ ಆರೋಪಗಳು ಕೂಡಾ, ಮೊಂಟಾನಾದ ಅಮೆರಿಕಾದ ಡಿಸ್ಟ್ರಿಕ್ಟ್ ಕೋರ್ಟ್‌ನಲ್ಲಿ ಸಲ್ಲಿಸಲಾದ ದೂರಿನಲ್ಲಿವೆ. ಆದರೆ ಅವರ ವಕೀಲರು ಇದನ್ನು ಸುಳ್ಳು ಎಂದು ಅಲ್ಲಗಳೆದಿದ್ದಾರೆ.

ಇಬ್ಬರು ಮಕ್ಕಳನ್ನು ಹೊಂದಿರುವ ಈ ವಿವಾಹಿತ ಬಿಲಿಯನೇರ್
ನ ಕಾಮ ತೃಷೆ ಸದ್ಯಕ್ಕೆ ಮುಗಿಯೋ ರೀತಿ ಕಾಣಿಸ್ತಿಲ್ಲ.
ನ್ಯೂಯಾರ್ಕ್ ಪೋಸ್ಟ್‌ನ ಈ ವರದಿಯ ಪ್ರಕಾರ, 135 ಪುಟಗಳ ದೂರಿನಲ್ಲಿ 800 ಮಿಲಿಯನ್‌ ಡಾಲರ್‌ಗಿಂತಲೂ ಹೆಚ್ಚಿನ ಪರಿಹಾರ ಕೋರಲಾಗಿದೆ. ಈ ಮೊಕದ್ದಮೆಯನ್ನು ನಾಲ್ವರು ಮಾಜಿ ಉದ್ಯೋಗಿಗಳು ಹೂಡಿದ್ದಾರೆ. ಗೊಗುಯೆನ್ ಈ ಮಹಿಳೆಯರನ್ನು ತನ್ನೊಂದಿಗೆ ವಿಕೃತ ಲೈಂಗಿಕ ಕ್ರಿಯೆಗಳನ್ನು ಮಾಡಲು ಮತ್ತು ‘ಗೋಗುಯೆನ್ ಲೈಂಗಿಕ ಉದ್ಯಮ’ದ ಬಗ್ಗೆ ಎಲ್ಲೂ ಮಾತನಾಡದೇ ಇರಲು ಮಹಿಳೆಯರಿಗೆ ಉಡುಗೊರೆಗಳನ್ನು ನೀಡುತ್ತಿದ್ದ ಎಂದು ಆರೋಪಿಸಲಾಗಿದೆ.

ಯಾರು ಈ ಗೊಗುಯೆನ್?! ಈತ ಏನೂ ಸಾಮಾನ್ಯ ವ್ಯಕ್ತಿಯಲ್ಲ. ಆತನೊಬ್ಬ ಬಿಲಿಯನೇರ್.
ಗೊಗುಯೆನ್ ಮಾಲೀಕತ್ವದ ಭದ್ರತಾ ಸಂಸ್ಥೆಯ ಅಮಿಂಟರ್ ಗ್ರೂಪ್ ಕಂಪನಿಯು ಆ್ಯಪಲ್, ಸಿಸ್ಕೋ, ಗೂಗಲ್, ಯೂಟ್ಯೂಬ್, ಪೇಪಾಲ್ ಮತ್ತು ಇನ್‌ಸ್ಟಾಗ್ರಾಮ್‌ನಂತಹ ಉನ್ನತ ಸಂಸ್ಥೆಗಳಿಗೆ ಹಣಕಾಸಿನ ಸಹಾಯ ಮಾಡಿತ್ತು. ಇದು ಮೈಕೆಲ್ ಗೊಗುನ್ ಅನ್ನು ಯಶಸ್ಸಿನ ಉತ್ತುಂಗಕ್ಕೆ ಏರಿಸಿತ್ತು.
ಮಾರುಕಟ್ಟೆಯಲ್ಲಿ ಬಂಡವಾಳ ಹೂಡಿಕೆ ಮಾಡುವ ತಂತ್ರಗಳ ಬಗ್ಗೆ ಮಾಡಿರುವ ಸಾಧನೆಗಾಗಿ, ಈ ಬಿಲಿಯನೇರ್ ಉದ್ಯಮಿ ಫೋರ್ಬ್ಸ್ ಮಿಡಾಸ್ ಪಟ್ಟಿಯಲ್ಲಿ ಆಗಾಗ್ಗೆ ಹೆಸರಿಸಲ್ಪಟ್ಟಿದ್ದಾರೆ.
ಮೂಲಗಳ ಪ್ರಕಾರ ಗೊಗುಯೆನ್ ಇನ್ನೂ 5 ಬಿಲಿಯನ್‌ ಡಾಲರ್‌ಗಿಂತ ಹೆಚ್ಚು ಮೌಲ್ಯದ ಆಸ್ತಿಗೆ ಒಡೆಯನಾಗಿದ್ದಾನೆ. ಈಗ ಅದರಲ್ಲಿ ಈಗ 800 ಮಿಲಿಯನ್ ಡಾಲರುಗಳಿಗೆ ಸಂಚಕಾರ ಬಂದಿದೆ ಎನ್ನಬಹುದು. ಅದು ಆತನಿಗೆ ಸಣ್ಣ ಮೊತ್ತ. ದೊಡ್ಡ ಲಿಸ್ಟಿನ ಸೆಕ್ಸ್ ನ ಮುಂದೆ ಇವೆಲ್ಲವೂ ಗೌಣ. ಯಾರಿಗ್ಗೊತ್ತು: ಹುಡುಗಿಯರನ್ನು ಒಲಿಸಿಕೊಳ್ಳಲು ಬೇಕಾದಷ್ಟು ದುಡ್ಡು ಮತ್ತು ಮತ್ತಷ್ಟು ಹಸಿವು ಉಳ್ಳ ಆತ ದಶ ಸಹಸ್ರದ (10000) ಗಡಿ ದಾಟಿದರೂ ಅಚ್ಚರಿಯಿಲ್ಲ !!