Home News ಕುರ್ಚಿಯಲ್ಲಿ ಕುಳಿತುಕೊಂಡು ಕಲ್ಲಂಗಡಿ ಹಣ್ಣು ತಿನ್ನುತ್ತಿದ್ದ ಮಹಿಳೆಯ ಬಳಿ ಬಂದು ಸೊಂಡಿಲಿನಿಂದ ಹಣ್ಣು ಕದ್ದು ತಿಂದ...

ಕುರ್ಚಿಯಲ್ಲಿ ಕುಳಿತುಕೊಂಡು ಕಲ್ಲಂಗಡಿ ಹಣ್ಣು ತಿನ್ನುತ್ತಿದ್ದ ಮಹಿಳೆಯ ಬಳಿ ಬಂದು ಸೊಂಡಿಲಿನಿಂದ ಹಣ್ಣು ಕದ್ದು ತಿಂದ ಆನೆ!! | ತುಂಟ ಆನೆಯ ವೀಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಅಪ್ಲೋಡ್ ಮಾಡಿದ ಮಹಿಳೆ

Hindu neighbor gifts plot of land

Hindu neighbour gifts land to Muslim journalist

ಪ್ರತಿದಿನ ಹಲವಾರು ಮುದ್ದಾದ ಪ್ರಾಣಿಗಳ ವೀಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತವೆ. ಪ್ರಾಣಿಗಳ ತುಂಟಾಟ, ಅವುಗಳು ಮನುಷ್ಯನೊಂದಿಗೆ ಹೊಂದಿರುವ ಸಂಬಂಧಗಳೆಲ್ಲವೂ ನೆಟ್ಟಿಗರ ಮನಸೆಳೆಯುತ್ತವೆ. ಹಾಗಾಗಿ ಪ್ರಾಣಿಗಳ ವೀಡಿಯೋಗಳು ತುಂಬಾ ವೈರಲ್ ಆಗುತ್ತವೆ.

ಹಾಗೆಯೇ ಇದೀಗ ಆನೆಯೊಂದರ ವೀಡಿಯೋ ವೈರಲ್ ಆಗಿದೆ. ಈಗ ಅಂತರ್ಜಾಲದಲ್ಲಿ ಹರಿದಾಡುತ್ತಿರುವಂತಹ ಹೊಸ ವಿಡಿಯೋದಲ್ಲಿ ಈ ಆನೆ ಅಂತಹದ್ದೇನು ಮಾಡಿದೆ ಅಂತ ನಿಮಗೆ ಕುತೂಹಲ ಇರಬೇಕಲ್ಲವೇ? ಬನ್ನಿ ಅದೇನೆಂದು ತಿಳಿದುಕೊಳ್ಳೋಣ.

ಸಾಮಾಜಿಕ ಮಾಧ್ಯಮವಾದ ಇನ್‌ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್ ಮಾಡಲಾದ ವೀಡಿಯೋದಲ್ಲಿ, ಒಬ್ಬ ಮಹಿಳೆ ಕುರ್ಚಿಯಲ್ಲಿ ಕುಳಿತು ಕಲ್ಲಂಗಡಿ ಹಣ್ಣು ತಿನ್ನುತ್ತಿದ್ದಾಳೆ. ಇದ್ದಕ್ಕಿದ್ದಂತೆ ಆನೆಯೊಂದು ಬಂದು ತನ್ನ ಸೊಂಡಿಲಿನಿಂದ ಮಹಿಳೆಯ ತೊಡೆಯ ಮೇಲೆ ಇದ್ದ ಕಲ್ಲಂಗಡಿಯನ್ನು ತನ್ನ ಸೊಂಡಿಲಿನಿಂದ ಎತ್ತಿಕೊಂಡು ಅದರ ಬಾಯಿಗೆ ಹಾಕಿಕೊಳ್ಳುತ್ತದೆ. ಆದರೆ ಆನೆ ಕಲ್ಲಂಗಡಿ ಹಣ್ಣನ್ನು ಪೂರ್ತಿಯಾಗಿ ತಿಂದರೂ, ಆ ಮಹಿಳೆ ಮಾತ್ರ ನಗುತ್ತಲೇ ನಿಂತಿದ್ದಳು.

ಆನ್‌ಲೈನ್‌ನಲ್ಲಿ ವೀಡಿಯೋವನ್ನು ಪೋಸ್ಟ್ ಮಾಡಲಾದಾಗಿನಿಂದ, ನೆಟ್ಟಿಗರು ಅನೇಕ ರೀತಿಯಲ್ಲಿ ತಮ್ಮ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಇಲ್ಲಿಯವರೆಗೆ ಈ ವೀಡಿಯೋವನ್ನು 2,53,000ಕ್ಕೂ ಹೆಚ್ಚು ಜನರು ವೀಕ್ಷಿಸಿದ್ದು, ಇದನ್ನು 17,000ಕ್ಕೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ. ಈ ವೀಡಿಯೋದ ಕಾಮೆಂಟ್ಸ್ ವಿಭಾಗವು ಹೃದಯ ಮತ್ತು ನಗುವ ಎಮೋಜಿಗಳಿಂದ ತುಂಬಿ ತುಳುಕುತ್ತಿದೆ ಎಂದು ಹೇಳಬಹುದು.

ಈ ವೀಡಿಯೋ ಹಂಚಿಕೊಂಡಿರುವ ಮಹಿಳೆ ಮೋಕ್ಷ ಪ್ರಾಣಿ ಪ್ರೇಮಿಯಾಗಿದ್ದು ಮತ್ತು ಅವರ ಇನ್‌ಸ್ಟಾಗ್ರಾಮ್ ಫೀಡ್ ಪ್ರಾಣಿ ವೀಡಿಯೋಗಳಿಂದ ತುಂಬಿದೆ. ಅವರು ಆಗಾಗ್ಗೆ ಪ್ರಾಣಿಗಳೊಂದಿಗೆ ಆಟ ಆಡುವುದನ್ನು ಮತ್ತು ಮೋಜು ಮಾಡುವುದನ್ನು ಕಾಣಬಹುದು. ಒಂದು ವೀಡಿಯೋದಲ್ಲಿ ಅವರು ಆನೆಯೊಂದಿಗೆ ನೀರಿನಲ್ಲಿ ಆಟ ಆಡುವುದನ್ನು ನೋಡಬಹುದಾಗಿದೆ.